ಎಕ್ಸ್-ರೇ ಸೇತು: ವಾಟ್ಸ್ ಆಪ್ ಮೂಲಕ ಕೋವಿಡ್ ರೋಗ ಲಕ್ಷಣ ಪತ್ತೆ….!

ಬೆಂಗಳೂರು: ಕೋವಿಡ್-19 ಆರಂಭಿಕ ರೋಗ ಲಕ್ಷಣಗಳನ್ನು ಪತ್ತೆ ಮಾಡಲು ಹೊಸ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ವೇದಿಕೆಯು ಸಹಾಯ ಮಾಡುತ್ತಿದೆ. ಮಾನವನ ಎದೆ ಭಾಗದ ಎಕ್ಸ್-ರೇ ಚಿತ್ರ ತೆಗೆದು ಅದನ್ನು ವೈದ್ಯರಿಗೆ ಕಳಿಸಿದರೆ ಅವರು ಆರ್ಟಿಫಿಷಯಲ್ ಇಂಟಲಿಜೆನ್ಸ್  ತಂತ್ರಜ್ಞಾನದ ಮೂಲಕ ಕ್ಷಿಪ್ರ ಪರಾಮರ್ಶೆ (rapid screening)ಗೆ ಒಳಪಡಿಸಿ, ಕೋವಿಡ್-19 ಆರಂಭಿಕ ರೋಗ ಲಕ್ಷಣಗಳನ್ನು ಪತ್ತೆ ಮಾಡುತ್ತಾರೆ. ಅಲ್ಪ ರೆಸಲ್ಯೂಷನ್ ಹೊಂದಿರುವ ಎದೆ ಭಾಗದ ಚಿತ್ರಗಳನ್ನು (ಎಕ್ಸ್-ರೇ ಸೇತು ತಂತ್ರಜ್ಞಾನ) ಮೊಬೈಲ್ ಮೂಲಕ ಕಳಿಸಿದಾಗ ಅವು ತ್ವರಿತವಾಗಿ ರವಾನೆಯಾಗುತ್ತವೆ ಹಾಗೂ ಕ್ಷಿಪ್ರ ಪರಾಮರ್ಶೆ ಪರೀಕ್ಷೆ ನಡೆಸಲು ಸಹ ಸುಲಭ. ಗ್ರಾಮೀಣ ಭಾಗದ ಸೋಂಕಿತರ ರೋಗ ಲಕ್ಷಣಗಳನ್ನು ಪತ್ತೆ ಮಾಡಲು ಈ ತಂತ್ರಜ್ಞಾನ ಅನುವು ಮಾಡಿಕೊಡುತ್ತದೆ.

