ನವದೆಹಲಿ: ಚೀನಾ-ಭಾರತ ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ನಡುವೆ,ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರು ದಿನಗಳ ಪ್ರವಾಸದ ಮೇಲೆ ರಷ್ಯಾ ತೆರಳಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು,ಈ ಭೇಟಿಯಿಂದ ಭಾರತ-ರಷ್ಯಾ ರಕ್ಷಣಾ ಸಹಭಾಗಿತ್ವ ಮತ್ತಷ್ಟು ಬಲಗೊಳ್ಳುವ ಕುರಿತು ರಷ್ಯಾ ಜೊತೆ ಮಾತುಕತೆ ನಡೆಸಲಿದ್ದೇನೆ ಎಂದಿದ್ದಾರೆ.
ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಾ ವಿರುದ್ದ ಭಾರತ ತಕ್ಕ ಉತ್ತರ ನೀಡುತ್ತಿದ್ದು, ರಕ್ಷಣಾ ಸಚಿವರ ರಷ್ಯಾ ಭೇಟಿ ಮಹತ್ವ ಪಡೆದಿದೆ.ಅಲ್ಲದೆ,ಕರೊನಾ ಹರಡುವಿಕೆ ಆರಂಭವಾದ 4ತಿಂಗಳ ನಂತರ ಭಾರತದ ಸಚಿವರು ವಿದೇಶಕ್ಕೆ ತೆರಳುತ್ತಿರುವುದು ಇದೇ ಮೊದಲು.