ದೊಡ್ಡಬಳ್ಳಾಪುರ: ನವರಾತ್ರಿ ಬೊಂಬೆಗಳ ಸಂಭ್ರಮ ನೋಡ ಬನ್ನಿ

ದೊಡ್ಡಬಳ್ಳಾಪುರ: ಮೈಸೂರಿನಲ್ಲಿ ನಡೆಯುವ ನವರಾತ್ರಿ ಮತ್ತು ದಸರಾ ಉತ್ಸವದ ಸಂದರ್ಭದಲ್ಲೇ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ ಮುಂತಾದ ಜಿಲ್ಲೆಗಳಲ್ಲಿ ನವರಾತ್ರಿ ಬೊಂಬೆಗಳ ಸಂಭ್ರಮ ಪ್ರಾರಂಭವಾಗುತ್ತದೆ. 

ಅದೊಂದು ವರ್ಣರಂಜಿತ ಲೋಕ. ತರಾವರಿ ಗೊಂಬೆಗಳ ವಿವಿಧ ಭಾವಭಂಗಿಗಳಿಗೆ ಪೂರಕವಾಗಿ ನಿರ್ಮಾಣಗೊಂಡ ಆಕರ್ಷಣೀಯ ವಾತಾವರಣ. ನವರಾತ್ರಿಯ 9 ದಿನಗಳ ಕಾಲ ಇಲ್ಲಿನ ಮನೆಮನೆಗಳೂ ಆಕರ್ಷಕ ಗೊಂಬೆ ಮನೆಗಳಾಗಿ ಗಮನ ಸೆಳೆಯುತ್ತವೆ. ಸಾಂಪ್ರದಾಯಿಕವಾಗಿ ಈ ಆಚರಣೆ ಇದೀಗ ಆಧುನಿಕ ಸ್ಪರ್ಶದೊಂದಿಗೆ ಮತ್ತಷ್ಟು ಕಳೆಗಟ್ಟುತ್ತಾ ಪ್ರತಿವರ್ಷ ಹೊಸತನದ ಪ್ರತೀಕವಾಗಿ ಕಾಣಸಿಗುತ್ತಿರುವುದು ಗಮನೀಯ.

ಬೊಂಬೆಗಳ ಪ್ರದರ್ಶನದಲ್ಲಿ ಪುರಾಣದ ವ್ಯಕ್ತಿಗಳಿಂದ ಹಿಡಿದು ಆಧುನಿಕ ಜಗತ್ತಿನ ವಿದ್ಯಮಾನಗಳನ್ನು ಪ್ರತಿಬಿಂಬಿಸುವ ಬೊಂಬೆಗಳನ್ನು ನವರಾತ್ರಿ ಹಬ್ಬದಲ್ಲಿ ಪ್ರದರ್ಶನಗೊಳಿಸುತ್ತಾರೆ.

ಮಹಾಲಯ ಅಮಾವಾಸ್ಯೆ ದಿನದಿಂದ ವಿಜಯದಶಮಿ ತನಕ ನಡೆಯುವ ನವರಾತ್ರಿ ಬೊಂಬೆ ಪ್ರದರ್ಶನಕ್ಕೆ  ನಡುಮನೆಯಲ್ಲಿ ಉತ್ತಮ ವೇದಿಕೆಯನ್ನು ಸಿದ್ದಪಡಿಸಲಾಗಿರುತ್ತದೆ. ಯಾವ ಯಾವ ಬೊಂಬೆಗಳನ್ನು ಎಲ್ಲಿ ಕೂಡಿಸಬೇಕು ಎಂಬುದನ್ನು ಮನೆಯ ಸದಸ್ಯರು ಚರ್ಚಿಸಿ ನಿರ್ಧರಿಸುತ್ತಾರೆ.

ನವರಾತ್ರಿ ಬೊಂಬೆ ಹಬ್ಬದಲ್ಲಿ ಮಹಿಳೆಯರ ಪಾತ್ರ ಪ್ರಧಾನವಾಗಿರುತ್ತದೆ. ಮಕ್ಕಳು ಮನೆ ಮನೆಗಳಿಗೆ ತೆರಳಿ ನವರಾತ್ರಿ ಬೊಂಬೆಗಳ ನೋಡುವುದೇ ಸಂಭ್ರಮವಾಗಿರುತ್ತದೆ.

