ಬೆಂಗಳೂರು : ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿ. ಸೆರೆವಾಸ ಅನುಭವಿಸುತ್ತಿರುವ ಅಮೂಲ್ಯ ಲಿಯೋನಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಲಯ ನಿರಾಕರಿಸಿದೆ.
ದೇಶ ದ್ರೋಹ ಮಾಡಿರುವ ಅಮೂಲ್ಯ ತಲೆಮರೆಸಿಕೊಳ್ಳುವ ಸಾಧ್ಯತೆಯಿದ್ದು ಜಾಮೀನಜ ನೀಡಬಾರದು ಎಂಬ ವಾದವನ್ನು ನ್ಯಾಯಾಲಯವು ಮಾನ್ಯಮಾಡಿದೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಫೆ.20ರಂದು ನಡೆದಿದ್ದ ಸಿಎಎ,ಎನ್ ಆರ್ ಸಿ ವಿರೋಧಿಸಿ ನಡೆದಿದ್ದ ಸಮಾವೇಶದಲ್ಲಿ ಎಡಪಂಥೀಯ ಚಿಂತಕಿ ಎಂದೇ ಕರೆಸಿಕೊಳ್ಳುತ್ತಿದ್ದ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಹಿನ್ನೆಲೆಯಲ್ಲಿ, ಉಪ್ಪಾರಪೇಟೆ ಪೊಲೀಸರು ಬಂಧಿಸಿ,ರಾಷ್ಟ್ರ ದ್ರೋಹದ ಕೇಸ್ ದಾಖಲಿಸಿದ್ದರು.
ಈ ಸಮಾವೇಶದಲ್ಲಿ ಸಂಸದ ಅಸಾದುದ್ದಿನ್ ಓವೈಸಿ ಭಾಗಿಯಾಗಿದ್ದರಿಂದ ಈ ಘಟನೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.