ದೊಡ್ಡಬಳ್ಳಾಪುರ: ಗ್ರಾಮಾಂತರ ಪೋಲಿಸ್ ಠಾಣೆ ಹಾಗೂ ದೊಡ್ಡಬಳ್ಳಾಪುರ ನಗರ ವೃತ್ತ ಕಚೇರಿಗೆ ತಾಲೂಕಿನ ವಿವಿಧ ಶಾಲೆಗಳ ಸ್ಟೂಡೆಂಟ್ ಪೊಲೀಸ್ ಕೆಡೆಟ್ ತರಬೇರಿ ತರಬೇತಿ ಪಡೆದ ವಿದ್ಯಾರ್ಥಿಗಳು ಇಂದು ಭೇಟಿ ನೀಡಿದ್ದರು.
ಈ ವೇಳೆ ಅವರಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಹಾಗೂ ಇನ್ಸ್‌ಪೆಕ್ಟರ್ ಸತೀಶ್ ಅವರು ಪೊಲೀಸ್ ಠಾಣೆಯ ದೈನಂದಿನ ಕರ್ತವ್ಯ, ಜನಸಾಮಾನ್ಯರ ಹಿತರಕ್ಷಣೆ, ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ, ಹಕ್ಕುಗಳ ರಕ್ಷಣೆ, ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿದರು.
ಪೊಲೀಸರೆಂದರೆ ಮಾರು ದೂರ ಓಡುವ ಮಕ್ಕಳ ನಡುವೆ ತಾಲೂಕಿನ ಸರ್ಕಾರಿ ಪದವಿ ಕಾಲೇಜು ಪ್ರೌಢಶಾಲಾ ವಿಭಾಗ, ಜವಹಾರ್ ನವೋದಯ, ಅರಳುಮಲ್ಲಿಗೆ ಬಾಗಿಲು, ಕೊನಘಟ್ಟ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪೊಲೀಸರೊಂದಿಗೆ ಆತ್ಮೀಯವಾಗಿ ಬೆರೆತು ಮಾಹಿತಿ ಪಡೆದರು.
ನಂತರ ಬಾಶೆಟ್ಟಹಳ್ಳಿ ಅಗ್ನಿಶಾಮಕ ಠಾಣೆಗೆ ತೆರಳಿ ಬೆಂಕಿ ಅವಘಡದ ಮುಂಜಾಗ್ರತೆ, ನಂದಿಸುವಿಕೆ ಕುರಿತು ಮಾಹಿತಿ ಪಡೆದರು.
ಈ ವೇಳೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕೋ ಆರ್ಡಿನೇಟರ್ ಡಾ.ಅಶ್ವಿನಿ ಸೇರಿದಂತೆ ಶಾಲೆಗಳ ಶಿಕ್ಷಕರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….