ದೊಡ್ಡಬಳ್ಳಾಪುರ: ಒಂದು ವಾರದ
ಲಾಕ್ಡೌನ್
ಮೊದಲ ದಿನವೇ ಕರೊನಾದಿಂದ
ತಾಲೂಕಿಗೆ ತುಸು ನೆಮ್ಮದಿ
ದೊರೆತಿದ್ದು,ಇಂದು ತಾಲೂಕು
ಆಡಳಿತ ಬಿಡುಗಡೆ ಮಾಡಿದ
ಬುಲೆಟಿನ್ ಅಲ್ಲಿ ಯವುದೇ
ಕರೊನಾ ಪ್ರಕರಣಗಳು ದೃಢಪಟ್ಟಿಲ್ಲ.
ಇಲ್ಲಿಯ ವರೆಗೆ ತಾಲೂಕಿನಲ್ಲಿ
89 ಕರೊನಾ ಪ್ರಕರಣಗಳು
ಪತ್ತೆಯಾಗಿದ್ದು,ನಾಲ್ಕು ಮಂದಿ
ಮೃತ ಪಟ್ಟಿದ್ದರೆ,ಆರು
ಮಂದಿ ಗುಣಮುಖರಾಗಿ ಮನೆಗೆ
ಮರಳಿದ್ದಾರೆ.
ಸೋಂಕುಗೆ ಒಳಗಾದ 17
ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್
ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 62ಮಂದಿಯನ್ನು
ದೇವನಹಳ್ಳಿ/ಹಜ್ ಭವನ/ಖಾಸಗಿ ಆಸ್ಪತ್ರೆ/
ಹೊಂ ಹೈಸೋಲೇಷನ್ ಅಲ್ಲಿಟ್ಟು
ಚಿಕಿತ್ಸೆ ನೀಡಲಾಗುತ್ತಿದೆ.
ಸಾರ್ವಜನಿಕರಿಗೆ ಗೊಂದಲ ಉಂಟುಮಾಡಿದ
ಲಾಕ್ಡೌನ್..?
ಕೊವಿಡ್–19 ಪ್ರಕರಣಗಳು
ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ
ಸರ್ಕಾರದ ಆದೇಶದಂತೆ ಜುಲೈ
22 ರವರೆಗೆ ಲಾಕ್ಡೌನ್ ಜಾರಿಗೊಳಿಸಿರುವ
ಹಿನ್ನಲೆಯಲ್ಲಿ ತಾಲೂಕಿನಲ್ಲಿ ಲಾಕ್ಡೌನ್ ಘೋಷಿಸಲಾಗಿದ್ದು,ಮೊದಲ ದಿನ
ನಗರದಲ್ಲಿ ಮಾತ್ರ ಬಹುತೇಕ
ಯಶಸ್ವಿಯಾಗಿದೆ.ಆದರೆ ಇನ್ನೊಂದೆಡೆ,
ಬ್ಯಾಂಕ್ಗಳು,
ಕಚೇರಿಗಳು, ಕೈಗಾರಿಕಾ ಪ್ರದೇಶದ
ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದರಿಂದ ಜನರಿಗೆ ಗೊಂದಲವಾಗಿತ್ತು.
ಬುಧವಾರ ಬೆಳಿಗ್ಗೆ5 ಮಧ್ಯಾಹ್ನ
12ರವರೆಗೆ ಮಾತ್ರ ಅಗತ್ಯ
ವಸ್ತುಗಳನ್ನು ಕೊಳ್ಳಲು ಅವಕಾಶ
ಕಲ್ಪಿಸಲಾಗಿತ್ತು. ಮಧ್ಯಾಹ್ನದ ನಂತರ
ನಗರ ಸ್ಥಬ್ದಗೊಂಡಿತ್ತು. ವೈದ್ಯಕೀಯ,
ದಿನಸಿ ಹಾಗೂ ತುರ್ತು
ಸೇವೆಗಳಿಗೆ ವಿನಾಯಿತಿ ನೀಡಲಾಗಿತ್ತು.
ಮದ್ಯದ ಅಂಗಡಿ, ದೇವಾಲಯ,
ಉದ್ಯಾನವನಗಳು, ಮಸೀದಿ, ಚರ್ಚ್,
ಶಾಪಿಂಗ್ ಮಾಲ್ಗಳು ಮುಚ್ಚಿದ್ದವು.
