ದೊಡ್ಡಬಳ್ಳಾಪುರ: 21 ವರ್ಷದ ನಂತರ ತುಂಬಿ ಹರಿದ ತಾಲೂಕಿನ ಮೆಳೇಕೋಟೆ ಕೆರೆಗೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಆಧಾರ್ ಪಿಂಚಣಿ ವ್ಯವಸ್ಥೆಗೆ ಚೋಗೋಂಡಹಳ್ಳಿ ಗ್ರಾಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸಾಂಕೇತಿಕವಾಗಿ ಚಾಲನೆ ನೀಡರು.
ಈ ವೇಳೆ ಗ್ರಾಮಸ್ಥರು ಮೆಳೇಕೋಟೆ ಕೆರೆ ಒತ್ತುವರಿಯಾಗಿರುವುದಾಗಿ ಗಮನಸೆಳೆದಿದ್ದು, ತಕ್ಷಣವೇ ಕಾರ್ಯಪ್ರವೃತ್ತವಾಗಿ ಸರ್ವೆ ನಡೆಸಿ, ಒತ್ತುವರಿ ತೆರವಿಗೆ ಅಗತ್ಯ ಕ್ರಮಗೊಂಡು ಟ್ರಂಚ್ ಒಡೆಸುವಂತೆ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಹು ವರ್ಷಗಳ ನಂತರ ಕೆರೆ ತುಂಬಿರುವ ಕಾರಣ ಚೌಗೊಂಡಹಳ್ಳಿ, ಮೆಳೇಕೋಟೆ ಕ್ರಾಸ್, ಮುಕ್ಕೇನಹಳ್ಳಿ ಗ್ರಾಮಸ್ಥರು ಕೆರೆಗೆ ಆರತಿ ಬೆಳಗಿ, ಪೂಜೆ ಸಲ್ಲಿಸಿದರು.
ಈ ವೇಳೆ ತಹಶೀಲ್ದಾರ್ ಟಿ.ಎಸ್.ಶಿವರಾಜ್, ಜಿಪಂ ಮಾಜಿ ಸದಸ್ಯ ಅಪ್ಪಯ್ಯಣ್ಣ, ಗ್ರಾಪಂ ಅಧ್ಯಕ್ಷೆ ಪ್ರೀತಿಗೌರೀಶ್, ಉಪಾಧ್ಯಕ್ಷ ಮುನಿರಾಜು, ಸದಸ್ಯರಾದ ಮಂಜುನಾಥ್, ಮೈತ್ರಿ ಮಂಜುನಾಥ್, ದೇವನಹಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಮುನೇಗೌಡ, ತೆಂಗಿನ ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ವಿ.ಎಸ್.ಎಸ್.ಎನ್ ನಿರ್ದೇಶಕ ಕೃಷ್ಣಮೂರ್ತಿ(ಕಿಟ್ಟಿ), ಕಂದಾಯ ನಿರೀಕ್ಷಕಿ ಲಕ್ಷ್ಮಮ್ಮ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……