ಚಿಕ್ಕಬಳ್ಳಾಪುರ: ಮಂಗಳವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ವಿಶ್ವಪ್ರಸಿದ್ಧ ಪ್ರವಾಸಿತಾಣ ನಂದಿ ಗಿರಿಧಾಮದಲ್ಲಿ ಭೂ ಕುಸಿತ ಉಂಟಾಗಿದೆ
ಭಾರಿ ಮಳೆಗೆ ನಂದಿ ಗಿರಿಧಾಮದ ರಸ್ತೆಗೆ ಅಳವಡಿಸಿದ್ದ ದಾರಿ ದೀಪಗಳು ಮುರಿದು ಬಿದ್ದಿದ್ದು, ನಂದಿಗಿರಿಧಾಮದ 10ನೇ ತಿರುವಿನಲ್ಲಿರುವ ರಂಗಪ್ಪ ವೃತ್ತದಲ್ಲಿ ಮಣ್ಣಿನ ಗುಡ್ಡ ರಸ್ತೆಗೆ ಅಡ್ಡಲಾಗಿ ಕುಸಿದ ಪರಿಣಾಮ ನಂದಿ ಬೆಟ್ಟಕ್ಕೆ ಇದ್ದ ರಸ್ತೆ ಮಾರ್ಗ ಮುಳುಗಡೆಯಾಗಿದೆ.
ಅರಣ್ಯ ಇಲಾಖೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಕುಸಿದ ಮಣ್ಣಿನ ಗುಡ್ಡದ ತೆರವು ಕಾರ್ಯ ನಡೆದಿದ್ದು, ಮಧ್ಯಾಹ್ನದವರೆಗೂ ತೆರವು ಕಾರ್ಯಾಚರಣೆ ನಡೆಯುವ ಸಾಧ್ಯತೆಯಿದೆಯಲ್ಲದೆ. ಒಂದು ವಾರಗಳ ಕಾಲ ರಸ್ತೆ ಬಂದ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ
ಭೂ ಕುಸಿದಿಂದ ಆತಂಕಕ್ಕೆ ಒಳಗಾಗಿರುವ ಪ್ರವಾಸಿಗರು ವಾಪಸ್ ತೆರಳುತ್ತಿದ್ದಾರೆ. ಸ್ಥಳಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ದೌಡಯಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….