ಜೈಪುರ, (ಸೆ.1); ಅಕ್ರಮ ಸಂಬಂಧಕ್ಕಾಗಿ ಪತ್ನಿಯೋರ್ವಳು ಕೈ ಹಿಡಿದ ಪತಿಯನ್ನೇ ಕೊಲೆ ಮಾಡಿ ಶವವನ್ನು ಮನೆಯ ಶೌಚಾಲಯದಲ್ಲೇ ಹೂತಿಟ್ಟಿದ್ದ ಪ್ರಕರಣ ರಾಜಸ್ಥಾನವನ್ನು ಬೆಚ್ಚಿ ಬೀಳಿಸಿದೆ.
ಹನುಮಾನ್ಗಢದಲ್ಲಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹೆಂಡತಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದಿದ್ದಾಳೆ. ಬಳಿಕ, ಪತಿಯ ಶವವನ್ನು ಮನೆಯ ಶೌಚಾಲಯದಲ್ಲಿ ಹೂತಿಟ್ಟಿದ್ದಾಳೆ.
ಈ ವಿಷಯ ಬೆಳಕಿಗೆ ಬಂದಾಗ ಇಡೀ ಪ್ರದೇಶವೇ ಬೆಚ್ಚಿ ಬಿದ್ದಿದೆ. ಆ ಗ್ರಾಮದ ರೂಪರಾಮ್ 16 ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ. ಆತ ಬೇರೆ ಊರಿಗೆ ಹೋಗಿರಬಹುದು ಅಕ್ಕಪಕ್ಕದವರು ಅಂದುಕೊಂಡಿದ್ದರು. ಆದರೆ, ರೂಪರಾಮ್ ನಾಪತ್ತೆಯ ಹಿಂದೆ ಆತನ ಹೆಂಡತಿಯ ಕೈವಾಡವಿರಬಹುದು ಎಂದು ಆತನ ಪೋಷಕರಿಗೆ ಅನುಮಾನ ಬಂದಿತ್ತು.
ಹೀಗಾಗಿ, ಈ ಬಗ್ಗೆ ಮೃತ ರೂಪಾರಾಮ್ ಕುಟುಂಬಸ್ಥರು ಠಾಣೆಗೆ ದೂರು ಸಲ್ಲಿಸಿದ್ದರು. ಇಷ್ಟೆಲ್ಲಾ ಆದರೂ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ಕೋಪಗೊಂಡ ಕುಟುಂಬಸ್ಥರು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ದು, ಬಳಿಕ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಕೊನೆಗೆ ಈ ಬಗ್ಗೆ ತನಿಖೆ ಪ್ರಾರಂಭವಾಯಿತು.
ಪೊಲೀಸರು ರೂಪರಾಮ್ ಅವರ ಪತ್ನಿಯನ್ನು ಕರೆಸಿ ವಿಚಾರಣೆ ನಡೆಸಿದಾಗ, ಅವಳು ತನ್ನ ಅಪರಾಧವನ್ನು ಒಪ್ಪಿಕೊಂಡಳು. ರೂಪರಾಮ್ನನ್ನು ಕೊಲೆ ಮಾಡಿ ಆತನ ಶವವನ್ನು ಬಾತ್ ರೂಂನಲ್ಲಿ ಹೂತು ಹಾಕಿದ್ದೇವೆ. ನನ್ನ ಪ್ರಿಯಕರನ ಜೊತೆ ಸೇರಿ ಈ ಕೃತ್ಯ ಎಸಗಿದ್ದೇನೆ ಎಂದು ಹೇಳಿದಳು.
ಇದು ಬಹಿರಂಗವಾಗುತ್ತಿದ್ದಂತೆಯೇ ಪೊಲೀಸರು ಮನೆಯಲ್ಲಿದ್ದ ಶೌಚಾಲಯವನ್ನು ಅಗೆದು ರೂಪರಾಮ್ ಶವವನ್ನು ಹೊರತೆಗೆದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….