ನವದೆಹಲಿ, (ಜುಲೈ.08): ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಿಂದ ನಾಲ್ಕು ದಿನಗಳ ರಷ್ಯಾ ಹಾಗೂ ಆಸ್ಟ್ರಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸಮರ ಆರಂಭಿಸಿದ ಬಳಿಕ ಪ್ರಧಾನಿ ಮೋದಿ ರಷ್ಯಾಕ್ಕೆ ಭೇಟಿ ನೀಡುತ್ತಿ ರುವುದು ಇದೇ ಮೊದಲು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆಹ್ವಾನದ ಮೇಲೆ ತೆರಳುತ್ತಿರುವ ಅವರು ಸೋಮವಾರ, ಮಂಗಳವಾರ ರಷ್ಯಾದಲ್ಲಿ ಹಲವು ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬುಧವಾರ ಆಸ್ತಿಯಾಕ್ಕೆ ತೆರಳಿ ಗುರುವಾರದವರೆಗೂ ಅಲ್ಲಿರಲಿದ್ದಾರೆ.
ರಷ್ಯಾ-ಭಾರತ ಮಾತುಕತೆ: ಪುಟನ್ ಅವರ ಜತೆಗೂಡಿ ಭಾರತ ಹಾಗೂ ರಷ್ಯಾ ವಾರ್ಷಿಕ ಶೃಂಗ ಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ.
ಉಭಯ ದೇಶಗಳ ಬಾಂಧವ್ಯದ ಕುರಿತು ವಿಸ್ತ್ರತ ಸಮಾಲೋಚನೆ ನಡೆಸಲಿರುವ ಅವರು, ಸಮಕಾ ಲೀನ ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಕುರಿತು ಅತ್ಯುನ್ನತ ಮಟ್ಟದ ಚರ್ಚೆಯನ್ನು ನಡೆಸಲಿದ್ದಾರೆ. ಮೋದಿ ಅವರ ಭೇಟಿ ಅತ್ಯಂತ ಮಹತ್ವದ್ದು ಹಾಗೂ ಸುಸಜ್ಜಿತವಾಗಿರಲಿದೆ ಎಂಬ ನಿರೀಕ್ಷೆಯ ಲ್ಲಿದ್ದೇವೆ ಎಂದು ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.
2019ರಲ್ಲಿ ಪ್ರಧಾನಿ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದರು. ಆಗ ಪೂರ್ವ ರಷ್ಯಾದಲ್ಲಿರುವ ಬ್ಲಾದಿವೋಸ್ಟಿಕ್ನಲ್ಲಿ ಆರ್ಥಿಕ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….