ದೊಡ್ಡಬಳ್ಳಾಪುರ: ತಾಲೂಕಿನಾದ್ಯಂತ ನವರಾತ್ರಿ ಆರಂಭವಾಗಿದ್ದು, ನವರಾತ್ರಿ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳ ಅಂಗವಾಗಿ ನಿತ್ಯವೂ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತಿದೆ.
ನಗರದ ವನ್ನಿಗರ ಪೇಟೆಯಲ್ಲಿರುವ ಶ್ರೀ ಸಪ್ತಮಾತೃಕಾ ಮಾರಿಯಮ್ಮ, ರಾಮಲಿಂಗ ಚೌಡೇಶ್ವರಿ ದೇವಾಲಯ, ಗಾಣಿಗರ ಪೇಟೆಯಲ್ಲಿನ ಕಾಳಿಕಾ ಕಮಟೇಶ್ವರ ದೇವಾಲಯದಲ್ಲಿ ಹಿಮಗಿರಿ, ರಾಜ ರಾಜೇಶ್ವರಿ, ಶ್ರೀ ಲಕ್ಷ್ಮೀ, ಭದ್ರಕಾಳಿ ಅಲಂಕಾರ, ಅನ್ನಪೂರ್ಣೇಶ್ವರಿ, ಸರಸ್ವತಿ, ದುರ್ಗಾದೇವಿ, ಸಿಂಹವಾಹಿನಿ, ಶಕ್ತಿಸ್ವರೂಪಿಣಿ ವಿಶೇಷ ಅಲಂಕಾರಗಳನ್ನು ನಿತ್ಯ ಕ್ರಮವಾಗಿ ಮಾಡಲಾಗುತ್ತಿದೆ.
ವಿದೇಶದಲ್ಲಿ ನವರಾತ್ರಿ ಸಂಭ್ರಮ: ಇಡೀ ದೇಶದಲ್ಲಿ ನವರಾತ್ರಿ ಆಚರಿಸಲಾಗುತ್ತಿದೆ. ನಮ್ಮ ದೇಶದಲ್ಲಷ್ಟೇ ಅಲ್ಲದೇ ವಿದೇಶದಲ್ಲಿ ನೆಲಸಿರುವ ಭಾರತೀಯರು, ವಿವಿಧ ದೇವಾಲಯಗಳಲ್ಲಿ ನವರಾತ್ರಿ ಆಚರಣೆ ಮಾಡುತ್ತಿದ್ದಾರೆ.
ಇಂಡೋನೇಷಿಯಾ ರಾಜಧಾನಿ ಜಕಾರ್ತದ ಉತ್ತರದಲ್ಲಿರುವ ಪ್ಲೂಯಿಟ್‍ನ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಭಾರತೀಯ ಮೂಲದ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಗಳಿಂದ ಭಾಗವಹಿಸುತ್ತಿದ್ದಾರೆ. ದೇವಾಲಯದ ವಿಶೇಷ ಅಲಂಕಾರದ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಭಕ್ತರು ಆನಂದಿಸುತ್ತಿದ್ದಾರೆ ಎಂದು ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿರುವ ದೊಡ್ಡಬಳ್ಳಾಪುರ ಮೂಲದ ಎಸ್.ಗೋಪಾಲ್ ತಿಳಿಸಿದ್ದಾರೆ.
ಜಕಾರ್ತದ ಉತ್ತರದಲ್ಲಿರುವ ಪ್ಲೂಯಿಟ್‍ನ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ದೊಡ್ಡಬಳ್ಳಾಪುರ ಮೂಲದ ಅರ್ಚಕರಿಂದ ಮಾಡಿರುವ ವಿಶೇಷ ಅಲಂಕಾರಗಳು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….