ದೊಡ್ಡಬಳ್ಳಾಪುರ:ಇತಿಹಾಸ ಪ್ರಸಿದ್ಧ ನಂದಿ ಗಿರಿಧಾಮದ ತಪ್ಪಲಿನ ಕಣಿವೆಪುರ ಸಮೀಪದಲ್ಲಿರುವ ಬ್ರಹ್ಮಗಿರಿ ಬೆಟ್ಟದ ಬಳಿ ಚಿರತೆ ಒಂದು ಜಮೀನಿಗೆ ಹಾಕಿದ ಮುಳ್ಳಿನ ಬೇಲಿಗೆ ಸಿಲುಕಿ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.
ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು,ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿ ಚಿರತೆ ಶವವನ್ನು ತಮ್ಮ ವಶಕ್ಕೆ ಪಡೆದರು.
ಚಿರತೆ ಸುದ್ದಿ ಕೇಳುತ್ತಿದ್ದಂತೆ ನಂದಿ ಗಿರಿಧಾಮದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.