Darshan ಪರ ಸಿವಿ ನಾಗೇಶ್ ಅವರ ಪ್ರಬಲ ವಾದಕ್ಕೆ ಕೆಲ ಖಾಸಗಿ ಸುದ್ದಿ ವಾಹಿನಿಗಳು ಶಾಕ್..!

ಬೆಂಗಳೂರು: ಅಶ್ಲೀಲ ಸಂದೇಶ ಕಳಸಿದ ಕಾರಣ ವ್ಯಕ್ತಿಯೋರ್ವನ ಹತ್ಯೆ ಆರೋಪದ ಅಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Darshan) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, ನಾಳೆ (ಶನಿವಾರ) ಮಧ್ಯಾಹ್ನ 12-30ಕ್ಕೆ ಮುಂದೂಡಿ ಆದೇಶಿಸಿದೆ.

ದರ್ಶನ್ ಜಾಮೀನು ಅರ್ಜಿಯ ವಿಚಾರಣೆಯ 57ನೇ ಸಿಸಿಹೆಚ್ ಕೋರ್ಟ್‌ನ ನ್ಯಾ.ಜೈಶಂಕರ್ ಅವರು ದರ್ಶನ್ (Darshan) ಪರ ವಕೀಲರ ವಾದ ಆಲಿಸಿ ಈ ಆದೇಶ ನೀಡಿದ್ದಾರೆ.

ದರ್ಶನ್ (Darshan) ಪರ ಪ್ರಬಲ ವಾದ ಮಂಡಿಸಿದ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ಅವರು ದರ್ಶನ್ ಅವರೇ ಕೊಲೆ ಮಾಡಿದ್ದಾರೆ ಎಂಬಂತೆ ಬಿಂಬಿಸಿದವರನ್ನು ತಬ್ಬಿಬ್ಬು ಮಾಡುವಂತೆ ಮಾಧ್ಯಮ ವರದಿ ಆಧಾರ ಮೇಲೆ ಕೋರ್ಟ್ ಆದೇಶ ನೀಡುವುದಿಲ್ಲ ಎಂಬ ನಂಬಿಕೆ ಇದೆ ಎಂಬ ಸುಪ್ರೀಂಕೋರ್ಟ್‌ನ ಎರಡು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಮಾಧ್ಯಮಗಳು ದರ್ಶನ್ (Darshan) ಅವರನ್ನು ದೋಷಿ ಎಂದು ತೀರ್ಪು ನೀಡಿ, ಜೀವಾವಧಿ, ಮರಣದಂಡನೆ ಶಿಕ್ಷೆ ವಿಧಿಸುವುದು ಮಾತ್ರ ಬಾಕಿಯಿದೆ ಎಂದು ದರ್ಶನ್ ಪ್ರಕರಣದಲ್ಲಿ ಕೆಲ ಖಾಸಗಿ ಸುದ್ದಿವಾಹಿನಿಗಳ ಅತಿರೇಕದ ವರ್ತನೆ ಕುರಿತು ನಾಗೇಶ್ ಅವರು ವಿವರಿಸಿದರು.

ಅಲ್ಲದೆ ದೋಷಾರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಗೂ ಮುನ್ನವೇ ಕೆಲವು ಅಂಶಗಳು ಸೋರಿಕೆಯಾಗಿವೆ. ಹೀಗಾಗಿ, ಕೋರ್ಟ್ ತನಿಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂದು ಕೋರಿದ್ದಾರೆ.

ನಾಯಿ ಕಚ್ಚಿದ ಗುರುತು

ಪ್ರಕರಣದ ತನಿಖೆ ಸೂಕ್ತ ರೀತಿಯಲ್ಲಿ ಮಾಡಿಲ್ಲ. ಮೃತ ವ್ಯಕ್ತಿಗೆ ನಾಯಿಗಳು ಕಚ್ಚಿ ಆದ ಗಾಯವನ್ನು ಮಾಧ್ಯಮಗಳು ಹಲ್ಲೆ ಎಂದು ಬಿಂಬಿಸುವ ಕೆಲಸ ಮಾಡಲಾಗಿದೆ. ಪೊಲೀಸರೇ ಸಾಕ್ಷ್ಯಾಗಳನ್ನು ಸೃಷ್ಟಿಸಿದಂತಿದೆ. ಪೊಲೀಸರ ತನಿಖಾ ವರದಿ ಸಾಕಷ್ಟು ಲೋಪಗಳಿಂದ ಕೂಡಿದೆ. ರೇಣುಕಾಸ್ವಾಮಿ ಹತ್ಯೆ ಜೂ.8ರಂದು ನಡೆದಿದ್ದು, ಜೂ.9ರಂದು ಪಟ್ಟಣಗೆರೆ ಶೆಡ್‌ಗೆ ಹೋಗಿದ್ದ ಪೊಲೀಸರು ಅಂದೇ ಅನೇಕ ಸಾಕ್ಷಿಗಳನ್ನು ರಿಕವರಿ ಮಾಡಿದ್ದರು.