ದೇಶದ ಗ್ರಾಮೀಣ ಭಾಗಗಳಿಗೆ ಕೋವಿಡ್-19 ಸೋಂಕು ಕ್ಷಿಪ್ರ ಗತಿಯಲ್ಲಿ ಹರಡುತ್ತಿರುವುದರಿಂದ ಕ್ಷಿಪ್ರ ಸೋಂಕು ಪತ್ತೆ, ಸೋಂಕಿತರ ಪ್ರಾಥಮಿಕ ಸಂಪರ್ಕ ಪತ್ತೆ ಮತ್ತು ಕಂಟೈನ್ ಮೆಂಟ್ ವಲಯಗಳನ್ನು ಗುರುತಿಸುವುದು ನಿರ್ಣಾಯಕವಾಗಿದೆ. ದೇಶದ ಕೆಲವು ನಗರಗಳಲ್ಲಿ ತ್ವರಿತವಾಗಿ ರೋಗ ಲಕ್ಷಣ ಪತ್ತೆ ಮಾಡಲು ಒಂದು ವಾರಕ್ಕಿಂತ ಹೆಚ್ಚಿನ ಸಮಯ ಹಿಡಿಯುತ್ತಿರುವ ಈ ಸಂದರ್ಭದಲ್ಲಿ, ಗ್ರಾಮೀಣ ಭಾಗಗಳ ಪರಿಸ್ಥಿತಿ ಇನ್ನೂ ಹೆಚ್ಚಿನ ಸವಾಲಿನದ್ದಾಗಿದೆ. ಕೋವಿಡ್-19 ಕೆಲವು ರೂಪಾಂತರಗಳಿಗೆ ಆರ್|ಟಿ-ಪಿಸಿಆರ್ ಪರೀಕ್ಷೆಗಳು ತಪ್ಪು ಫಲಿತಾಂಶ ವರದಿ ನೀಡುತ್ತಿರುವುದರಿಂದ ಸುಲಭವಾದ ಪರ್ಯಾಯ ಪರೀಕ್ಷೆಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ – ಐಐಎಸ್ಸಿ ಆರ್ಟ್ ಪಾರ್ಕ್ ಹೆಸರಿನಲ್ಲಿ (ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ರೊಬೊಟಿಕ್ಸ್ ತಂತ್ರಜ್ಞಾನ ಪಾರ್ಕ್) ಪ್ರತಿಷ್ಠಾನವೊಂದನ್ನು ಸ್ಥಾಪಿಸಿದೆ. ಇದು ಲಾಭದಾಯಕವಲ್ಲದ ಸಂಪೂರ್ಣ ಸೇವಾ ಮನೋಭಾವ ಹೊಂದಿರುವ ಪ್ರತಿಷ್ಠಾನವಾಗಿದೆ. ಈ ಪ್ರತಿಷ್ಠಾನಕ್ಕೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಬಲ ನೀಡುತ್ತಿದ್ದು, ಬೆಂಗಳೂರು ಮೂಲದ ಆರೋಗ್ಯ ತಂತ್ರಜ್ಞಾನ ಸೇವೆ ಒದಗಿಸುವ ನವೋದ್ಯಮ ‘ನಿರಾಮಯಿ’ ಸಹಭಾಗಿತ್ವ ಒದಗಿಸುತ್ತಿದೆ. ಈ ಮೂರು ಸಂಸ್ಥೆಗಳು ಒಟ್ಟಾಗಿ ಸೇರಿ ‘ಎಕ್ಸ್|ರೇ ಸೇತು’ ಹೆಸರಿನಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಸಂಭಾವ್ಯ ಕೋವಿಡ್ ರೋಗ ಲಕ್ಷಣ ಇರುವ ವ್ಯಕ್ತಿಯ ಎದೆ ಭಾಗದ ಕಡಿಮೆ ರೆಸಲ್ಯೂಷನ್ ಇರುವ ಎಕ್ಸ್|ರೇ ಚಿತ್ರಗಳನ್ನು ವಾಟ್ಸ್|ಆಪ್ ಮೂಲಕ ವೈದ್ಯರಿಗೆ ಕಳಿಸಿದರೆ, ಅವರು ಎಕ್ಸ್|ರೇ ಉಪಕರಣದಲ್ಲಿ ಆ ಚಿತ್ರಗಳ ರಾಪಿಡ್ ಸ್ಕ್ರೀನಿಂಗ್ ನಡೆಸಿ, ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಇದೆಯೇ, ಇಲ್ಲವೇ ಎಂಬುದನ್ನು ಪತ್ತೆ ಮಾಡುತ್ತಾರೆ.

ಈಗಿರುವ ಕೋವಿಡ್-19 ಪರೀಕ್ಷೆಗಳಿಗೆ ಹೋಲಿಸಿದರೆ ಈ ಪರೀಕ್ಷಾ ವಿಧಾನ ಸುಲಭವಾಗಿದೆ. ಗ್ರಾಮೀಣ ಪ್ರದೇಶಗಳ ಹೊರವಲಯಗಳು ಮತ್ತು ದೂರದ ಪ್ರದೇಶಗಳಲ್ಲಿ ನೆಲೆಸಿರುವ ಜನರ ರೋಗ ಪತ್ತೆ ಮಾಡಲು ಇದು ಅತ್ಯಂತ ಸಹಾಯಕವಾಗಿದೆ. ಇದುವರೆಗೆ ಇಂತಹ ಸುಮಾರು 1200 ಜನರ ಪರೀಕ್ಷೆ ನಡೆಸಲಾಗಿದೆ.

