ದೊಡ್ಡಬಳ್ಳಾಪುರ: ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಕೇಂದ್ರ ಸರ್ಕಾರದ ಸಹಭಾಗೀತ್ವದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಆದರೆ ಈ ವಿಮೆ ಮಾಡಿಸಲು ತಾಲೂಕಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ.
ಬೆಳೆ ವಿಮೆ ಮಾಡಿಸಲು ಸಾಲ ಪಡೆದ ರೈತರಿಗೆ ಬ್ಯಾಂಕ್ ಗಳಲ್ಲಿ ಬ್ಯಾಂಕ್ ಸಿಬ್ಬಂದಿಗಳು ಸ್ವಯಂ ವಿಮೆ ಮಾಡುತ್ತಾರೆ.ಆದರೆ ಸಾಲ ಪಡೆಯದ ರೈತರು ಖಾಸಗಿಯಾಗಿ ಸಿಎಸ್ಸಿ ಕೇಂದ್ರಗಳಲ್ಲಿ ಮಾಡಿಸಬೇಕಿದೆ. ಆದರೆ ಕೃಷಿ ಇಲಾಖೆ, ವಿಮೆ ಕಂಪನಿಗಳು ಯೋಜನೆಯ ಕುರಿತಾದ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇನ್ನೂ ಈ ಕುರಿತು ಸಿಎಸ್ಸಿ ಕೇಂದ್ರಗಳಲ್ಲಿ ವಿಚಾರಿಸಿದರೆ ಆನ್ಲೈನ್ ಮೂಲಕ ತರಬೇತಿ ಹೊರತುಪಡಿಸಿ ಕೃಷಿ ಇಲಾಖೆ ಹಾಗೂ ವಿಮೆ ಕಂಪನಿ ಮಾಹಿತಿ ಅಥವಾ ಅರ್ಜಿ ನೀಡಿಲ್ಲ. ಬಹುತೇಕ ರೈತರು ವಿಮೆ ಆಸಕ್ತಿ ಹೊಂದಿದ್ದಾರೆ. ಆದರೆ ಅರ್ಜಿ ಇಲ್ಲದೆ ವಿಮೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ.
ರೈತರ ಬೆಳೆಗಳ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಬೆಳೆ ವಿಮೆಯ ಗರಿಷ್ಠ ಲಾಭ ರೈತರಿಗೆ ತಲುಪುವಂತೆ ಕೇಂದ್ರ ಸರ್ಕಾರವು 2021-22ರ ಆರ್ಥಿಕ ವರ್ಷಕ್ಕೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (ಪಿಎಂಎಫ್‌ಬಿವೈ) ಗೆ 16,000 ಕೋಟಿ ರೂ. ನೀಡಿದೆ. ಇದು ಹಿಂದಿನ 2020-21ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಸುಮಾರು 305 ಕೋಟಿ ರೂ.ಗಳ ಬಜೆಟ್ ಹೆಚ್ಚಳವಾಗಿದೆ. ಇದು ದೇಶದ ಕೃಷಿ ಕ್ಷೇತ್ರದ ಬೆಳವಣಿಗೆಗೆ ಸರ್ಕಾರದ ಬದ್ಧತೆ ಪುನರುಚ್ಚರಿಸುತ್ತದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಸಚಿವಾಲಯದ ಪ್ರಕಾರ, ಐದು ವರ್ಷಗಳ ಹಿಂದೆ ಜನವರಿ 13, 2016 ರಂದು ಭಾರತ ಸರ್ಕಾರ ಈ ಪ್ರಮುಖ ಬೆಳೆ ವಿಮಾ ಯೋಜನೆಗೆ ಅನುಮೋದನೆ ನೀಡಿತು. ರೈತರಿಗೆ ದೇಶಾದ್ಯಂತ ಕಡಿಮೆ ಏಕರೂಪದ ಪ್ರೀಮಿಯಂನಲ್ಲಿ ಸಮಗ್ರ ಪರಿಹಾರವನ್ನು ಒದಗಿಸುವ ಮೈಲಿಗಲ್ಲು ಉಪಕ್ರಮವಾಗಿ ಈ ಯೋಜನೆಯನ್ನು ರೂಪಿಸಲಾಯಿತು. ಇಂದು, ಪಿಎಂಎಫ್‌ಬಿವೈ ಜಾಗತಿಕವಾಗಿ ರೈತರ ಭಾಗವಹಿಸುವಿಕೆಯ ದೃಷ್ಟಿಯಿಂದ ಅತಿದೊಡ್ಡ ಬೆಳೆ ವಿಮಾ ಯೋಜನೆಯಾಗಿದೆ ಮತ್ತು ಪ್ರೀಮಿಯಂ ವಿಷಯದಲ್ಲಿ 3 ನೇ ದೊಡ್ಡ ಯೋಜನೆಯಾಗಿದೆ. 5.5 ಕೋಟಿಗೂ ಹೆಚ್ಚು ರೈತ ಅರ್ಜಿಗಳನ್ನು ವರ್ಷದಿಂದ ವರ್ಷಕ್ಕೆ ಸ್ವೀಕರಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ 5 ವರ್ಷಗಳಲ್ಲಿ, ರೈತರು – ಕಲ್ಯಾಣ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ರಚನಾತ್ಮಕ, ವ್ಯವಸ್ಥಾಪನಾ ಮತ್ತು ಇತರ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (ಪಿಎಂಎಫ್‌ಬಿವೈ) ಯೋಜನೆಯನ್ನು ಪುನರುಜ್ಜೀವನಗೊಳಿಸಲು ವ್ಯಾಪಕವಾಗಿ ಕೆಲಸ ಮಾಡುತ್ತಿದೆ. ಆದರೆ ಕೆಲ ಅಧಿಕಾರಿಗಳ ಬೇಜವಬ್ದಾರಿಯಿಂದ ಯೋಜನೆಯ ಲಾಭ ರೈತರಿಗೆ ದೊರಕದಾಗಿರುವುದು ವಿಪರ್ಯಾಸ.
ಅಧಿಕಾರಿಗಳ ವೈಫಲ್ಯ: ಕಾಳಜಿಹೀನ ಅಧಿಕಾರಿಗಳಿಂದಾಗಿ ರೈತರಿಗೆ ಯೋಜನೆಗಳು ತಲುಪುತ್ತಿಲ್ಲ. ಮಳೆ ತೀವ್ರವಾಗಿ ಸುರಿದು ಬೆಳೆ ನಷ್ಟವಾಗುತ್ತಿದೆ. ವಿಮೆ ಮಾಡಿಸಿದರೆ ರೈತನಿಗೆ ಅನುಕೂಲ. ಆದರೆ ಅಧಿಕಾರಿಗಳು ಮಾಹಿತಿ ನೋಡುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಸಂತ್ ಬೇಸರ ವ್ಯಕ್ತಪಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..