ದೊಡ್ಡಬಳ್ಳಾಪುರ: ಕರೊನಾ ಮೂರನೇ ಅಲೆಯನ್ನು ಎದುರಿಸಲು ಮಕ್ಕಳು ಅಪೌಷ್ಟಿಕತೆಯಿಂದ ದೂರ ಉಳಿಯುವುದು ಅತ್ಯವಶ್ಯಕವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ತಿಳಿಸಿದರು.
ನಗರದ ತಾಲೂಕು ವೈದ್ಯಾಧಿಕಾರಿ ಕಛೇರಿಯಲ್ಲಿ ಆವರಣದಲ್ಲಿ ವಾತ್ಸಲ್ಯ ಧಾಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಕ್ಕಳಿಗಾಗಿ ನೀಡಲಾದ ಔಷಧ, ಸಿರಫ್ ಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕೋವಿಡ್ 19 ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರಲಿದೆ ಎಂದು ತಜ್ಞರು ಸಲಹೆ ನೀಡುತ್ತಿದ್ದು, ಅದನ್ನು ಎದುರಿಸಲು ತಾಲೂಕಿನ ಮಕ್ಕಳಿಗೆ ಉಪಯುಕ್ತವಾದ ಔಷಧಿ ಮತ್ತು ಪೌಷ್ಟಿಕಾಂಶದ ಸಿರಫ್ ಗಳನ್ನು ಟ್ರಸ್ಟ್ ನವರು ಹೆಚ್ಚಿನ ಪ್ರಮಾಣದಲ್ಲಿ ನೀಡಿರುವುದು ಪ್ರಶಂಸನೀಯ ವಿಷಯವಾಗಿದೆ. ಈ ಔಷಧಗಳನ್ನು ಸರಕಾರ ಜಾರಿಗೊಳಿಸಿರುವ ಮಕ್ಕಳ ವೈದ್ಯರ ನಡಿಗೆ ಹಳ್ಳಿ ಮಕ್ಕಳ ಕಡೆಗೆ ಕಾರ್ಯಕ್ರಮದಲ್ಲಿ ಅವಶ್ಯಕವಿರುವ ಮಕ್ಕಳಿಗೆ ವಿತರಿಸಲಾಗುವುದು ಎಂದರು.
ವಾತ್ಸಲ್ಯ ಧಾಮ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಅರ್ಜುನ್ ವೈ.ಎನ್ ಮಾತನಾಡಿ, ಕರೊನಾದ ಮೂರನೇ ಅಲೆಯ ಸಂಧರ್ಭದಲ್ಲಿ ಮಕ್ಕಳ ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸಲು ಸಾರ್ವಜನಿಕರಿಗೆ ಸಹಕಾರದೊಂದಿಗೆ ಔಷಧಿಗಳನ್ನು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಔಷಧಿಗಳನ್ನು ತಲುಪಿಸಲು ಪ್ರಯತ್ನಿಸಲಾಗುವುದು ಎಂದರು.
ಈ ವೇಳೆ ಡಾ.ಚಿದಾನಂದ, ಡಾ.ಪಾಟೀಲ್, ಡಾ.ರುದ್ರೇಶ್, ಡಾ.ಗಂಗಾ, ಡಾ.ಸಿಮ್ರಾನ್, ವಾತ್ಸಲ್ಯ ಧಾಮ ಚಾರಿಟಬಲ್ ಟ್ರಸ್ಟ್ ನ ಗೌರವ ಅಧ್ಯಕ್ಷರು ಲೀಲಾವತಿ.ಟಿ.ಈ, ಖಜಾಂಚಿ ಪವನ್ ಕುಮಾರ್.ಕೆ, ನಿರ್ದೇಶಕಿ ಹರ್ಷಿತಾ, ನಿರ್ದೇಶಕ ದಿವಾಕರ್, ಸದಸ್ಯರಾದ ಪ್ರವೀಣ್, ಪ್ರಿಯಾಂಕ ಹೋಟೆಲ್ ಬಾಲು, ಉಲ್ಲಾಸ್, ನಮೋದಯ ಚೇತನ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..