ಬೆಂ.ಗ್ರಾ.ಜಿಲ್ಲೆ: ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿನ ಕೃಷಿ ವಿಜ್ಞಾನ ಕೇಂದ್ರ, ಯನ್‍ಡಿಪಿ- ಉನ್ನತಿ ಹಾಗೂ ಧಾರವಾಡ ಕೃಷಿ ವಿಶ್ವ ವಿದ್ಯಾನಿಲಯದ ಸಹಯೊಗದೊಂದಿಗೆ ಗ್ರಾಮೀಣ ಯುವಕ ಹಾಗೂ ಮಹಿಳೆಯರಿಗೆ ಸಾವಯವ ಗೊಬ್ಬರ ಹಾಗೂ ಎರೆಹುಳು ಗೊಬ್ಬರ ಉತ್ಪಾದನೆಯ ಕುರಿತು ಅಂತರ್ಜಾಲ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಪಿ. ವೀರನಾಗಪ್ಪ ಎರೆಹುಳು ಗೊಬ್ಬರ ಒಂದು ಉದ್ದಿಮೆಯಾಗಿ ಕುರಿತು ಉಪನ್ಯಾಸ ನೀಡಿದರು.
ಸಾವಯವ ಗೊಬ್ಬರ ಬಳಸುವುದರಿಂದ ಮಣ್ಣಿನ ಮಾಲಿನ್ಯತೆ ಕಡಿಮೆಯಾಗಿ ಉತ್ತಮ ಗುಣಮಟ್ಟದ ಆಹಾರ ಉತ್ಪತ್ತಿಯಾಗಿ ಮಣ್ಣಿನ ಫಲವತ್ತತೆ ಸುಸ್ಥಿತಗೊಂಡು ಪರಿಸರ ಸುರಕ್ಷಿತವಾಗಿ ಇಡಲು ಸಹಕರಿಸುತ್ತದೆ ಎಂದು ಮಾಹಿತಿ ನೀಡಿದರು.
ಸಾವಯವ ಗೊಬ್ಬರ ತಯಾರಿಕೆಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳೀಂದ ದೊರಕುವ ಸೌಲಭ್ಯ ಹಾಗೂ ಹಣಕಾಸಿನ ನೆರವಿನ ಬಗ್ಗೆ ಮಾಹಿತಿ ನೀಡಿದ ಡಾ.ಪಿ.ವೀರನಾಗಪ್ಪ, ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಅಯೋಜಿಸಲಾಗಿರುವ ತರಬೇತಿ ಕಾರ್ಯಕ್ರಮಗಳು, ವಿಶೇಷವಾಗಿ ಗ್ರಾಮೀಣ ಯುವಕರಿಗೆ ಕೈಗೊಳ್ಳುವ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಕೇಂದ್ರದಲ್ಲಿ ತೋಟಗಾರಿಕೆ, ಮಣ್ಣು, ನೀರು ವಿಶ್ಲೇಷಣೆ, ಸಸ್ಯ ಸಂರಕ್ಷಣೆ ಮತ್ತು ಹೈನುಗಾರಿಕೆ ಮತ್ತು ಮೌಲ್ಯವರ್ಧನೆ ಕುರಿತು ತರಬೇತಿ ಹಾಗೂ ತಾಂತ್ರಿಕ ಮಾಹಿತಿಯನ್ನು ರೈತರಿಗೆ ನೀಡಲಾಗುತ್ತಿದೆ ಎಂದು ವಿಶ್ಲೇಷಿಸಿದರು.
ಧಾರವಾಡ ಕೃಷಿ ವಿಶ್ವ ವಿದ್ಯಾನಿಲಯದ ಸಹಾಯಕ ಪ್ರಾದ್ಯಾಪಕ ಡಾ.ಗುರು ಯಡಹಳ್ಳಿ ಎರೆಹುಳು ಗೊಬ್ಬರ ಉತ್ಪಾದನೆ ಸಾವಯವ ಗೊಬ್ಬರಗಳ ತಯಾರಿಕೆಯ ಬಗ್ಗೆ ಉಪನ್ಯಾಸ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಸ್ಕೂರು ಗ್ರಾಮದ ರೈತ ಮಹಿಳೆ ಮಂಜುಳ ಸಾವಯವ ಕೃಷಿ ಜೀವನ ಮತ್ತು ಸಮಗ್ರ ಕೃಷಿ ಪದ್ದತಿಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಕೃಷಿಯಲ್ಲಿ ಮಹಿಳೆಯರ ಪತ್ರ ಅತಿ ಮುಖ್ಯವಾಗಿದ್ದು ತಮ್ಮ ಕಷ್ಟ ಮತ್ತು ಶ್ರಮದ ಫಲವಾಗಿ ಅವರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಲಭಿಸಿರುವುದಾಗಿ ತಿಳಿಸಿದರು.
ಯನ್‍ಡಿಫಿ- ಉನ್ನತಿ ಪ್ರಾಯೋಜನೆಯಿಂದ ರಾಯಚೂರು, ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಯುವ ಮಹಿಳೆಯರು ಹಾಗೂ ಯುವಕರಿಗೆ ಮುಂದಿನ ಮೂರು ವರ್ಷಗಳ ವರೆಗೆ ಮಹಿಳಾ ಉದ್ಯಮ ಶೀಲತೆ ಹಾಗೂ ಕೌಶಲ್ಯ ತರಬೇತಿಗಳನ್ನು ಅಯೋಜಿಸಲಾಗುವುದು ಎಂದು ಸುಮ ಮಾಹಿತಿ ನೀಡಿದರು, ಕಾರ್ಯಾಗಾರದಲ್ಲಿ 50 ಕ್ಕೂ ಹೆಚ್ಚಿನ ರೈತ ರೈತ ಮಹಿಳೆಯರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….