ದೊಡ್ಡಬಳ್ಳಾಪುರ: ಸುಮಾರು ಎರಡು ಲೋಡು ಕೊತ್ತಂಬರಿ ಸೊಪ್ಪನ್ನು ರಸ್ತೆ ಬದಿಗೆ ಎಸೆದು ಹೋಗಿರುವ ಅಪರಿಚಿತ ರೈತನ ನಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಮಧುರೆ ಸಮೀಪದ ಕೋಡಿಪಾಳ್ಯದ ರಸ್ತೆ ಬದಿ ಗುಣಮಟ್ಟದ ಕೊತ್ತಂಬರಿ ಸೊಪ್ಪಿನ ಕಟ್ಟುಗಳನ್ನು ಸುರಿಯಲಾಗಿದ್ದು, ಮನೆಗೆ ಕೊಂಡೊಯ್ಯಲು ಸಾರ್ವಜನಿಕರು ಮುಗಿಬಿದ್ದಿದ್ದರು.
ಮಾರುಕಟ್ಟೆಯಲ್ಲಿ ಉತ್ತಮ ಕೊತ್ತಂಬರಿ ಸೊಪ್ಪಿನ ಕಟ್ಟಿಗೆ 10 ರಿಂದ 20 ರೂ ಬೆಲೆ ಇದ್ದು, ಚಿಲ್ಲರೆ ಮಾರಾಟ ಎರಡರಷ್ಟು ಬೆಲೆ ಇದೆ. ಆದಾಗ್ಯೂ ರೈತ ಕೊತ್ತಂಬರಿ ಸೊಪ್ಪನ್ನು ಬೇಕಾಬಿಟ್ಟಿಯಾಗಿ ರಸ್ತೆ ಬದಿಯಲ್ಲಿ ಎಸೆದಿರುವುದು ಸ್ಥಳೀಯರ ಬೇಸರಕ್ಕೆ ಕಾರವಾಗಿದೆ.
ಬೇಜವಬ್ದಾರಿಯಿಂದ ರಸ್ತೆ ಬದಿಯಲ್ಲಿ ಎಸೆದು ಹೋಗುವ ಬದಲು, ಚಿಲ್ಲರೆ ಮಾರಾಟ ನಡೆಸಿದ್ದರೆ ಹಣ ದೊರಕುತ್ತಿತ್ತು. ಇಲ್ಲವೆ ಮಠಗಳಿಗೆ ಉಚಿತವಾಗಿ ನೀಡಬಹುದಿತ್ತು. ಈ ರೀತಿ
ಬೇಕಾಬಿಟ್ಟಿಯಾಗಿ ಎಸೆದಿರುವುದು ರೈತರಿಗೆ ಮಾಡಿದ ಅವಮಾನವೆಂದು ಯುವ ರೈತ ಮುಖಂಡ ನವೀನ್ ಬೇಸರ ವ್ಯಕ್ತಪಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……