ವ್ಯಕ್ತಿಯ ಆರೋಗ್ಯ ತಪಾಸಣೆ ನಡೆಸಲು ಯಾವುದೇ ವೈದ್ಯ ಸುಲಭವಾಗಿ www.xraysetu.com  ವೆಬ್|ಸೈಟ್|ಗೆ ಭೇಟಿ ನೀಡಿ, ‘Try the Free XraySetu Beta’ ಬಟನ್ ಕ್ಲಿಕ್ ಮಾಡಬೇಕು. ಆಗ ಈ ವೆಬ್|ಸೈಟ್ ಮುಂದಿನ ಪೇಜ್|ಗೆ ಹೋಗಲು ಮರುನಿರ್ದೇಶನ ನೀಡುತ್ತದೆ. ನಂತರ ವೈದ್ಯರು ವೆಬ್ ಅಥವಾ ಸ್ಮಾರ್ಟ್|ಫೋನ್ ಅಪ್ಲಿಕೇಶನ್ ಮೂಲಕ ವಾಟ್ಸ್|ಆಪ್ ಆಧರಿತ ಚಾಟ್|ಬಾಟ್ ಆಯ್ಕೆ ಮಾಡಿಕೊಳ್ಳಬೇಕು. ಅಥವಾ ವೈದ್ಯರು ಸರಳವಾಗಿ ದೂರವಾಣಿ ಸಂಖ್ಯೆ +91 8046163838 ಗೆ ವಾಟ್ಸ್|ಆಪ್ ಮೆಸೇಜ್ ಕಳಿಸಿದರೆ ಎಕ್ಸ್|ರೇ ಸೇತು ಸೇವೆ ತೆರೆದುಕೊಳ್ಳುತ್ತದೆ. ನಂತರ ಅವರು ರೋಗಿಯ ಎಕ್ಸ್-ರೇ ಚಿತ್ರಗಳ ಮೇಲೆ ಕ್ಲಿಕ್ ಮಾಡಿದರೆ ಸಾಕು. ಕೆಲವೇ ಕ್ಷಣಗಳಲ್ಲಿ 2 ಪೇಜ್|ಗಳಿರುವ ಸ್ವಯಂಚಾಲಿತ ರೋಗ ಲಕ್ಷಣ ಪತ್ತೆಯ ಮಾಹಿತಿ ಮತ್ತು ಚಿತ್ರಗಳು ತೆರೆದುಕೊಳ್ಳುತ್ತವೆ. ಅಲ್ಲದೆ, ರೋಗಿಯ ದೇಹದ ಉಷ್ಣಾಂಶ ವಿವರ ನೀಡುವ ಇನ್|ಫ್ರಾರೆಡ್ ವಿಕಿರಣಗಳ ನಕ್ಷೆಯ ವರದಿಯು ಇಲ್ಲಿ ಕಾಣುತ್ತದೆ.

ಎಕ್ಸ್-ರೇ ಸೇತು ತಂತ್ರಜ್ಞಾನದ ಮೂಲಕ ಯುನೈಟೆಡ್ ಕಿಂಗ್|ಡಂನ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ 1,25,000 ಎಕ್ಸ್|ರೇ ಚಿತ್ರಗಳು ಮತ್ತು ಭಾರತದ 1,000ಕ್ಕಿಂತ ಹೆಚ್ಚಿನ ಕೋವಿಡ್ ಸೋಂಕಿತರ ಎದೆಭಾಗದ ಎಕ್ಸ್-ರೇ ಚಿತ್ರಗಳ ಯಶಸ್ವೀ ಪರೀಕ್ಷೆ ನಡೆಸಿ, ಮೌಲ್ಯೀಕರಿಸಲಾಗಿದೆ. ಎಕ್ಸ್‌ ರೇ ಸೇತು ಅತ್ಯುತ್ತಮ ಕಾರ್ಯಕ್ಷಮತೆ ತೋರುತ್ತಿದ್ದು, 98.86% ಸೂಕ್ಷ್ಮತೆ ಮತ್ತು 74.74% ಗುಣಮಟ್ಟ ನಿರ್ದಿಷ್ಟತೆ ಹೊಂದಿದೆ.

