ದೊಡ್ಡಬಳ್ಳಾಪುರ: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಪರಿಶೀಲನೆ ಬಂದ ಪೊಲೀಸರು, ವಿದ್ಯಾರ್ಥಿಗಳಿಗೆ ಪಾಠ ಮಾಡಿ, ಅವರೊಂದಿಗೆ ಸಹ ಭೋಜನ ಮಾಡಿ ತೆರಳಿರುವ ಘಟನೆ ತಾಲೂಕಿನ ಜಿ.ಹೊಸಹಳ್ಳಿಯಲ್ಲಿ ನಡೆದಿದೆ.
ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ನೇತೃತ್ವದಲ್ಲಿ ಪೊಲೀಸರ ತಂಡ ಜಿ.ಹೊಸಹಳ್ಳಿ ವ್ಯಾಪ್ತಿಗೆ ಭೇಟಿ ನೀಡಿದ್ದು, ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಪರಿಶೀಲನೆಗೆ ತೆರಳಿ, ಅಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆಗೆ ಮೆಚ್ಚಿಗೆ ಸೂಚಿಸಿದರು.
ಪಾಠ ಮಾಡಿದ ಸರ್ಕಲ್ ಇನ್ಸ್ಪೆಕ್ಟರ್: ಶಿಕ್ಷಕರಾಗಿದ್ದವರು ಬೇರೆ ವೃತ್ತಿಗೆ ತೆರಳಿದ್ದರೂ, ಮಕ್ಕಳ ಕಂಡ ಕೂಡಲೇ ಮತ್ತೆ ಶಿಕ್ಷಕರಾಗಿ ಬಿಡುತ್ತಾರೆ ಎಂಬುವಂತೆ. ಈ ಮುಂಚೆ ಶಿಕ್ಷಕರಾಗಿದ್ದ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಕೋವಿಡ್ ನಂತರ ಆರಂಭವಾಗಿರುವ ಶಾಲೆಗಳ ಸಮಯ, ಆನ್ಲೈನ್ ಶಿಕ್ಷಣದ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಅಲ್ಲದೆ 09ನೇ ತರಗತಿಯ ಕನ್ನಡ ಪಠ್ಯದ ಕುರಿತು ಒಂದು ಗಂಟೆ ತರಗತಿ ತೆಗೆದುಕೊಂಡರು.
ನಟ ಡಾ.ವಿಷ್ಣುವರ್ಧನ್ ನೆನೆದ ಸರ್ಕಲ್ ಇನ್ಸ್‌ಪೆಕ್ಟರ್: ಪಾಠದ ವೇಳೆ 09ನೇ ತರಗತಿ ವಿದ್ಯಾರ್ಥಿಗಳಿಗೆ ಪದ್ಯವಾಗಿರುವ, ನಟ ಡಾ.ವಿಷ್ಣುವರ್ಧನ್ ನಟನೆಯ ಮಹಾ ಕ್ಷತ್ರಿಯ ಚಿತ್ರದ ಈ ಭೂಮಿ ಬಣ್ಣದ ಬುಗುರಿ ಗೀತೆಯ ಸಾರವನ್ನು ವಿವರಿಸಿದರು.
ನಂತರ ಪೊಲೀಸ್ ಸಿಬ್ಬಂದಿಗಳು ವಿದ್ಯಾರ್ಥಿಗಳೊಂದಿಗೆ ಕುಳಿತು ಸಹಭೋಜನ ಸವಿದರು.
ಈ ವೇಳೆ ಎಎಸ್ಐಗಳಾದ ನಾಗೇಶ್, ವರಲಕ್ಷ್ಮೀ, ಕಚೇರಿ ಸಿಬ್ಬಂದಿ ಆದಿಲಕ್ಷ್ಮೀ, ವಾರ್ಡನ್ ಗೋವಿಂದ ರಾಜ್ ಹಾಗೂ ಸಿಬ್ಬಂದಿ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.