ದೊಡ್ಡಬಳ್ಳಾಪುರ: ಕರೊನಾ ಸೋಂಕು ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಾಲೂಕು ಆಡಳಿತ ನೀಡುವ ಕೋವಿಡ್-19 ಬುಲೆಟಿನ್ ಅವಶ್ಯಕವಾಗಿದೆ.ಅಲ್ಲದೆ ತಾಲೂಕು ಬುಲೆಟಿನ್ ನಿಖರವಾದ ಮಾಹಿತಿ ಜನರಿಗೆ ದೊರಕುತ್ತಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದ್ದಾರೆ.
ಈ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿರುವ ಅವರು,ಜಿಲ್ಲಾ ಬುಲೆಟಿನ್ ಗೊಂದಲದಿಂದಾಗಿ ತಾಲೂಕು ಆಡಳಿತ ಬುಲೆಟಿನ್ ಪ್ರಾರಂಭಿಸಲಾಗಿದೆ.ಜಿಲ್ಲಾ ಉಸ್ತುವರಿ ಸಚಿವ ಆರ್.ಅಶೋಕ್ ಅವರಿಗೂ ನಾಲ್ಕು ತಾಲೂಕುಗಳ ಶಾಸಕರಿ ಈ ಕುರಿತು ವಿವರಿಸಿದ್ದು,ಕರೊನಾ ಸೋಂಕಿನ ಮುಂಜಾಗ್ರತೆಗೆ ಇದು ಅನಿರ್ವಾರ್ಯವಾಗಿದೆ ಎಂದ ಅವರು.ಜಿಲ್ಲಾ ಬುಲೆಟಿನ್ ಗೊಂದಲ ನಿವಾರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ ನೀಡಲಾಗುವುದೆಂದರು.
ಬುಲೆಟಿನ್ ಗೊಂದಲದ ನಿವಾರಣೆಗೆ ಕ್ರಮ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಕೋವಿಡ್-19 ಬುಲೆಟಿನ್ ವಿಚಾರದ ಗೊಂದಲ ಕುರಿತು ಮಾಹಿತಿ ಬಂದಿದೆ.ತಾಲೂಕು ಆಡಳಿತ ಬುಲೆಟಿನ್ ಹಾಗು ಜಿಲ್ಲಾಡಳಿತ ಬುಲೆಟಿನ್ ನಡುವಿನ ಅಂಕಿಅಂಶಗಳ ಕಾರಣವೇನು ಎಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮರ್ಪಕ ಅಂಕಿಅಂಶಗಳ ವಿವರ ಹೊಂದಿರುವ ಜಿಲ್ಲಾ ಬುಲೆಟಿನ್ ನೀಡಲಾಗುವುದೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹರಿತಲೇಖನಿಗೆ ತಿಳಿಸಿದ್ದಾರೆ.
ಕರೊನಾ ಬುಲೆಟಿನ್ ಗೊಂದಲವೇಕೆ…?
ಕರೊನಾ ಸೋಂಕಿತರ ಅಂಕಿ ಸಂಖ್ಯೆಗಳ ನೀಡುವ ಜಿಲ್ಲಾಡಳಿತದ ಬುಲೆಟಿನ್ ಕುರಿತು ಜನತೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನಲೆ,ಮೊದಲಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಪ್ರತ್ಯೇಕವಾದ ಕರೊನಾ ಹೆಲ್ತ್ ಬುಲೆಟಿನ್ ನೀಡಲು ಶಾಸಕ ವೆಂಕಟರಮಣಯ್ಯ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದರು.ಇದನ್ನು ಅನುಸರಿಸಿದ ಜಿಲ್ಲೆಯ ಇತರ ತಾಲೂಕುಗಳು ತಮ್ಮದೆ ಆದ ಪ್ರತ್ಯೇಕ ಬುಲೆಟಿನ್ ನೀಡಲಾರಂಭಿಸಿ ಜನತೆ ವಾಸ್ತವದ ವರದಿ ನೀಡುತ್ತಿವೆ.
ಆದರೆ ಜಿಲ್ಲಾ ಬುಲೆಟಿನ್ ಮೇಲೆ ನಂಬಿಕೆ ಇಲ್ಲದೆ, ತಾಲೂಕು ಆಡಳಿತಗಳು ಪ್ರತ್ಯೇಕ ಬುಲೆಟಿನ್ ನೀಡಲಾರಬಿಸಿದರು ಸಹ ಜಿಲ್ಲೆ ಮತ್ತು ತಾಲೂಕು ಆಡಳಿತ ಅಂಕಿಅಂಶಗಳ ಕಡಿಮೆಯಾಗಿಲ್ಲ. ದೊಡ್ಡಬಳ್ಳಾಪುರ ತಾಲ್ಲೂಕಿನ 19,ಹೊಸಕೋಟೆ ತಾಲೂಕಿನಲ್ಲಿಯೇ 16 ಮಂದಿ ಕೋವಿಡ್-19 ನಿಂದ ಸಾವನಪ್ಪಿದ್ದಾರೆ ಎಂದು ತಾಲೂಕು ಆಡಳಿತದ ವರದಿ ಹೇಳುತ್ತಿವೆ.ಆದರೆ, ಜಿಲ್ಲಾಡಳಿತ ನೀಡುವ ವರದಿ ಹಾಗೂ ರಾಜ್ಯ ಬುಲೆಟಿನ್ ವರದಿಯಲ್ಲಿ ನಾಲ್ಕು ತಾಲೂಕುಗಳ ಜಿಲ್ಲೆಯಲ್ಲಿ ಕೇವಲ 10ಮಂದಿ ಮಾತ್ರ ಸಾವನಪ್ಪಿದ್ದಾರೆಂದು ವರದಿಯಾಗುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗುತ್ತಿದ್ದು,ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಕೈಗೊಳ್ಳುವ ಕ್ರಮದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.