ಆರ್ಟ್|ಪಾರ್ಕ್ ಸಂಸ್ಥಾಪಕ ಮತ್ತು ಸಿಇಒ ಉಮಾಕಾಂತ್ ಸೋನಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ‘ನಮ್ಮ ದೇಶದಲ್ಲಿ ಪ್ರತಿ 10 ಲಕ್ಷ ಜನರಿಗೆ ಕೇವಲ ಒಬ್ಬ ವಿಕಿರಣಶಾಸ್ತ್ರಜ್ಞ (ರೇಡಿಯಾಲಜಿಸ್ಟ್) ಇದ್ದಾರೆ ಎಂಬ ವಾಸ್ತವವನ್ನು ಪರಿಗಣಿಸಿ, ದೇಶದ 136 ಕೋಟಿ ಜನರ ಅಗತ್ಯಗಳನ್ನು ಪರಿಹರಿಸಲು ನಾವು ತಂತ್ರಜ್ಞಾನವನ್ನು ಹೆಚ್ಚಿಸುವ ಅಗತ್ಯವಿದೆ. ಕೈಗಾರಿಕಾ ರಂಗ ಮತ್ತು ಶೈಕ್ಷಣಿಕ ವಲಯದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ಎಕ್ಸ್|ರೇ ಸೇತು ತಂತ್ರಜ್ಞಾನವು ವ್ಯಾಪಕವಾಗಿ ಬಳಕೆಯಾಗುತ್ತಿರುವ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನಕ್ಕೆ ಜಿಗಿಯಲು ಮತ್ತು ಗ್ರಾಮೀಣ ಭಾರತಕ್ಕೆ ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನವನ್ನು ಅತ್ಯಂತ ವೆಚ್ಚ ಪರಿಣಾಮಕಾರಿಯಾಗಿ ಒದಗಿಸಲು ದಾರಿ ಮಾಡಿಕೊಡುತ್ತಿದೆ’ಎಂದರು.

“ಬೆಂಗಳೂರು ಮೂಲದ ನವೋದ್ಯಮ ‘ನಿರಾಮಯಿ’ಸಂಸ್ಥೆಯು ಆರ್ಟ್|ಪಾರ್ಕ್ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಜತೆ ಪಾಲುದಾರಿಕೆ ಹೊಂದಿದ್ದು, ಎಕ್ಸ್ರೇ ಉಪಕರಣಗಳ ಸೌಲಭ್ಯ ಹೊಂದಿರುವ ಗ್ರಾಮೀಣ ವೈದ್ಯರಿಗೆ ಕ್ಷಿಪ್ರ ಕೋವಿಡ್ ಪರೀಕ್ಷೆ ನಡೆಸಲು ತಂತ್ರಜ್ಞಾನವನ್ನು ಒದಗಿಸುತ್ತಿದೆ. ಕೋವಿಡ್ ಸೋಂಕಿಗೆ ಕಾರಣವಾಗುವ ಯಾವುದೇ ರೀತಿಯ ಶ್ವಾಸಕೋಶ ಸಮಸ್ಯೆಗಳಿದ್ದರೆ ಎಕ್ಸ್-ರೇ ಸೇತು ತಂತ್ರಜ್ಞಾನವು ವ್ಯಕ್ತಿಯ ಎದೆಭಾಗದ ಎಕ್ಸ್-ರೇ ಚಿತ್ರಗಳ ಸ್ವಯಂಚಾಲಿತ ಸಮಗ್ರ ಆರೋಗ್ಯ ಮಾಹಿತಿ ಮತ್ತು ನಕ್ಷೆ(ಚಿತ್ರಗಳು)ಗಳನ್ನು ಒದಗಿಸುತ್ತದೆ” ಎನ್ನುತ್ತಾರೆ ‘ನಿರಾಮಯಿ’ ಸಂಸ್ಥಾಪಕಿ ಮತ್ತು ಸಿಇಒ ಡಾ. ಗೀತಾ ಮಂಜುನಾಥ್.

