ಎಸ್.ಎಸ್.ಎಲ್.ಸಿ ಫಲಿತಾಂಶದ ದಿಕ್ಕು ಬದಲಿಸುತ್ತಿರುವ ಜಿಲ್ಲಾಧಿಕಾರಿ ಆರ್.ಲತಾ

ಚಿಕ್ಕಬಳ್ಳಾಪುರ: ಜಿಲ್ಲಾಪಂಚಾಯಿತಿ ಸಿಇಒ ಹುದ್ದೆ ಕಾರ್ಯ ನಿರ್ವಹಿಸುವಾಗಿನಿಂದ, ಜಿಲ್ಲಾಧಿಕಾರಿಯಾಗಿ ಒತ್ತಡದ ಕಾರ್ಯ ನಿರ್ವಹಿಸುತ್ತಿದ್ದರು, ವಿದ್ಯಾರ್ಥಿಗಳ ಜೀವನದ ಮೊದಲ ಮೈಲಿಗಲ್ಲಾದ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳಕ್ಕೆ ಆರ್.ಲತಾ ಅವರು ಕೈಗೊಂಡ ಕ್ರಮಗಳಿಗೆ ಉತ್ತಮ ಫಲಿತಾಂಶ ದೊರಕುತ್ತಿದೆ‌.

ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಪಂ ಸಿಇಒ ಆಗಿದ್ದ ವೇಳೆ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳಕ್ಕೆ ಹಲವು ಕ್ರಮಗಳನ್ನು ಕೈಗೊಂಡು ಹೆಚ್ಚಿನ ಫಲಿತಾಂಶ ದೊರಕಿಸುವಲ್ಲಿ ಯಶಸ್ವಿಯಾಗಿದ್ದರು ಆರ್.ಲತಾ.

ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು, ಕಳೆದ ಎರಡು ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಜಿಲ್ಲೆ  ಹೊಸ ದಾಖಲೆಯನ್ನು ಬರೆಯುವ ಮೂಲಕ ಜಿಲ್ಲೆಯ ಶೈಕ್ಷಣಿಕ ಪ್ರಗತಿ, ಮುನ್ನೋಟಕ್ಕೆ ದಿಕ್ಸೂಚಿಯಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಜಿಲ್ಲೆಯ ಎಸ್.ಎಸ್.ಎಲ್.ಸಿ ಉತ್ತಮ ಫಲಿತಾಂಶದ ಸಾಧನೆ  ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ ಆರ್.ಲತಾ, ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  625 ಅಂಕಗಳಿಗೆ 625 ಅಂಕಗಳನ್ನೂ ಪಡೆದ 157 ವಿದ್ಯಾರ್ಥಿಗಳ ರಾಜ್ಯ ಪಟ್ಟಿಯಲ್ಲಿ  ಚಿಕ್ಕಬಳ್ಳಾಪುರ ಜಿಲ್ಲೆಯ30 ವಿದ್ಯಾರ್ಥಿಗಳು ಸ್ಥಾನ ಕಾಯ್ದುಕೊಂಡಿರುವುದಲ್ಲದೇ ಇಡೀ ರಾಜ್ಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಜಿಲ್ಲೆಯಾಗಿ ಹೊರಹೊಮ್ಮಿದೆ.  ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಕಳೆದ ಬಾರಿಯ ಪರೀಕ್ಷೆಯಲ್ಲೂ ಪಡೆದುಕೊಂಡಿದ್ದ ಜಿಲ್ಲೆ ಈ ಬಾರಿಯ ಪರೀಕ್ಷೆಯಲ್ಲೂ ಮತ್ತೊಂದು ಪ್ರಥಮಕ್ಕೆ ಭಾಜನವಾಗಿದೆ.

ರಾಜ್ಯಮಟ್ಟದಲ್ಲಿ ಅತ್ಯುನ್ನತ ಶ್ರೇಯಾಂಕ ಗಳಿಸಿದ ಜಿಲ್ಲೆಯ 30 ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಗ್ರಾಮೀಣ ಭಾಗದವರಾಗಿರುವುದು ವಿಶೇಷ. ಇವರ ಅತ್ಯುತ್ತಮ ಸಾಧನೆ ನಿಜಕ್ಕೂ ಇತರೆ ವಿದ್ಯಾರ್ಥಿಗಳಿಗೆ  ಮಾದರಿ ಮತ್ತು  ಪ್ರೇರಣಾದಾಯಕವಾಗಿ  ನಂತರ ಬರುವ ಕಿರಿಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧಕರಾಗಲು ಸಹಕಾರಿಯಾಗಲಿದೆ. ಈ ಬಾರಿಯ ಫಲಿತಾಂಶದಲ್ಲಿ ಶೇ.100 ರಷ್ಟು ಅಂಕಗಳನ್ನು ಪಡೆದವರ ಪೈಕಿ ಜಿಲ್ಲೆಯ 30 ವಿದ್ಯಾರ್ಥಿಗಳಿದ್ದು,ಶೇ.19.10 ರಷ್ಟು ವಿದ್ಯಾರ್ಥಿಗಳಿರುವುದು ಹೆಗ್ಗಳಿಕೆಗೆ ಕಾರಣವಾಗಿದೆ. 

