ಬೆಂಗಳೂರು: ತೀವ್ರ ಪ್ರತಿರೋಧ,ಕರೊನಾ ಆತಂಕದ ನಡುವೆಯೂ ಎಸ್.ಎಸ್.ಎಲ್.ಸಿ ಪರೀಕ್ಷೆ ಯಶಸ್ವಿಯಾಗಿ ಅಂತ್ಯಗೊಂಡಿದ್ದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ನಿಟ್ಟುಸಿರು ಬಿಟ್ಟಿದ್ದಾರೆ.ಆದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 15 ದಿನ ಕಳೆದರೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ಮಕ್ಕಳ ಸುರಕ್ಷತೆ ಎಷ್ಟು ಎಂಬುದು ತಿಳಿಯಲಿದೆ ಎಂದು ಆತಂಕಕ್ಕಾರಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಸ್.ಎಸ್.ಎಲ್.ಸಿ ಬರೆದ ವಿದ್ಯಾರ್ಥಿಗಳ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿರುವ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ರಾಜ್ಯ ಸರ್ಕಾರ ಅತ್ಯಂತ ಆತ್ಮವಿಶ್ವಾಸದಿಂದ ಪರೀಕ್ಷೆ ಮುಗಿಸಿದೆ.ಸುರಕ್ಷತಾ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸಿದ್ದೇವೆ ಎಂಬ ಭರವಸೆಯಲ್ಲೂ ಇದೆ.ಮಕ್ಕಳು ಸುರಕ್ಷಿತವಾಗಿರಲಿ ಎಂದು ನಾನು ಬಯಸುತ್ತೇನೆ. ಆದರೆ 15 ದಿನಗಳ ಬಳಿಕ ಅವರ ಸುರಕ್ಷತೆ ಎಷ್ಟು ಎಂಬುದು ಗೊತ್ತಾಗಲಿದೆ ಎಂದು ಪೋಷಕರು ಆತಂಕಗೊಳ್ಳುವಂತೆ ಅಪಸ್ವರ ತೆಗೆದ ಇದ್ದಾರೆ.
ಇದೇ ವೇಳೆ ಸರ್ಕಾರವನ್ನು ಒತ್ತಾಯಿಸಿರುವ ಅವರು,ಕೂಡಲೇ ಸರ್ಕಾರ ಹೆಚ್ಚೆತ್ತುಕೊಳ್ಳಬೇಕಿದ್ದು ಜೂನ್ 15ರಿಂದ ಜುಲೈ 20ರವರೆಗೆ ಕರೊನಾ ಸೋಂಕಿತರ ಮಾಹಿತಿ ಸಂಗ್ರಹಿಸಿ,ಪ್ರಾಥಮಿಕ ಸಂಪರ್ಕದಲ್ಲಿ ಯಾರಾದರೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಇದ್ದರೆ ಎಂಬುದನ್ನು ಪತ್ತೆ ಹಚ್ಚಿ ಮೌಲ್ಯಮಾಪನ ನಡೆಸಿದರೆ.ಯಶಸ್ವಿ ಪರೀಕ್ಷೆ ನಡೆಸಿದ್ದೇವೆಯೇ ಎಂಬುದು ತಿಳಿಯಲು ಸಹಕಾರಿಯಾಗಲಿದೆ ಎಂದಿದ್ದಾರೆ.
ತೀವ್ರ ಆತಂಕದ ನಡುವೆ ಪರೀಕ್ಷೆ ಮುಗಿಯಿತು ಎಂದು ನೆಮ್ಮದಿ ಪಡುತ್ತಿದ್ದ,ಪೋಷಕರು ಹಾಗೂ ವಿದ್ಯಾರ್ಥಿಗಳು ಸಿದ್ದರಾಮಯ್ಯರ ಅಭಿಪ್ರಾಯದಿಂದ ಮತ್ತೆ ಆತಂಕಕ್ಕೆ ಒಳಗಾಗುತ್ತಿದ್ದಾರೆ.