ನವರಾತ್ರಿಯ ಒಂಬತ್ತು ದಿನ ನಡೆಯುವ ಬೊಂಬೆ ಹಬ್ಬದಲ್ಲಿ ಕಳಸ ಸ್ಥಾಪನೆಯೊಂದಿಗೆ ಚಾಲನೆಗೊಳ್ಳುತ್ತದೆ. ನಂತರ ಪ್ರತಿನಿತ್ಯ ಒಂದೊಂದು ದೇವತೆಗಳನ್ನು ಪ್ರಧಾನವಾಗಿ ಪೂಜಿಸಲಾಗುತ್ತದೆ. ಪೂಜೆ ನೈವೇದ್ಯದ ನಂತರ ಮಹಿಳೆಯರಿಗೆ ಬಾಗಿನ ಮತ್ತು ಮಕ್ಕಳಿಗೆ ಸಿಹಿ ಹಂಚಲಾಗುತ್ತದೆ.

ನೂರಾರು ಬೊಂಬೆಗಳನ್ನಿಟ್ಟು ದಸರಾ ನೋಡಲು ಮೈಸೂರಿಗೆ ಹೋಗಿ, ಬೊಂಬೆ ನೋಡಲು ನಮ್ಮ ಮನೆಗೆ ತಪ್ಪದೇ ಬನ್ನಿ ಎಂದು ದೊಡ್ಡಬಳ್ಳಾಪುರ ಹಲವಾರು ಕುಟುಂಬಗಳು ಬಂಧುಗಳಿಗೆ ಮತ್ತು ಸ್ನೇಹಿತರನ್ನು ಆಹ್ವಾನಿಸುತ್ತಾರೆ.

ನವರಾತ್ರಿ ಹಬ್ಬದಲ್ಲಿ ಬೊಂಬೆಗಳನಿಟ್ಟು ಪೂಜಿಸುವ ಆಚರಣೆಗೆ ಹಲವಾರು ದಶಕಗಳಿಂದ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದೆ. ಹಲವಾರು ಕುಟುಂಬಗಳು 50 ವರ್ಷಗಳಿಗೂ ಹಳೆಯದಾದ ಬೊಂಬೆಗಳನ್ನು ಈ ಹಬ್ಬದಲ್ಲಿಟ್ಟು ಪೂಜಿಸುತ್ತಾರೆ. ನವರಾತ್ರಿ ದಿನಗಳಲ್ಲಿ ನಡೆಯುವ ಈ ದಸರಾ ಬೊಂಬೆಗಳ ಸಂಭ್ರಮದಲ್ಲಿ ಮನೆಯ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸುತ್ತಾರೆ.  

ನವರಾತ್ರಿ ಬೊಂಬೆಯ ಹಬ್ಬಕ್ಕೆ ಕುಟುಂಬದ ಸದಸ್ಯರು ಬೇರೆ ಬೇರೆ ಊರುಗಳಿಗೆ, ಧಾರ್ಮಿಕ ಸ್ಥಳಗಳಿಗೆ ಹೋದಾಗ ಹೊಸ ಹೊಸ ಬೊಂಬೆಗಳನ್ನು ತರುತ್ತಾರೆ.ವಿಶಿಷ್ಠ ವಿನ್ಯಾಸದ ವಿವಿಧ ಮಾದರಿಯ ಬೊಂಬೆಗಳು, ಕುಸುರಿ ಮಾಡಿರುವ ಬೊಂಬೆಗಳು ಗಮನ ಸೆಳೆಯುತ್ತವೆ.