“ಕೋವಿಡ್ ಪಾಸಿಟಿವ್ ಎಕ್ಸ್-ರೇ ಚಿತ್ರಗಳು ಕಾಣಸಿಗದಿದ್ದಾಗ, ಶ್ವಾಸಕೋಶದ ಎಕ್ಸ್-ರೇ ಚಿತ್ರಗಳು ಸುಲಭವಾಗಿ ಲಭ್ಯವಾಗುವಂತೆ, ಶ್ವಾಸಕೋಶದ ಉಪಯುಕ್ತ ಗುಣಲಕ್ಷಣಗಳನ್ನು ಕಲಿಯಲು ಸಹಾಯಕವಾಗುವ, ಅತ್ಯಧಿಕ ಮುನ್ಸೂಚನೆ ನೀಡುವ ಶಕ್ತಿ ಹೊಂದಿರುವ ಏಕೀಕೃತ ವರ್ಗಾವಣೆ ಕಲಿಕಾ ಮಾರ್ಗಸೂಚಿ ತಂತ್ರಜ್ಞಾನವನ್ನು ಸಹ ನಾವು ಅಭಿವೃದ್ಧಿಪಡಿಸಿದ್ದೇವೆ. ಸೋಂಕಿಗೆ ಒಳಗಾದ ಶ್ವಾಸಕೋಶದ ಭಾಗಗಳನ್ನು ಪತ್ತೆ ಮಾಡುವ ಹಾಗೂ ಅದಕ್ಕೆ ಕಾನ್ಫಿಡೆನ್ಸ್(ವಿಶ್ವಾಸಾರ್ಹ) ಸ್ಕೋರ್ ನೀಡುವ ತಂತ್ರಜ್ಞಾನ ವ್ಯವಸ್ಥೆಯನ್ನು ಸಹ ನಾವು ಅಭಿವೃದ್ಧಿಪಡಿಸಿದ್ದೇವೆ. ಈ ವ್ಯವಸ್ಥೆಯು ಮುನ್ಸೂಚನೆಯನ್ನು ನೀಡುತ್ತದೆ, ಸೋಂಕಿತ ಭಾಗಗಳನ್ನು ನಿರ್ಬಂಧಿಸಿ ವಿಶ್ವಾಸಾರ್ಹ ಸ್ಕೋರ್ ನೀಡುವ ವರದಿ ತಯಾರಿಸುತ್ತದೆ. ಇದೆಲ್ಲವೂ ಕೆಲವೇ ನಿಮಿಷಗಳಲ್ಲಿ” ಎನ್ನುತ್ತಾರೆ ಐಐಎಸ್ಸಿ ಪ್ರಾಧ್ಯಾಪಕ ಪ್ರೊ. ಚಿರಂಜೀಬ್ ಭಟ್ಟಾಚಾರ್ಯ.

ಎಕ್ಸ್-ರೇ ಸೇತು ತಂತ್ರಜ್ಞಾನವು ಕೋವಿಡ್-19  ಸೋಂಕಿನ ಪತ್ತೆಯ ಜತೆಗೆ, ಕ್ಷಯ ಮತ್ತು ನ್ಯೂಮೋನಿಯಾ ಜತೆಗೆ ಶ್ವಾಸಕೋಶಕ್ಕೆ ಸಂಬಂಧಿಸಿದ 14 ಕಾಯಿಲೆಗಳನ್ನು ಪತ್ತೆ ಮಾಡುತ್ತದೆ. ಈ ತಂತ್ರಜ್ಞಾನವನ್ನು ಅನಲಾಗ್ ಮತ್ತು ಡಿಜಿಟಲ್ ಎಕ್ಸ್-ರೇ ಎರಡಕ್ಕೂ ಬಳಸಬಹುದು. ಕಳೆದ 10 ತಿಂಗಳಲ್ಲಿ ಗ್ರಾಮೀಣ ಪ್ರದೇಶದ 300ಕ್ಕಿಂತ ಹೆಚ್ಚಿನ ವೈದ್ಯರು ಪ್ರಾಯೋಗಿಕವಾಗಿ ಇದನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಎಕ್ಸ್-ರೇ ಸೇತು ತಂತ್ರಜ್ಞಾನವು ಮೊಬೈಲ್ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಚಾಲಿತ ವ್ಯವಸ್ಥೆಯನ್ನು ಶಕ್ತಗೊಳಿಸಬಲ್ಲದು. ಇದು ಗ್ರಾಮೀಣ ಭಾರತಕ್ಕೆ ಅಲ್ಪವೆಚ್ಚದಲ್ಲಿ ಆರೋಗ್ಯ ಸಂರಕ್ಷಣಾ ಸೇವೆ ಎಲ್ಲರಿಗೂ ಸಿಗುವಂತೆ ಮಾಡಲು ಶಕ್ತವಾಗಿದೆ.

