ದೊಡ್ಡಬಳ್ಳಾಪುರ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಸ್ಥೆಯ ವತಿಯಿಂದ ಜಿಲ್ಲೆಯ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಉಚಿತ ಮಾಸ್ಕ್ ಗಳನ್ನು ಹಸ್ತಾಂತರಿಸಲಾಯಿತು
ಜೂನ್ 25ರಿಂದ ಆರಂಭವಾಗಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗ್ರಾಮಾಂತರ ಜಿಲ್ಲೆಯ 13,252 ವಿಧ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು,ಅದಕ್ಕೆ ಅನುಗುಣವಾಗಿ 13,700 ಮಾಸ್ಕ್ ಗಳನ್ನು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮುಖಾಂತರ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬೈಯಪ್ಪರೆಡ್ಡಿ,ಎಸ್.ಎನ್.ಕನ್ನಯ್ಯ,ರಮೇಶ್, ಅಶ್ವತನಾರಾಯಣ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷೆ ರಾಜಮ್ಮ,ಜಿಲ್ಲಾ ಮುಖ್ಯ ಆಯುಕ್ತ ನಾಗರಾಜ,ಜಿಲ್ಲಾ ಆಯುಕ್ತರಾದ ಮೋಹನ್ ಬಾಬು,ಆರ್.ವಿಜಯಕುಮಾರಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಶ್ರೀನಿವಾಸ್ ಪ್ರಸಾದ್,ಜಿಲ್ಲಾ ಕೋಶಾಧ್ಯಕ್ಷ ಎಸ್.ಎನ್.ಗೋಪಾಲಸ್ವಾಮಿ,ಹಿರಿಯ ಸ್ಕೌಟರ್ ಹಾಗೂ ಅಧ್ಯಕ್ಷ ಲಯನ್ಸ್ ಸಂಸ್ಥೆಯ ಶ್ರೀರಾಮಯ್ಯ,ಸಹಾಯಕ ಜಿಲ್ಲಾ ಆಯುಕ್ತರಾದ ಮಲ್ಲಿಕಾರ್ಜುನ ರೆಡ್ಡಿ,ವೆಂಕಟರಾಜು,ವಿಜಯಕುಮಾರ್,ಜೈಕುಮಾರ್,ಗಣೇಶ್ ಬಾಬು,ವತ್ಸಲಾ,ವೆಂಕಟಲಕ್ಷ್ಮಮ್ಮ,ಜಿಲ್ಲಾ ಸಹ ಕಾರ್ಯದರ್ಶಿ ನಾಗೇಶ್,ದೊಡ್ಡಬಳ್ಳಾಪುರ ತಾಲ್ಲೂಕು ಸ್ಥಳೀಯ ಸಂಸ್ಥೆ ಉಪಾಧ್ಯಕ್ಷೆ ಗಿರಿಜಾ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯದರ್ಶಿಗಳಾದ ಆಂಜಿನಪ್ಪ,ಪ್ರಕಾಶ್,ಶಿವಶಂಕರ್,ಸ್ಥಳೀಯ ಸಂಸ್ಥೆ ಸಹ ಕಾರ್ಯದರ್ಶಿ ಹನುಮಂತರಾಯಪ್ಪ.
ಸ್ಕೌಟ್ ಶಿಕ್ಷಕರಾದ ಪುಟ್ಪಸಿದ್ದಯ್ಯ,ವೆಂಕಟೇಶ್,ವೀರೇಶ್,ಗೈಡ್ ಕ್ಯಾಪ್ಟನ್ ಗಳಾದ ರಾಜೇಶ್ವರಿ,ರೂಪ,ಕು.ಅರುಣ್ ಕುಮಾರ್ ಮತ್ತಿತರಿದ್ದರು.
************