ಕೈಲಾಸ ಪರ್ವತದಲ್ಲಿ ಶಿವ, ಪಾರ್ವತಿ ಮತ್ತು ಗಣಪತಿ ಕುಳಿತಿರುವುದು. ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತ ಒಂದೆಡೆ ಇರುವಂತೆ ಮಾಡಿರುತ್ತಾರೆ.ಇದಲ್ಲದೆ ವಿಷ್ಣುವಿನ ದಶಾವತಾರ,ಮದುವೆ ದಿಬ್ಬಣ, ಪ್ರಾಣಿ ಪಕ್ಷಿಗಳು,ಉದ್ಯಾನವನ, ಮೃಗಾಲಯ,ದಶಾವತಾರ, ಮದುವೆ ದಿಬ್ಬಣ,ಗ್ರಾಮೀಣ ಚಿತ್ರಣ ಕೊರವಂಜಿ ಗೊಂಬೆಗಳನ್ನು ಕ್ರಮಬದ್ಧವಾಗಿ ಕೂಡಿಸಲಾಗುತ್ತದೆ. ಇವಕ್ಕೆ ಮೆರುಗು ನೀಡುವಂತೆ ಉದ್ಯಾನವನ,ಮೃಗಾಲಯ, ಕಾಡು,  ಪರ್ವತ, ಅರಮನೆ, ಬೆಟ್ಟ ಗುಡ್ಡ, ವಿಶೇಷ ಮಣ್ಣಿನ ಹಾಗೂ ಮರದ ಬೊಂಬೆಗಳು, ಚೈನಾ ಅಟಿಕೆಗಳು,ಪ್ಲಾಸ್ಟರ್ ಆಫ್ ಪ್ಯಾರೀಸ್, ಫೈಬರ್ ಬೊಂಬೆಗಳು, ಮಕ್ಕಳ ಆಧುನಿಕ ಆಟಿಕೆಗಳಲ್ಲದೆ ಗ್ರಾಮೀಣ ಬದುಕಿನ ದೃಶ್ಯಯವನ್ನು ಬೊಂಬೆಗಳಿಂದ ತಯಾರಿಸಿ ನವರಾತ್ರಿ ಹಬ್ಬದಲ್ಲಿ ಪ್ರದರ್ಶನ ಮಾಡುತ್ತಾರೆ. ಬೊಂಬೆ ಪ್ರದರ್ಶನ ನೋಡಲು ಬಂದ ನೆರೆಹೊರೆಯವರಿಗೆ, ಬಂಧುಗಳಿಗೆ ಮತ್ತು ಸ್ನೇಹಿತರಿಗೆ ಬೊಂಬೆಗಳನ್ನು ಪರಿಚಯಿಸುತ್ತಾ, ಈ ಬೊಂಬೆ ಇಂತಹ ಊರಿನಿಂದ ಮತ್ತು  ಯಾವ ಸಂದರ್ಭದಲ್ಲಿ ತರಲಾಯಿತು ಎಂಬುದನ್ನು ಹೇಳುವುದು ಮಾತ್ರ ಮರೆಯುವುದಿಲ್ಲ.   

ಬೊಂಬೆಗಳ ಪ್ರದರ್ಶನದಲ್ಲಿ ಪುರಾಣದ ವ್ಯಕ್ತಿಗಳಿಂದ ಹಿಡಿದು ಆಧುನಿಕ ಜಗತ್ತಿನ ವಿದ್ಯಮಾನಗಳನ್ನು ಪ್ರತಿಬಿಂಬಿಸುವ ಬೊಂಬೆಗಳನ್ನು ಕಾಣಬಹುದಾಗಿದೆ.ಒಂದೊಂದು ಮನೆಯಲ್ಲಿ ನೂರರಿಂದ ಐದು ನೂರು ಬೊಂಬೆಗಳ ತನಕ ಸಂಗ್ರಹಿಸಿ ಪ್ರತಿವರ್ಷ ಪ್ರದರ್ಶನಗೊಳಿಸುತ್ತಾರೆ.

ದೊಡ್ಡಬಳ್ಳಾಪುರದ ಕೆಲವು ಮನೆಗಳಲ್ಲಿ ಹಲವಾರು ವರ್ಷಗಳಿಂದ ಬೊಂಬೆ ಪ್ರದರ್ಶನ ಮಾಡುವವರು ಸುಮಾರು 50 ರಿಂದ 60 ವರ್ಷಗಳ ಹಳೆಯ ಬೊಂಬೆಗಳನ್ನು ಸಂಗ್ರಹಿಸಿದ್ದಾರೆ. ಇದರ ಜೊತೆಗೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಬೊಂಬೆಗಳನ್ನು ಹೊಸದಾಗಿ ಖರೀದಿ ಮಾಡುತ್ತಾರೆ.

ವಿಜಯದಶಮಿ ದಿನ ನಂತರ ಬೊಂಬೆಗಳನ್ನು ಜೋಪಾನವಾಗಿ ಮುಂದಿನ ವರ್ಷದ ಹಬ್ಬಕ್ಕೆ ಇಟ್ಟಿರುತ್ತಾರೆ. ಬೊಂಬೆಗಳನ್ನು ಪ್ರದರ್ಶನಕ್ಕೆ ಕೂಡಿಸುವುದು ಒಂದು ಕಲೆ. ಈ ನವರಾತ್ರಿ ಬೊಂಬೆ ಪ್ರದರ್ಶನ ಮಾಡುವ ಕಲೆ ಆಚರಣೆಗೆ ಬಂದಿರುವುದು ರಾಜಮನೆಗಳಿಂದ.ಮೊದಲು ಮಕ್ಕಳ ಮನರಂಜನೆಗಾಗಿ ಪ್ರಾರಂಭವಾದ ಈ ಬೊಂಬೆ ಪ್ರದರ್ಶನ ನಂತರದ ದಿನಗಳಲ್ಲಿ ಸಂಪ್ರದಾಯಕ ಆಚರಣೆ ಆಗಿದೆ. 

