ಚಿಂತಾಮಣಿ, (ಸೆ.11); ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ದರೋಡೆ ಪ್ರಕರಣ ಮಾಸುವ ಮುನ್ನವೇ, ಕಿಟಕಿ ಕಂಬಿಗಳನ್ನು ಮುರಿದು ದರೋಡೆಗೆ ವಿಫಲ ಯತ್ನ ನಡೆಸಿ, ಮಾರಾಕಾಸ್ತ್ರಗಳನ್ನು ಸ್ಥಳದಲ್ಲಿ ಬಿಟ್ಟು ಕಳ್ಳರು ಪರಾರಿಯಾದ ಘಟನೆ ಚಿಂತಾಮಣಿ ತಾಲೂಕಿನ ತಳಗವಾರ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಸೋಮವಾರ ರಾತ್ರಿ ನಡೆದಿದೆ.
ವಿವಿಧ ಸಲಕರಣೆಗಳನ್ನು ಬಳಸಿ ಮೂಲಕ ಕಿಟಕಿಯ ಕಂಬಿಗಳನ್ನು ಕತ್ತರಿಸಿ ಒಳನುಗ್ಗಿದ ದರೋಡೆಕೊರರು ನೇರ ವಾಗಿ ಕ್ಯಾಶ್ ಕೌಂಟರ್‌ಮತ್ತು ಶೌಚಾಲಯಕ್ಕೆ ಸಂಪರ್ಕ ಇರುವಕೊಠಡಿಗೆನುಗ್ಗಿದ್ದಾರೆ. ಕೊಠಡಿ ಒಳಗಿನಿಂದ ಲಾಕ್ ಆಗಿದ್ದರಿಂದ ಅದನ್ನು ತೆರೆಯಲು ಸಾಧ್ಯವಾಗದೆ ಬರಿಗೈಲಿ ಪರಾರಿಯಾಗಿದ್ದಾರೆ.
ದರೋಡೆಕೋರರು ಕಿಟಕಿಯ ಕಂಬಿಗಳನ್ನು ಕತ್ತರಿಸಲು ಬಳಸಿದ್ದ ಸಲಕರಣೆಗಳು, ಲಾಂಗ್ ಸೇರಿದಂತೆ ಇತರೆ ಮಾರಕಾಸ್ತ್ರಗಳನ್ನು ಬ್ಯಾಂಕ್ ಪಕ್ಕದ ಮರದ ಬಳಿ ಎಸೆದು ಹೋಗಿದ್ದಾರೆ.
ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್‌ಪೆಕ್ಟ್ ಶಿವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….