ದೊಡ್ಡಬಳ್ಳಾಪುರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ತೀವ್ರತರವಾದ ದೈಹಿಕ ವಿಕಲಚೇತನರು ಉದ್ಯೋಗ ಕೈಗೊಳ್ಳಲು ಅಥವಾ ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಯಂತ್ರಚಾಲಿತ ದ್ವಿಚಕ್ರವಾಹನವನ್ನು ಪಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ತಾಲ್ಲೂಕು ವ್ಯಾಪ್ತಿಯ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ನಿಗದಿತ ಅರ್ಜಿ ನಮೂನೆಯನ್ನು ತಮ್ಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ, ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಪಡೆದು ಸಲ್ಲಿಸಬಹುದು.
ಅರ್ಹತೆಗಳು: ವಿಕಲಚೇತನ ವ್ಯಕ್ತಿಗಳು ಭಾರತದ ಪ್ರಜೆಯಾಗಿದ್ದು ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳು ವಾಸವಾಗಿರಬೇಕು. 20 ರಿಂದ 60 ರ ವಯೋಮಾನ ತೀರ್ವತರನಾದ ದೈಹಿಕ ವಿಕಲಚೇತನರಿಗೆ ಮಾತ್ರ ಜೀವಿತ ಕಾಲದಲ್ಲಿ 1 ಬಾರಿ ಮಾತ್ರ ಸೌಲಭ್ಯ ಕಲ್ಪಿಸಲಾಗಿದೆ, ಈ ಯೋಜನೆ ಸೌಲಭ್ಯ ಪಡೆಯಲು ಕುಟುಂಬ ವಾರ್ಷಿಕ ಆದಾಯ ರೂ.2.00 ಲಕ್ಷಗಳಿಂತ ಕಡಿಮೆ ಇರಬೇಕು, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ ಲಗತ್ತಿಸುವುದು, ವೈದ್ಯಕೀಯ ಪ್ರಾಧಿಕಾರದಿಂದ ನೀಡಿರುವ ಇಲಾಖೆಯ ಗುರುತಿನ ಚೀಟಿ ಹಾಗೂ ವಿಕಲಚೇತನರ ವಿಶಿಷ್ಟಗುರುತಿನ ಚೀಟಿ (ಯು.ಡಿ.ಐ.ಡಿ) ಕಾರ್ಡ್ ಪ್ರತಿ ಲಗತ್ತಿಸುವುದು, ಇತರ ಇಲಾಖೆಗಳು ಅಥವಾ ಸಂಘ ಸಂಸ್ಥೆಗಳಿಂದ ಯಂತ್ರಚಾಲಿತ ದ್ವಿಚಕ್ರವಾಹನ ಪಡೆದಿದ್ದಲ್ಲ್ಲಿ ಅಂತಹವರು ಅರ್ಹರಾಗಿರುವುದಿಲ್ಲ, ಈ ಸೌಲಭ್ಯ ಪಡೆಯುವ ದೈಹಿಕ ವಿಕಲಚೇತನರು ಅಪಘಾತ ಅಥವಾ ಅನಾರೋಗ್ಯ ಅಥವಾ ಹುಟ್ಟಿನಿಂದ ಒಂದು ಅಥವಾ ಎರಡು ಕಾಲುಗಳನ್ನು ಕಳೆದುಕೊಂಡ ಅಥವಾ ಸ್ವಾದೀನ ಇಲ್ಲದಿರುವ ಹಾಗೂ ಅಂಗವೈಕಲ್ಯತೆಯ ಪ್ರಮಾಣ ಶೇ.75ಕ್ಕಿಂತ ಹೆಚ್ಚು ಇದ್ದು, ಎರಡು ಕೈಗಳು ಸ್ವಾಧೀನವಾಗಿರುವ ಮತ್ತು ಇತರೆ ಎಲ್ಲಾ ರೀತಿಯಲ್ಲಿ ದೈಹಿಕವಾಗಿ ಸದೃಢವಾಗಿರುವ ವಿಕಲಚೇತನರಿಗೆ ಈ ಸೌಲಭ್ಯ ನೀಡಬಹುದು, ಈ ಸೌಲಭ್ಯ ಪಡೆಯಲಿಚ್ಛಿಸುವ ವಿಕಲಚೇತನರು ಸಾರಿಗೆ ಇಲಾಖೆಯಿಂದ ದ್ವಿಚಕ್ರ ವಾಹನ ಚಾಲನೆ ಮಾಡುವ ಪರವಾನಗಿ ಪತ್ರ ಪಡೆದಿರಬೇಕು, ಯಾವುದೇ ಸಂಘ ಸಂಸ್ಥೆಗಳಿಂದ, ಯಾವುದೇ ಇಲಾಖೆಗಳಿಂದ ಹಾಗೂ ಶಾಸಕರ ಅನುದಾನದಲ್ಲಿ ದ್ವಿಚಕ್ರ ವಾಹನ ಪಡೆದಿಲ್ಲ ಎಂದು ಕರಾರು ಪಡೆದುಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ತಮ್ಮ ಗ್ರಾಮ ಪಂಚಾಯತಿಯ ವಿ.ಆರ್.ಡಬ್ಲ್ಯೂ./ತಾಲ್ಲೂಕು ಪಂಚಾಯತಿಯ ಎಂ.ಆರ್.ಡಬ್ಲ್ಯೂ ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರ ಕಛೇರಿ, ಕೊಠಡಿ ಸಂಖ್ಯೆ: 03 ನೆಲಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ವಿಕಲಚೇತನರ ವಿಕಲಚೇತನರ ಸಹಾಯವಾಣಿ: 080-29787441 ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.