ಬೊಂಬೆ ಉತ್ಸವವು ದಕ್ಷಿಣ ಭಾರತದಲ್ಲಿ ಮಾತ್ರ ಕಂಡು ಬರುತ್ತದೆ. ಬಹುಶಃ ಇದಕ್ಕೆ ತಂಜಾವೂರು ಕಲೆಯ ಪ್ರಭಾವವಿದ್ದು ವೈಷ್ಣವರು ಹೆಚ್ಚಾಗಿ ಆಚರಿಸುತ್ತಾರೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….

ರಾಜಕೀಯ

ವಿಜಯೇಂದ್ರಗೆ ತಿರುಗುಬಾಣವಾದ ವಕ್ಫ್ ವಿವಾದ..!: CBI ತನಿಖೆಗೆ ಸಿಎಂ‌ ಆಗ್ರಹ

ವಿಜಯೇಂದ್ರಗೆ ತಿರುಗುಬಾಣವಾದ ವಕ್ಫ್ ವಿವಾದ..!: CBI ತನಿಖೆಗೆ ಸಿಎಂ‌ ಆಗ್ರಹ

"ನಾ ಖಾವೂಂಗಾ, ನಾ ಖಾನೆ ದೂಂಗಾ’’ ಎಂದು ಊರೆಲ್ಲ ಡಂಗೂರ ಹೊಡ್ಕೊಂಡು ತಿರುಗಾಡುವ ಮೋದಿಯವರೇ CBI

[ccc_my_favorite_select_button post_id="98674"]
Heart attack: 26 ವರ್ಷದ ಕಬ್ಬಡಿ ಆಟಗಾರನ ಬಲಿ ಪಡೆದ ಹೃದಯಾಘಾತ..!

Heart attack: 26 ವರ್ಷದ ಕಬ್ಬಡಿ ಆಟಗಾರನ ಬಲಿ ಪಡೆದ ಹೃದಯಾಘಾತ..!

ಹನುಮ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕಬಡ್ಡಿ ಸ್ಪರ್ಧೆಯ ವೇಳೆ ಯುವಕನಿಗೆ ಹೃದಯಾಘಾತವಾಗಿದೆ; Heart attack

[ccc_my_favorite_select_button post_id="98669"]
ಸದನಕ್ಕೆ ಅಡ್ಡಿ: ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದ ಹೆಚ್.ಡಿ.ದೇವೇಗೌಡ| Video ನೋಡಿ| HD Deve Gowda

ಸದನಕ್ಕೆ ಅಡ್ಡಿ: ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದ ಹೆಚ್.ಡಿ.ದೇವೇಗೌಡ| Video ನೋಡಿ| HD Deve

ಸಭಾಪತಿ ಜಗದೀಪ್ ಧನಕರ್ ವಿರುದ್ಧ ಅವಿಶ್ವಾಸ ನೋಟಿಸ್ ಗೆ ಉಗ್ರ ಖಂಡನೆ| HD Deve Gowda

[ccc_my_favorite_select_button post_id="98469"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
ಅಲ್ಲು ಅರ್ಜುನ್ ಅಭಿಮಾನಿ ಆತ್ಮಹತ್ಯೆಗೆ ಯತ್ನ..!: ವೈರಲ್ Video ನೋಡಿ| Pushpa 2

ಅಲ್ಲು ಅರ್ಜುನ್ ಅಭಿಮಾನಿ ಆತ್ಮಹತ್ಯೆಗೆ ಯತ್ನ..!: ವೈರಲ್ Video ನೋಡಿ| Pushpa 2

ನಿನ್ನೆ ರಾತ್ರಿ ನಟ ಅಲ್ಲು ಅರ್ಜುನ್ ಬಿಡುಗಡೆಗೆ ಒತ್ತಾಯಿಸಿ ಅವರ ಅಭಿಮಾನಿಯೊಬ್ಬರು ತೆಲಂಗಾಣದ ಚಂಚಲಗುಡ ಜೈಲಿನ Pushpa 2

[ccc_my_favorite_select_button post_id="98679"]
Doddaballapura: ಅಪಘಾತ.. ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವು..!| Accident

Doddaballapura: ಅಪಘಾತ.. ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವು..!| Accident

ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡ. Accident

[ccc_my_favorite_select_button post_id="98685"]

ಆರೋಗ್ಯ

ಸಿನಿಮಾ

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಇಂದು ಬೆಳಿಗ್ಗೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. Allu arjun

[ccc_my_favorite_select_button post_id="98682"]