ಎಕ್ಸ್-ರೇ ಸೇತು ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸಲಹೆ ನೀಡಿದ ಮತ್ತು ಮೊದಲ ಬಾರಿಗೆ ಅದನ್ನು ಬಳಸಿದ ಮಂಗಳೂರಿನ ಕಸ್ತೂರ್|ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಪದ್ಮನಾಭ್ ಆರೋಗ್ಯ ಸಂರಕ್ಷಣೆಗೆ ತಂತ್ರಜ್ಞಾನ ಬಳಕೆ ವ್ಯಾಪಕವಾಗಬೇಕು ಎಂದು ಒತ್ತು ನೀಡಿದ್ದಾರೆ.

‘ಇಂತಹ ತಂತ್ರಜ್ಞಾನ ಆಧರಿತ ಆರೋಗ್ಯ ಸಂರಕ್ಷಣಾ ಸೇವೆಗಳನ್ನು ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯಬಹುದು’ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಎ.ಡಿ. ಅನಿಲ್ ಕುಮಾರ್ ಅವರು ಈ ತಂತ್ರಜ್ಞಾನವನ್ನು ಮೊದಲಿಗೆ ಬಳಸಿದ್ದು, ‘ರೋಗಿಗಳ ರೋಗ ಲಕ್ಷಣಗಳನ್ನು ತ್ವರಿತವಾಗಿ ಪತ್ತೆ ಮಾಡಲು ಇದು ಸಹಾಯಕವಾಗಿದೆ’ ಎಂದಿದ್ದಾರೆ.

‘ವಿವಿಧ ಸ್ವರೂಪದ ರೋಗ ಪತ್ತೆಯಿಂದ ಹಿಡಿದು, ಔಷಧ ವಿನ್ಯಾಸ, ಜೈವಿಕ ವೈದ್ಯಕೀಯ ಸಾಧನಗಳು ಮತ್ತು ಟೆಲಿಮೆಡಿಸಿನ್|ವರೆಗೆ ದೇಶದ ಆರೋಗ್ಯ ಸಂರಕ್ಷಣಾ ವಲಯ ಎದುರಿಸುತ್ತಿರುವ ನಾನಾ ಸವಾಲುಗಳನ್ನು ಪರಿಹರಿಸಲು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸ್ಥಾಪಿಸಿರುವ ಹಲವಾರು ಸೈಬರ್-ಭೌತಿಕ ವ್ಯವಸ್ಥೆಗಳು ಆರ್ಟಿಫಿಷಿಯಲ್ ಇಂಟಲಿಜೆನ್ಸ್, ವರ್ಚುಯಲ್ ರಿಯಾಲಿಟಿ, ಡೇಟಾ ಅನಾಲಿಟಿಕ್ಸ್, ರೊಬೊಟಿಕ್ಸ್, ಸೆನ್ಸಾರ್ಸ್ ಮತ್ತು ಇತರೆ ಸಾಧನ ಮತ್ತು ತಂತ್ರಜ್ಞಾನಗಳ ಮೇಲೆ ಕೆಲಸ ಮಾಡುತ್ತಿವೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊಫೆಸರ್ ಅಶುತೋಷ್ ಶರ್ಮಾ  ತಿಳಿಸಿದ್ದಾರೆ.

ನ್ಯಾಶನಲ್ ಮಿಷನ್ ಆನ್ ಇಂಟರ್|ಡಿಸಿಪ್ಲಿನರಿ ಸೈಬರ್ – ಫಿಸಿಕಲ್ ಸಿಸ್ಟಮ್ಸ್|ನ ಉಪಕ್ರಮದಡಿ ಆರ್ಟ್|ಪಾರ್ಕ್ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ. ಈ ಪ್ರತಿಷ್ಠಾನವು ಮೂಲಸೌಕರ್ಯ ಪಾಲುದಾರರಾದ ಸಿ-ಡಾಕ್(ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ಪರಮ್ ಸಿದ್ಧಿ ಸೂಪರ್  ನಿಯಂತ್ರಣ ಮಾಡಲು) ಹಾಗೂ ಉಚಿತ ಎಕ್ಸ್-ರೇ ತಂತ್ರಜ್ಞಾನ ಸೇವೆಯನ್ನು ಎಲ್ಲಾ ಗ್ರಾಮೀಣ ವೈದ್ಯರಿಗೆ ಹೆಚ್ಚಿಸಲು ಒದಗಿಸಲು ಎನ್|ವಿಡಿಯಾ ಮತ್ತು ಎಡಬ್ಲ್ಯುಎಸ್ ಸಂಸ್ಥೆಗಳ ಜತೆ ಸಹಭಾಗಿತ್ವ ಹೊಂದುತ್ತಿದೆ.