ಶೆಡ್ ನಲ್ಲಿ ಹಗ್ಗ ನೀರಿನ ಬಾಟಲ್, ಮರದ ಕೊಂಬೆ, ಲಾಠಿ ರಿಕವರಿ ಮಾಡಿದ್ದಾರೆ. ಜೂ.10ರಂದು ಕೆಲ ಆರೋಪಿ, ಪ್ರತ್ಯಕ್ಷದರ್ಶಿಗಳ ಸ್ವಇಚ್ಚಾ ಹೇಳಿಕೆ ದಾಖಲಿಸಲಾಗಿದೆ. ಜೂ.12ರಂದು ರಿಕವರಿ ಅಂತಾ ಚಾರ್ಜ್ ಶೀಟ್‌ನಲ್ಲಿ ತೋರಿಸಿದ್ದಾರೆ. ತನಿಖೆಯ ಪಂಚನಾಮೆ ಒಂದಕ್ಕೊಂದು ಸಾಮ್ಯತೆ ಇಲ್ಲ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದರು.

ಮೂರು ದಿನಗಳ ಕಾಲ ಪೊಲೀಸರು ಸಾಕ್ಷಿಗಳನ್ನು ಯಾಕೆ..?

ಜೂ.11ರಂದು ದರ್ಶನ್ ಪೊಲೀಸರಿಗೆ ಶರಣಾಗಿದ್ದರು. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಪೊಲೀಸರು ಶೆಡ್ ಜೂ.9ರಂದು ಬಂದು ಅಂದೇ ಕೆಲ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಶೆಡ್ ಸೆಕ್ಯುರಿಟಿ ಗಾರ್ಡ್ CRPC 164 ಹೇಳಿಕೆಯಲ್ಲಿದೆ. ಅಂದು ಮಧ್ಯಾಹ್ನದ ವರೆಗೆ ಯಾವುದೇ ಬೆಳವಣಿಗೆ ಆಗಿರಲಿಲ್ಲ.

ಇನ್ನು ಆರೋಪಿ ಪ್ರದೇಷ್, ಪಿಎಸ್‌ಐ ವಿನಯ್ ನೊಂದಿಗೆ ವಾಟ್ಸಾಪ್ ಕಾಲ್ ಮಾಡಿ ಮಾತನಾಡಿದ್ದಾರೆ. ಹಣಕಾಸಿನ ವಿಚಾರಕ್ಕೆ ಗಲಾಟೆ ಆಗಿ ಕೊಲೆ ಆಗಿದೆ ಎಂದಿದ್ದಾರೆ. ಪಿಎಸ್ ಐ ಹೇಳಿಕೆಯಲ್ಲಿ ಜೂ.8 ಅಂತಾ ಮಾಹಿತಿ ಇದೆ.

ಜೂ. 12ರಂದು ರಕ್ತದ ಕಲೆ ಇದ್ದ ವಸ್ತುಗಳನ್ನು ರಿಕವರಿ ಮಾಡಲಾಗಿದೆ ಎಂದು ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಹಾಗಿದ್ದರೆ ಜೂ.8 ರಿಂದ ಜೂ. 12ರವರೆಗೂ ಯಾಕೆ ಪೊಲೀಸರು ಸಾಕ್ಷ್ಯಾಗಳನ್ನು ಸೀಜ್ ಮಾಡಿಲ್ಲ? ಮೂರು ದಿನಗಳ ಕಾಲ ಪೊಲೀಸರು ಸಾಕ್ಷಿಗಳನ್ನು ಯಾಕೆ ಮುಟ್ಟಿರಲಿಲ್ಲ.?

