ದೊಡ್ಡಬಳ್ಳಾಪುರ: ಮಕ್ಕಳ ದಿನಾಚರಣೆ ಅಂಗವಾಗಿ ತಾಲೂಕಿನ ಗಡಿ ಗ್ರಾಮಗಳ ಸರ್ಕಾರಿ ಕನ್ನಡ ಶಾಲೆಯ ಮಕ್ಕಳಿಗೆ ವಿದ್ಯಾಧಾರೆ ಫೌಂಡೇಶನ್ ವತಿಯಿಂದ ಉಚಿತ ನೋಟ್ ಪುಸ್ತಕಗಳನ್ನು ಸೋಮವಾರ ವಿತರಿಸಲಾಯಿತು.
ತಾಲೂಕಿನ ಗಡಿ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳನ್ನು ಕಡೆಗಣಿಸಿ, ಖಾಸಗಿ ಆಂಗ್ಲ ಶಾಲೆ ಸೇರುವ ಮಕ್ಕಳಿಗೆ ಸ್ಪರ್ಧೆ ನೀಡುವ ಮಟ್ಟಿಗೆ ಸರ್ಕಾರಿ ಶಾಲೆ ಮಕ್ಕಳನ್ನು ಅಣಿಗೊಣಿಸುವ ನಿಟ್ಟಿನಲ್ಲಿ, ಈ ಫೌಂಡೇಶನ್ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಸಾಸಲು ಹೋಬಳಿಯ ಹಲವು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ, ಶೂ, ಕರೊನಾ ಸಮಯದಲ್ಲಿ ಪುಡ್ ಕಿಟ್, ಮಾಸ್ಕ್, ಸ್ಯಾನಿಟೈಸರ್, 10ನೇ ತರಗತಿ ಪರೀಕ್ಷೆ ವೇಳೆ ಎನರ್ಜಿ ಡ್ರಿಂಕ್ಸ್ ನೀಡಿದೆ.
ಮುಂದುವರೆದು ಮಕ್ಕಳ ದಿನಾಚರಣೆ ಅಂಗವಾಗಿ ಆರೂಢಿ ಕ್ಲಸ್ಟರ್ ವ್ಯಾಪ್ತಿಯ ಆರೂಢಿ ಸರ್ಕಾರಿ ಮಾದರಿ ಪ್ರಾಥಮಿಕ ಪಾಠ ಶಾಲೆ, ಬನವತಿ ಶಾಲೆ, ಹನುಮಂತಪುರ ಶಾಲೆ, ಗೌಡನಕುಂಟೆ ಶಾಲೆ, ಪಚ್ಚಾರಲಹಳ್ಳಿ ಶಾಲೆ, ಕಾಮೇನಹಳ್ಳಿ ಶಾಲೆ, ಕಲ್ಲುಕುಂಟೆ ಶಾಲೆ, ಅಮಲಗುಂಟೆ ಶಾಲೆ, ಶಿವಪುರ(ವಡ್ಡನಹಳ್ಳಿ) ಶಾಲೆ, ಗರಿಕೇನಹಳ್ಳಿ ಶಾಲೆ, ಸಿಂಗ್ರಾಯನಪಾಳ್ಯ ಶಾಲೆ ಹಾಗೂ ದೊಡ್ಡಗುಂಡಪ್ಪನಾಯಕನಹಳ್ಳಿ ಶಾಲೆ ಸೇರಿದಂತೆ 11 ಶಾಲೆಗಳ ವಿದ್ಯಾರ್ಥಿಗಳಿಗೆ ಸುಮಾರು 1000 ನೋಟ್ ಬುಕ್ ಹಾಗೂ ಪೆನ್ ವಿತರಿಸಲಾಗಿದೆ.
ಈ ವೇಳೆ ವಿದ್ಯಾಧಾರೆ ಫೌಂಡೇಷನ್ ನಿರ್ದೇಶಕರಾದ ರೇಣುಗೋಪಾಲ್, ತಿಮ್ಮರಾಜು, ಎ.ಸಿ.ಹರೀಶ್, ಸಿದ್ದರಾಮಪ್ಪ ಸೇರಿದಂತೆ 11 ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……