ಹೆಚ್ಚಿನ ಮಾಹಿತಿಗಾಗಿ, ಆರ್ಟ್|ಪಾರ್ಕ್ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಸಿಇಒ ಉಮಾಕಾಂತ್ ಸೋನಿ ಅವರನ್ನು [email protected] ಇಲ್ಲಿ ಸಂಪರ್ಕಿಸಬಹುದು

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಚನ್ನರಾಯಪಟ್ಟಣ ರೈತ ಹೋರಾಟಗಾರರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ

ಚನ್ನರಾಯಪಟ್ಟಣ ರೈತ ಹೋರಾಟಗಾರರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ

ದೇವನಹಳ್ಳಿ ಚನ್ನರಾಯಪಟ್ಟಣದ ರೈತ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಹೋರಾಟ ಒಕ್ಕೂಟದ ಮುಖಂಡರೊಂದಿಗೆ ಸಭೆ ನಡೆಸಿದ Cmsiddaramaiah

[ccc_my_favorite_select_button post_id="110536"]
ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ (Bamul) ನಿರ್ದೇಶಕ ಸ್ಥಾನಕ್ಕೆ ದೊಡ್ಡಬಳ್ಳಾಪುರದಿಂದ ವಿಜೇತರಾದ ಬಿ.ಸಿ.ಆನಂದ್ ಕುಮಾರ್ (B.C.Ananad Kumar) ಅವರನ್ನು ಬಿ.ವೈ.ವಿಜಯೇಂದ್ರ (B.Y.Vijayendra)

[ccc_my_favorite_select_button post_id="110404"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಬಾಲ್ಯ ವಿವಾಹ ತಡೆಯುವಲ್ಲಿ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ; ಜಿಲ್ಲಾಧಿಕಾರಿ ಎ.ಬಿ.ಬಸವರಾಜು

ಬಾಲ್ಯ ವಿವಾಹ ತಡೆಯುವಲ್ಲಿ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ; ಜಿಲ್ಲಾಧಿಕಾರಿ

ಬಾಲ್ಯ ವಿವಾಹಗಳನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಜಾಗೃತರಾಗಿದ್ದು, ಬಾಲ್ಯ ವಿವಾಹ (Child marriage) ಪ್ರಕರಣಗಳನ್ನು ಶೂನ್ಯಕ್ಕೆ ತರುವಲ್ಲಿ ಸೂಕ್ತ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು

[ccc_my_favorite_select_button post_id="110547"]
ದೊಡ್ಡಬಳ್ಳಾಪುರ: ವಿದ್ಯುತ್ ತಂತಿ ಬಿದ್ದು ಇಬ್ಬರು ಕಾರ್ಮಿಕರ ಸ್ಥಿತಿ ಗಂಭೀರ..!

ದೊಡ್ಡಬಳ್ಳಾಪುರ: ವಿದ್ಯುತ್ ತಂತಿ ಬಿದ್ದು ಇಬ್ಬರು ಕಾರ್ಮಿಕರ ಸ್ಥಿತಿ ಗಂಭೀರ..!

ವಿದ್ಯುತ್ ತಂತಿಬಿದ್ದು ಇಬ್ಬರು ಕಾರ್ಮಿಕರು (laborer) ಗಂಭೀರವಾಗಿ ಗಾಯಗೊಂಡರುವ ಘಟನೆ ಕರೇನಹಳ್ಳಿಯಲ್ಲಿ ಮಂಗಳವಾರ ಮದ್ಯಾಹ್ನ ನಡೆದಿದೆ.

[ccc_my_favorite_select_button post_id="110354"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!