ಇದನ್ನೂ ಓದಿ; ದರ್ಶನ್ ಬಿಟ್ರೆ ನಿಮಗೆ ಹಾಕ್ಲಿಕೆ ಬೇರೆ ಸಬ್ಜೆಕ್ಟ್ ಇಲ್ವಾ..? ಟಿವಿ ಚಾನಲ್ ಬಗ್ಗೆನೇ ಅಸಹ್ಯ ಬರುತ್ತೆ; ಕೆಎಸ್ ಈಶ್ವರಪ್ಪ ಗರಂ402519.jpgದರ್ಶನ್ ಬಿಟ್ರೆ ನಿಮಗೆ ಹಾಕ್ಲಿಕೆ ಬೇರೆ ಸಬ್ಜೆಕ್ಟ್ ಇಲ್ವಾ..? ಟಿವಿ ಚಾನಲ್ ಬಗ್ಗೆನೇ ಅಸಹ್ಯ ಬರುತ್ತೆ; ಕೆಎಸ್ ಈಶ್ವರಪ್ಪ ಗರಂ

ಜೂ.11ರಂದು ದರ್ಶನ್ ಬಂಧನವಾಗಿದೆ. ಜೂ.12ರಂದು ದರ್ಶನ್ ಸ್ವಚ್ಛಾ ಹೇಳಿಕೆಯಂತೆ, ರಕ್ತದ ಕಲೆ ಇರುವ ದರ್ಶನ್ ಚಪ್ಪಲಿಯನ್ನು ರಿಕವರಿ ಮಾಡಲಾಗಿದೆ. ಆದರೆ ಪೊಲೀಸರು ಚಾರ್ಜ್ ಶೀಟ್‌ನಲ್ಲಿ ಶೂ ರಿಕವರಿ ಅಂತಾ ಇದೆ. ಜೂ.14 ಮತ್ತು ಜೂ.15 ರಂದು ರಿಕವರಿ ಮಾಡಲಾಗಿದೆ ಎಂದು ದೋಷಾರೋಪಟ್ಟಿಯಲ್ಲಿದೆ. ಅಲ್ಲಿಯವರೆಗೆ ಪೊಲೀಸರು ಯಾಕೆ ರಿಕವರಿ ಮಾಡಿಲ್ಲ? ಬೆಳಗ್ಗೆ ಸಿಗದಿದ್ದು ಪಂಚನಾಮೆ ವೇಳೆ ಸಿಕ್ಕಿತಂತೆ’ ಎಂದು ಲೇವಡಿ ಮಾಡಿದರು ಸಿವಿ ನಾಗೇಶ್. ದರ್ಶನ್ ಅವರ ಸ್ವಇಚ್ಛಾ ಹೇಳಿಕೆಯನ್ನೇ ಚಾರ್ಜ್‌ ಶೀಟ್‌ನಲ್ಲಿ ಬದಲಾಯಿಸಲಾಗಿದೆ. ತನಿಖೆಯಲ್ಲಿ ಹಂತ-ಹಂತವಾಗಿ ಪೊಲೀಸರ ಲೋಪ ಕಂಡುಬರುತ್ತಿದೆ.

ಪೊಲೀಸರ ಮಾಡಿರುವ ತನಿಖೆಯ ಅಂಶಗಳೆಲ್ಲಾ ಮೀಡಿಯಾಗಳಲ್ಲಿ ಟ್ರಯಲ್ ಆಗಿದೆ. ಮೀಡಿಯಾಗಳಿಗೆ ಹೇಗೆ ಮಾಹಿತಿ ಸೋರಿಕೆಯಾಗಿದೆ. ಕೆಲ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ಮೀಡಿಯಾಗಳಲ್ಲಿ ಡಿಬೇಟ್ ಮಾಡಲಾಗಿದೆ. ಮೀಡಿಯಾಗಳಲ್ಲಿ ಬರುವ ಮಾಹಿತಿಗಳ ಪ್ರಕಾರ ತನಿಖೆ ಮಾಡಲು ಸಾಧ್ಯವಿಲ್ಲ.

