ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು (ಆಗಸ್ಟ್ 28 ರಂದು) 116 ಪುರುಷರು ಹಾಗೂ 98 ಮಹಿಳೆಯರು ಸೇರಿದಂತೆ 214 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.
ವರದಿಯನ್ವಯ ನೆಲಮಂಗಲ ತಾಲ್ಲೂಕಿನಲ್ಲಿ 31 ಪುರುಷರು ಮತ್ತು 22 ಮಹಿಳೆಯರು, ಹೊಸಕೋಟೆ ತಾಲ್ಲೂಕಿನಲ್ಲಿ 23 ಪುರುಷರು ಮತ್ತು 10 ಮಹಿಳೆಯರು, ದೇವನಹಳ್ಳಿ ತಾಲ್ಲೂಕಿನಲ್ಲಿ 22 ಪುರುಷರು ಮತ್ತು 13 ಮಹಿಳೆಯರು, ಬೆಂಗಳೂರು ನಗರ ಮತ್ತು ಇತರೆ ಜಿಲ್ಲೆಗಳಿಗೆ ಸೇರಿದ 8 ಪುರುಷರು ಮತ್ತು 5 ಮಹಿಳೆಯರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಇಂದೂ ಸಹ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಗೂ ಜಿಲ್ಲಾಡಳಿತದ ವರದಿ ಗೊಂದಲ ಮುಂದುವರಿದಿರುವ ಕಾರಣ ಹರಿತಲೇಖನಿ ಪ್ರಕಟಿಸುತ್ತಿಲ್ಲ.