ಕೋಲಾರ: ಪಿತೃಪಕ್ಷದ ಪೂಜೆಯ ವೇಳೆ ಹೆಚ್ಚೇನು ದಾಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಜಂಗಾಲಹಳ್ಳಿಯಲ್ಲಿ ನಡೆದಿದೆ.
60 ವರ್ಷದ ವೆಂಕಟಸ್ವಾಮಿ ಜೇನು ದಾಳಿಗೆ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಗ್ರಾಮದ ಅರಳಿ ಮರ ಬಳಿಯ ಸ್ಮಶಾನದ ಬಳಿ ಪಿತೃಪಕ್ಷ ಪೂಜೆ ನಡೆಸುತ್ತಿದ್ದ ವೇಳೆ ಒಂದೇ ಕುಟುಂಬದ ಆರು ಜನರ ಮೇಲೆ ಹೆಚ್ಚೇನು ದಾಳಿ ನಡೆಸಿದೆ. ಪೂಜೆ ವೇಳೆ ಸಾಂಬ್ರಾಣಿ ಹೊಗೆ ತಗುಲಿ ಹೆಚ್ಚೇನು ದಾಳಿ ಮಾಡಿವೆ.
ಈ ವೇಳೆ ಶಾಮಣ್ಣ, ಸುಂದರ್ ರಾಜ್, ಕಾರ್ತಿಕ್, ಶ್ರೀನಿವಾಸ್, ವೆಂಕಟಗಿರಿಯಪ್ಪಗೆ ಗಾಯಗಳಾಗಿದೆ.
ಹೆಚ್ಚೇನು ದಾಳಿಯ ಬಳಿಕ ಎಲ್ಲರನ್ನೂ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ವೆಂಕಟಸ್ವಾಮಿ ಗಂಭೀರ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.