ತುಮಕೂರು, (ಆಗಸ್ಟ್.07): ಯಾವುದಾದರೂ ಸನ್ಮಾನ, ಗೌರವ ಎಂದರೆ ಕೆಲಸ ಕಾರ್ಯಬಿಟ್ಟು ದೌಡಾಯಿಸುವ ಜನಗಳ ನಡುವೆ, ತುಮಕೂರು ವಿಶ್ವವಿದ್ಯಾಲಯ ತಮಗೆ ಕೊಡಲು ತೀರ್ಮಾನಿಸಿದ್ದ ಗೌರವ ಡಾಕ್ಟರೇಟ್ ಪದವಿಯನು ನಟ ಸುದೀಪ್ ನಿರಾಕರಿಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ತುಮಕೂರು ವಿಶ್ವವಿದ್ಯಾನಿಲಯದ 17ನೇ ಘಟಿಕೋತ್ಸವದ ಸಂದರ್ಭದಲ್ಲಿ ನಟ ಸುದೀಪ್ಗೆ ಗೌರವ ಡಾಕ್ಟರೇಟ್ ನೀಡಲು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ವಿಚಾರವನ್ನು ಸುದೀಪ್ ಅವರ ಗಮನಕ್ಕೂ ತರಲಾಗಿತ್ತು.
ವಿಶ್ವ ವಿದ್ಯಾಲಯದ ನಿರ್ಧಾರಕ್ಕೆ ಧನ್ಯವಾದ ತಿಳಿಸಿರುವ ಸುದೀಪ್, “ಸಮಾಜದಲ್ಲಿ ತಮಗಿಂತ ಸೇವೆ ಮಾಡಿದ ಹಿರಿಯರಿದ್ದಾರೆ. ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸತ್ಕರಿಸಿ” ಎಂದು ಹೇಳಿ ವಿನಯದಿಂದಲೇ ಗೌರವ ಡಾಕ್ಟರೇಟ್ ಪದವಿ ನಿರಾಕರಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….