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜಾರಿಗೆ ಬಂದ ಹೊಸ ಪರೀಕ್ಷಾ ಪದ್ದತಿಯಿಂದ ವಿದ್ಯಾರ್ಥಿಗಳು ಧೃತಿಗೆಡದ ಹಾಗೆ ಹಲವು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕಾಲ ಕಾಲಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ಸೂಚನೆಗಳನ್ನು ನೀಡಿತ್ತು. ಅಲ್ಲದೇ ಜಿಲ್ಲೆಯ ಎಲ್ಲಾ ಶಿಕ್ಷಕರಿಗೂ ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವನ್ನೂ ತುಂಬುವ ಕೆಲಸವನ್ನು ಆಗಾಗ್ಗೆ ಶಿಕ್ಷಕರು ಮತ್ತು ಅಧಿಕಾರಿಗಳ ಮುಖಾಂತರ ಮಾಡಲಾಗಿತ್ತು.

ಮಕ್ಕಳ ಜೊತೆಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಎಲ್ಲಿಯೂ ಕಲಿಕಾ ಪ್ರಕ್ರಿಯೆ ಮತ್ತು ಪರೀಕ್ಷಾ ಸಿದ್ದತೆಗಳು ಕಡಿತಗೊಳ್ಳದಂತೆ ನಿಗಾ ವಹಿಸಲಾಗಿತ್ತು. ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ, ಆನ್‌ಲೈನ್ ಸಂವಾದ, ಗುಣಾತ್ಮಕ ಬೋಧನೆ, ವಾರದ  ಮತ್ತು  ಮಾಸಿಕ ಪರೀಕ್ಷೆ, ಬಹು ಆಯ್ಕೆ ಪ್ರಶ್ನೆಗಳುಳ್ಳ ಮಾದರಿ ಪರೀಕ್ಷೆ ಆಯೋಜನೆ, ಪಠ್ಯಾಧಾರಿತ ರಸಪ್ರಶ್ನೆ ಸ್ಪರ್ಧೆಗಳು ಮತ್ತು ಪೂರ್ವ ಸಿದ್ದತಾ ಪರೀಕ್ಷೆಗಳು ಹಾಗೂ  ವಿಶೇಷ ಆಸಕ್ತಿವಹಿಸಿ ಜಿಲ್ಲಾಡಳಿತವೇ ಸರಳೀಕರಿಸಿ ಸಿದ್ಧಪಡಿಸಿದ ಪ್ರಶ್ನೋತ್ತರ ಸಾಮಗ್ರಿ (ಸ್ಟಡಿ ಮೆಟೇರಿಯಲ್) ವಿತರಣೆ ಸೇರಿದಂತೆ ಈ ಎಲ್ಲಾ ಪೂರ್ವ ಸಿದ್ಧತಾ ಕ್ರಮಗಳು ಹಾಗೂ ವಿದ್ಯಾರ್ಥಿಗಳಿಗೆ ನೀಡಿದ ಪ್ರೋತ್ಸಾಹದ ಫಲವಾಗಿ ರಾಜ್ಯಮಟ್ಟದಲ್ಲಿ ಗಮನಸೆಳೆಯುವಂತ ಫಲಿತಾಂಶ ಜಿಲ್ಲೆಗೆ ಬಂದಿದ್ದು ಕಳೆದೆರಡು ದಶಕಗಳಲ್ಲಿ ಈ ಮಟ್ಟದ ದಾಖಲೆಯ ಫಲಿತಾಂಶ ಬಂದಿರುವುದಿಲ್ಲ.

ಇದೇ ಪ್ರಪ್ರಥಮ ಬಾರಿಗೆ ಜಿಲ್ಲೆಯ ಶೈಕ್ಷಣಿಕ ಇತಿಹಾಸದಲ್ಲಿ ಮೈಲಿಗಲ್ಲಾಗಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಫಲಿತಾಂಶ ಜಿಲ್ಲೆಯ ಪಾಲಿಗೆ ದೊರೆತಿದೆ ಎಂದರು.

