ದೊಡ್ಡಬಳ್ಳಾಪುರ: ಮನೆ ಕೆಲಸಕ್ಕೆಂದು ಸೇರಿ, ಲಕ್ಷಾಂತರ ರೂ ಒಡವೆ ಕಳವು ಮಾಡಿ ಪರಾರಿಯಾಗಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಪೊಲೀಸರು ಪತ್ತೆ ಹಚ್ಚಿ ಜೈಲಿಗಟ್ಟಿದ್ದಾರೆ.
ಶಿವಮೊಗ್ಗ ಮೂಲದ ರೇವತಿ( 21 ವರ್ಷ) ಬಂಧಿತ ಆರೋಪಿಯಾಗಿದ್ದು, ನಗರದ ಹುಂಗಿ ರಮೇಶ್ ಎನ್ನುವವರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದು, 12 ಸಾವಿರ ಸಂಬಳ ಪಡೆಯುತ್ತಿದ್ದ ರೇವತಿ ಇದಕ್ಕಿದ್ದಂತೆ ಊರಿಗೆ ತೆರಳುವುದಾಗಿ ಮನೆಯಿಂದ ಹೊರಬಂದು, ನಗರದ ಕೋರ್ಟ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಮನೆಯಲ್ಲಿ ಕಳ್ಳತನ ನಡೆದಿರುವ ಕುರಿತಂತೆ ಹುಂಗಿ ರಮೇಶ್ ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು ರೇವತಿಯನ್ನು ಕರೆತಂದು ವಿಚಾರಣೆ ನಡೆಸಿದರೆ ಆಕೆ ಒಪ್ಪದೆ ಇದ್ದೂ, ಆಕೆಯ ಮೊಬೈಲ್ ನಲ್ಲಿ ಒಡವೆ ಧರಿಸಿ ತಗೆಯಲಾಗಿದ್ದ ಪೋಟೋ ಮೂಲಕ ರೇವತಿಯೇ ಕಳ್ಳತನ ನಡೆಸಿರುವುದು ಪತ್ತೆ ಮಾಡಿದ್ದಾರೆ. ಆದರೆ ದೂರಿನಲ್ಲಿ ನೀಡಲಾಗಿರುವ ಕಳ್ಳತನದ ವಸ್ತುಗಳ ಪಟ್ಟಿಗೂ, ಈಕೆ ಕದ್ದಿರುವೆ ಎಂದು ಒಪ್ಪಿಕೊಂಡಿರುವ ವಸ್ತುಗಳಿಗೂ ವೆತ್ಯಾಸವಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಬಾಲ್ಯವಿವಾಹ: ಶಿವಮೊಗ್ಗ ಮೂಲದ ರೇವತಿಗೆ ಪೋಷಕರು 16ನೇ ವಯಸ್ಸಿಗೆ ಮದುವೆ ಮಾಡಿದ್ದು, ಗಂಡನಿಲ್ಲದ ಕಾರಣ 5 ವರ್ಷದ ಹೆಣ್ಣು ಮಗುವಿರುವ ರೇವತಿ ಜೀವನೋಪಾಯಕ್ಕಾಗಿ ದೊಡ್ಡಬಳ್ಳಾಪುರಕ್ಕೆ ಬಂದಿದ್ದಾಳೆ. ಈಕೆ ಸ್ಥಿತಿ ಕಂಡವರು ಮನೆ ಕೆಲಸಕ್ಕೆಂದು ಹುಂಗಿ ರಮೇಶ್ ಅವರ ಸೇರಿಸಿದ್ದಾರೆ. ಆದರೆ ಆಕೆಯ ದುರಾಸೆಯಿಂದ ಕಂಬಿ ಹಿಂದೆ ಜೀವನ ನಡೆಸಬೇಕಾದ ಅನಿರ್ವಾರ್ಯತೆ ಎದುರಾಗಿದ್ದು, ಹೆಣ್ಣು ಮಗುವನ್ನು ರೇವತಿಯ ಅಕ್ಕ ಪೋಷಿಸುತ್ತಿದ್ದಾರೆಂದು ಪೊಲೀಸ್ ಇಲಾಖೆ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..