ದೊಡ್ಡಬಳ್ಳಾಪುರ: ನಗರದ ಹೊರವಲಯದಲ್ಲಿನ ಟಫೆ ಕಾರ್ಖಾನೆಯಲ್ಲಿ ಅವಘಡ ಸಂಭವಿಸಿದ್ದು, ತರಬೇತಿಗೆಂದು ಬಂದಿದ್ದ 19 ವರ್ಷದ ವಿದ್ಯಾರ್ಥಿ ಯಂತ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ ಎಂದು ಕಾರ್ಮಿಕರು ತಿಳಿಸಿದ್ದಾರೆ.
ಕೊಪ್ಪಂ ಮೂಲದ ಲಕ್ಷ್ಮೀನಾರಾಯಣ (19ವರ್ಷ) ಮೃತ ದುರ್ದೈವಿಯಾಗಿದ್ದು, ತರಬೇತಿಗೆಂದು ಬಂದಿದ್ದ ವೇಳೆ ಯಂತ್ರಕ್ಕೆ ಸಿಲುಕಿ ಸಾವನಪ್ಪಿದ್ದಾನೆ ಎನ್ನಲಾಗಿದೆ.
ಕಾರ್ಖಾನೆ ಆಡಳಿ ಮಂಡಳಿಯ ಬೇಜವಬ್ದಾರಿಯಿಂದ ಈ ಘಟನೆ ಸಂಭವಿಸಲು ಕಾರಣ ಎಂದು ದೂರಿರುವ ಕಾರ್ಮಿಕರು, ತರಬೇತಿಗೆಂದು ಬಂದ ವಿದ್ಯಾರ್ಥಿಗಳನ್ನು ಕೆಲಸಕ್ಕೆ ಬಳಸಿಕೊಂಡಿದ್ದರು. ಈ ಕಾರಣ ಅನುಭವ ಇಲ್ಲದ ವಿದ್ಯಾರ್ಥಿ ಯಂತ್ರಕ್ಕೆ ಸಿಲುಕಿ ಸಾವನಪ್ಪಲು ಕಾರಣ ಎಂದು ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. (ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……