ಪರೀಕ್ಷೆ ಬರೆದ ಜಿಲ್ಲೆಯ  ವಿದ್ಯಾರ್ಥಿಗಳ ಪೈಕಿ ಶೇ.30.30 ರಷ್ಟು ವಿದ್ಯಾರ್ಥಿಗಳು ಎ.ಪ್ಲಸ್ ಗ್ರೇಡ್, ಶೇ.40.57 ರಷ್ಟು ವಿದ್ಯಾರ್ಥಿಗಳು ‘ಎ’ಗ್ರೇಡ್ ಮತ್ತು   ಶೇ.27.39 ರಷ್ಟು ವಿದ್ಯಾರ್ಥಿಗಳು ‘ಬಿ’ ಗ್ರೇಡ್ ಹಾಗೂ ಶೇ.1.74 ರಷ್ಟು ವಿದ್ಯಾರ್ಥಿಗಳು (275 ವಿದ್ಯಾರ್ಥಿಗಳು ಮಾತ್ರ) ‘ಸಿ’ ಗ್ರೇಡ್ ಪಡೆದಿರುತ್ತಾರೆ. ಒಟ್ಟಾರೆಯಾಗಿ ಜಿಲ್ಲೆಗೆ ಶೇ.100 ರಷ್ಟು ಫಲಿತಾಂಶ ಬಂದಿರುತ್ತದೆ. 

ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಅಗಲಗುರ್ಕಿಯ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಾಧಕ ವಿದ್ಯಾರ್ಥಿಗಳ ಸಂವಾದದಲ್ಲಿ ವಿದ್ಯಾರ್ಥಿಗಳು ಜಿಲ್ಲಾಡಳಿತ ತೆಗೆದುಕೊಂಡಿದ್ದ ಸಕಾರಾತ್ಮಕ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಸಿಎಂ ಸಿದ್ದರಾಮಯ್ಯ| Cmsiddaramaiah

ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಸಿಎಂ ಸಿದ್ದರಾಮಯ್ಯ| Cmsiddaramaiah

ಐದೂ ಗ್ಯಾರಂಟಿಗಳು ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸೇರಿವೆ. ನಾವು ಸಕಲರ ಅಭಿವೃದ್ಧಿ ರೂಪಿಸಿದ್ದರಿಂದಲೇ ರಾಜ್ಯದ ಆರ್ಥಿಕತೆ ವೇಗ ಪಡೆದುಕೊಂಡಿದೆ. Cmsiddaramaiah

[ccc_my_favorite_select_button post_id="97667"]
ಭ್ರಷ್ಟಾಚಾರದ ಸುಳಿಯಿಂದ ಹೊರಬಂದು ದಾಖಲೆ ಲಾಭದೆಡೆಗೆ KSDL..!

ಭ್ರಷ್ಟಾಚಾರದ ಸುಳಿಯಿಂದ ಹೊರಬಂದು ದಾಖಲೆ ಲಾಭದೆಡೆಗೆ KSDL..!

ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ 2032ರ ವೇಳೆಗೆ ರೂ 8,000 ಕೋಟಿ (1 ಬಿಲಿಯನ್ ಡಾಲರ್) ಗೆ ಏರಿಸುವ ಗುರಿಯಿದೆ. KSDL

[ccc_my_favorite_select_button post_id="97673"]
Cyclone Fengal: ಚೆನ್ನೈನಲ್ಲಿ ತಪ್ಪಿದ ವಿಮಾನ ದುರಂತ..!| Viral video

Cyclone Fengal: ಚೆನ್ನೈನಲ್ಲಿ ತಪ್ಪಿದ ವಿಮಾನ ದುರಂತ..!| Viral video

ಇಂಡಿಗೋ ವಿಮಾನದ ವೀಡಿಯೊ ವೈರಲ್ ಆಗಿದ್ದು, ಹಲವಾರು ಬಳಕೆದಾರರು ಭಯಾನಕ ಕ್ಷಣಕ್ಕೆ ಪ್ರತಿಕ್ರಿಯಿಸಿದ್ದಾರೆ. Cyclone Fengal

[ccc_my_favorite_select_button post_id="97582"]

happy international men’s day 2024

[ccc_my_favorite_select_button post_id="96756"]

tirumala; ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್.!