ತಾಲೂಕಿನ ಪ್ರಸಿದ್ಧ ಘಾಟಿ
ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ
ಪ್ರಮುಖ ದೇವಾಲಯಗಳು ಲಾಕ್ಡೌನ್ ಹಿನ್ನಲೆಯಲ್ಲಿ
ಮುಚ್ಚಲಾಗಿತ್ತು. ರಾಜ್ಯ ಸಾರಿಗೆ
ಬಸ್ಗಳು,
ಆಟೋ, ಟ್ಯಾಕ್ಸಿ ಮೊದಲಾದ
ವಾಹನಗಳ ಸಂಚಾರ ಸ್ಥಗಿತಗೊಂಡಿದ್ದವು.
ಹೋಟೆಲ್ಗಳಲ್ಲಿ
ಸರಬರಾಜಿಗೆ ಮಾತ್ರ ಅವಕಾಶ
ಕಲ್ಪಿಸಲಾಗಿತ್ತು. ಬ್ಯಾಂಕ್ಗಳು ಹಾಗೂ ಸರ್ಕಾರಿ
ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿ,
ಮಧ್ಯಾಹ್ನದವರೆಗೆ ಮಾತ್ರ ಸಾರ್ವಜನಿಕರ
ಭೇಟಿಗೆ ಅವಕಾಶ ನೀಡಲಾಗಿತ್ತು.
ಕಚೇರಿ ಸಮಯದಲ್ಲಿ ಸಾರ್ವಜನಿಕರು
ಪೊಲೀಸರು ಗಸ್ತು ತಿರುಗುವ
ಮೂಲಕ ಅನಗತ್ಯವಾಗಿ ಸಂಚರಿಸುವ
ವಾಹನಗಳನ್ನು ವಶಕ್ಕೆ ಪಡೆದು,
ಎಚ್ಚರಿಕೆ ನೀಡಲಾಗುತ್ತಿದ್ದ ದೃಶ್ಯಗಳು
ಕಂಡುಬಂದವು. ನಗರದ ಹೊರವಲಯಗಳಲ್ಲಿ
ವಾಹನಗಳನ್ನು ತಪಾಸಣೆ ಮಾಡಲಾಗುತ್ತಿತ್ತು.
ಕೈಗಾರಿಕಾ ಪ್ರದೇಶದಲ್ಲಿ ಹಲವಾರು
ಕಾರ್ಖಾನೆಗಳು ಕಾರ್ಯ ನಿರ್ವಹಿಸಿದ್ದರಿಂದ
ಬೆಳಗಿನಿಂದಲೇ ಕಾರ್ಮಿಕರು ಆಟೋಗಳಲ್ಲಿ ಕಾರ್ಖಾನೆಗೆ
ತೆರಳಿ ಸಂಜೆ ಹಿಂತಿರುಗಿದರು.
ನಗರದಲ್ಲಿ ಲಾಕ್ಡೌನ್ನಿಂದ ನೇಕಾರಿಕೆ
ಇನ್ನೂ ಚೇತರಿಸಿಕೊಂಡಿರದೇ ಇರುವುದರಿಂದ
ಅಲ್ಲೊಂದು ಇಲ್ಲೊಂದು ಮಗ್ಗಗಳು
ಸದ್ದು ಮಾಡುತ್ತಿದ್ದವು.
ಚೆಕ್
ಪೋಸ್ಟ್ : ಲಾಕ್ಡೌನ್
ಹಿನ್ನೆಲೆಯಲ್ಲಿ ಅನ್ಯ ರಾಜ್ಯದ
ವಾಹನಗಳಿಗೆ ಕಡಿವಾಣ ಹಾಕಲು
ತಾಲೂಕು ಆಡಳಿತ ವತಿಯಿಂದ
ಗುಂಜೂರು ಹಾಗೂ ಆರೂಢಿಯಲ್ಲಿ
ಚೆಕ್ ಪೋಸ್ಟ್ ಸ್ಥಾಪಿಸಿ
ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.ಲಾಕ್ಡೌನ್ ಕಟ್ಟುನಿಟ್ಟಾಗಿ
ಪಾಲನೆಯಾಗುವಂತೆ ನೋಡಿಕೊಳ್ಳಲು ಅಗತ್ಯ
ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಇದಕ್ಕೆ
ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ
ಎಂದು ತಹಶೀಲ್ದಾರ್ ಟಿ.ಎಸ್.ಶಿವರಾಜ್
ತಿಳಿಸಿದ್ದಾರೆ.