ದೊಡ್ಡಬಳ್ಳಾಪುರ : ತಾಲೂಕಿನ ಹೊಸಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ದ್ವಿತಿಯ ದರ್ಜೆ ನೌಕರರಾದ ಕೆ.ಟಿ.ಮಹದೇಶ್ ಅವರ ವಯೋನಿವೃತ್ತಿ ಹಿನ್ನೆಲೆಯಲ್ಲಿ ಭಾನುವಾರ ಅವರನ್ನು ಸನ್ಮಾನಿಸಲಾಯಿತು.
ಸಾರ್ವಜನಿಕ ಆಸ್ಪತ್ರೆ ಹೊಸಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯಾಧಿಕಾರಿ ಡಾ.ಶ್ವೇತ ನಾಯಕ್,ನಿವೃತ್ತರಾದ ಮಹದೇಶ್ ಅವರ ಸೇವೆಯನ್ನು ಸ್ಮರಿಸಿದರು.
ಸಹೋದ್ಯೋಗಿಗಳು ಮಹದೇಶ್ ಅವರ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ.ಅವರ ಜೊತೆಯಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿನ ಸಂಗತಿಗಳನ್ನು ಮೆಲುಕು ಹಾಕಿದರು. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಈ ವೇಳೆ ವೈದ್ಯಾದಿಕಾರಿಗಳಾದ ಡಾ.ಯೋಗೇಂದ್ರ,ಡಾ.ನಕುಲ್,ಡಾ.ಸಚಿನ್,ಸಿಬ್ಬಂದಿಗಳಾದ ಜಯಮ್ಮ,ಸಾವಿತ್ರಮ್ಮ,ಮದ್ದೂರಮ್ಮ,ಜಯಲಕ್ಷ್ಮಮ್ಮ,ಲಕ್ಷ್ಮೀನಾರಾಯಣಮ್ಮ,ಧನಂಜಯ್,ವೆಂಕಟಾಚಲಪತಿ,ರಾಘವೇಂದ್ರ,ಲಕ್ಷ್ಮಮ್ಮ,ಮಂಜುನಾಥ್,ರುದ್ರಮ್ಮ,ಮುಖಂಡರಾದ ನರಸಿಂಹರಾಜು,ನರಸಿಂಹಮೂರ್ತಿ, ರಾಮಾಚಾರಿ ಸೇರಿದಂತೆ ಹೊಸಹಳ್ಳಿ ವ್ಯಾಪ್ತಿಯ ಇಪ್ಪತ್ತಕ್ಕು ಹೆಚ್ಚು ಆಶಾ ಕಾರ್ಯಕರ್ತೆಯರು ಹಾಜರಿದ್ದರು.