[ccc_my_favorite_select_button post_id="96752"]

shabarimale ಮಂಡಲ ಪೂಜೆ ಆರಂಭ: ಮೊದಲ ದಿನವೇ

[ccc_my_favorite_select_button post_id="96574"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ| Cmsiddaramaiah

ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ|

ಇಂಥಾದ್ದಕ್ಕೆಲ್ಲಾ ಹೆದರಿದ್ದರೆ ರಾಜಕಾರಣದಲ್ಲಿ ಉಳಿಯೋಕೆ ಆಗ್ತಿರಲಿಲ್ಲ. ಯಾವ ತಪ್ಪು ಮಾಡದ ನಾನು ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ Cmsiddaramaiah

[ccc_my_favorite_select_button post_id="97644"]
Suicide: ಮಿಲ್ಟ್ರಿ ಹೋಟೆಲ್ ಮಾಲೀಕ ನೇಣಿಗೆ ಶರಣು..!

Suicide: ಮಿಲ್ಟ್ರಿ ಹೋಟೆಲ್ ಮಾಲೀಕ ನೇಣಿಗೆ ಶರಣು..!

ಮುಂಜಾನೆ ಹೋಟೆಲ್‌ ತೆಗೆಯದೆ ಇದ್ದಾಗ ಸ್ಥಳೀಯರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. Suicide

[ccc_my_favorite_select_button post_id="97641"]
Accident: ಬ್ಯಾಂಕಾಕ್ ಪ್ರವಾಸ ಮುಗಿಸಿ ಬಂದ ಮೂವರು ಅಪಘಾತದಲ್ಲಿ ಸಾವು..!

Accident: ಬ್ಯಾಂಕಾಕ್ ಪ್ರವಾಸ ಮುಗಿಸಿ ಬಂದ ಮೂವರು ಅಪಘಾತದಲ್ಲಿ ಸಾವು..!

ಬಿಮ್ಸ್ ಆಸ್ಪತ್ರೆಯ ಕ್ಯಾನ್ಸರ್ ವೈದ್ಯ ಡಾ.ಗೋವಿಂದರಾಜುಲು, ನೇತ್ರ ತಜ್ಞ ಡಾ.ಯೋಗೀಶ್ ಮತ್ತು ವಕೀಲ ವೆಂಕಟನಾಯ್ಡು ಸ್ಥಳದಲ್ಲೇ ಮೃತಪಟ್ಟವರು. Accident

[ccc_my_favorite_select_button post_id="97560"]

ಆರೋಗ್ಯ

ಸಿನಿಮಾ

Darshan ಪ್ರಕರಣ: ಕೊಲ್ಲುವ ಉದ್ದೇಶವಿದ್ದರೆ ಊಟ, ನೀರು ತಂದುಕೊಡಿ, ಪೊಲೀಸರಿಗೆ ಒಪ್ಪಿಸಿ ಎನ್ನಲು ಸಾಧ್ಯವೇ..?;  ನ್ಯಾಯವಾದಿ ಸಿವಿ ನಾಗೇಶ್ ಪ್ರಬಲ ವಾದ

Darshan ಪ್ರಕರಣ: ಕೊಲ್ಲುವ ಉದ್ದೇಶವಿದ್ದರೆ ಊಟ, ನೀರು ತಂದುಕೊಡಿ, ಪೊಲೀಸರಿಗೆ ಒಪ್ಪಿಸಿ ಎನ್ನಲು

ಸಾಕ್ಷಿಯ ಫೋಟೋದಲ್ಲಿರುವ ಪ್ಯಾಂಟ್, ಅವರು ತೋರಿಸಿರುವ ಪ್ಯಾಂಟ್ ಬೇರೆ ಇದೆ. ಪ್ಯಾಂಟನ್ನೇ ಪೊಲೀಸರು ಬದಲಾಯಿಸಿದ್ದಾರೆ. Darshan

[ccc_my_favorite_select_button post_id="97390"]

pushpa 2 ಟ್ರೇಲರ್ ಬಿಡುಗಡೆ; ಹೇಗಿದೆ ನೋಡಿ

[ccc_my_favorite_select_button post_id="96641"]

nayanthara-ಧನುಶ್ ಜಗಳ ಜೋರು..!

[ccc_my_favorite_select_button post_id="96590"]

ದರ್ಶನ್‌ರನ್ನ ಮತ್ತೆ ಜೈಲಿಗೆ ಕಳಿಸಲು ಪೊಲೀಸರ ಸಿದ್ದತೆ..!

[ccc_my_favorite_select_button post_id="96441"]
error: Content is protected !!