ತನಿಖೆ ನಡೆಸದೇ ಒಂದೇ ದಿನದಲ್ಲಿ ಆರೋಪಿಗಳ ಹೇಳಿಕೆಯನ್ನು ದಾಖಲಿಸಿದ್ದು ಹೇಗೆ? ಪೊಲೀಸರೇ ಎಲ್ಲಾ ಸಾಕ್ಷ್ಯಾಗಳನ್ನು ಸೃಷ್ಟಿಸಿದ್ದಾರೆ. ಪೊಲೀಸರ ಪಂಚನಾಮೆ, ಮಹಜರ್, ಕಲೆ ಹಾಕಿರುವ ಸಾಕ್ಷ್ಯಾಗಳು ದಿನಾಂಕಗಳು ಒಂದೊಂಕ್ಕೊಂದು ತಾಳೆ ಆಗುತ್ತಿಲ್ಲ. ದರ್ಶನ್ ತೊಟ್ಟ ಬಟ್ಟೆಯನ್ನು ಕುಕ್ಕಿ ಕುಕ್ಕಿ ಒಗೆಯಲಾಗಿದೆ‌ ಹಾಗಾದರೆ ಸರ್ಪ್ ಹಾಕಿ ಕುಕ್ಕಿ ಕುಕ್ಕಿ ಒಗೆಯಲಾದ ಬಟ್ಟೆಯಲ್ಲಿ ರಕ್ತದ ಕಲೆ ಇರಲು ಸಾಧ್ಯವೆ..? ಎಂದು ಪ್ರಶ್ನಿಸಿರುವ ನಾಗೇಶ್ ಅವರು ತನಿಖೆಯಲ್ಲಿ ಲೋಪ ಅಂತಾ ಎನಿಸುತ್ತಿದೆ. ಇದು ಕ್ಲಾಸಿಕ್ ಇನ್ವೆಸ್ಟಿಗೇಷನ್ ಅಲ್ಲ ಕೆಟ್ಟ ರೀತಿಯ ತನಿಖೆ ಎಂದು ಪ್ರಬಲವಾಗಿ ವಾದಿಸಿದರು.

ರಾಜಕೀಯ

ಕನ್ನಡಿಗರ ಆಕ್ರೋಶಕ್ಕೆ‌ ಮಣಿದ ಮೋದಿ ಸರ್ಕಾರ: ಪ್ರಿಯಾಂಕ್ ಖರ್ಗೆ ಅಮೇರಿಕಾ ತೆರಳಲು ಗ್ರೀನ್ ಸಿಗ್ನಲ್

ಕನ್ನಡಿಗರ ಆಕ್ರೋಶಕ್ಕೆ‌ ಮಣಿದ ಮೋದಿ ಸರ್ಕಾರ: ಪ್ರಿಯಾಂಕ್ ಖರ್ಗೆ ಅಮೇರಿಕಾ ತೆರಳಲು ಗ್ರೀನ್

ಅಮೆರಿಕದ ಬಾಸ್ಟನ್ ನಗರದಲ್ಲಿ ನಡೆಯುತ್ತಿರುವ 'ಬಯೋ-2025' ಸಮಾವೇಶದಲ್ಲಿ ಭಾಗವಹಿಸಲು ತೆರಳಬೇಕಾಗಿದ್ದ ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge)

[ccc_my_favorite_select_button post_id="109689"]
ದೊಡ್ಡಬಳ್ಳಾಪುರ: ಕುಡಿಯುವ ನೀರಿಗೆ ಆದ್ಯತೆ, ಕಸಕ್ಕೂ ಮುಕ್ತಿ – ಡಿಕೆ ಶಿವಕುಮಾರ್ ಭರವಸೆ

ದೊಡ್ಡಬಳ್ಳಾಪುರ: ಕುಡಿಯುವ ನೀರಿಗೆ ಆದ್ಯತೆ, ಕಸಕ್ಕೂ ಮುಕ್ತಿ – ಡಿಕೆ ಶಿವಕುಮಾರ್ ಭರವಸೆ

ದೊಡ್ಡಬಳ್ಳಾಪುರ: “ಎತ್ತಿನಹೊಳೆ ಯೋಜನೆಯಲ್ಲಿ ಮೊದಲು ಕುಡಿಯಲು 14 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಇತರ ತಾಲೂಕಿಗೆ ನೀಡಬೇಕು. ಇದಾದ ನಂತರ ನಾವು ಕೆರೆ ತುಂಬಿಸಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar)

[ccc_my_favorite_select_button post_id="109700"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಮೊಬೈಲ್ ಜಾಸ್ತಿ ಬಳಸುತ್ತಾಳೆಂದು ಹೆಂಡತಿಯ ಕೊಂದ ಪತಿ..!l Murder

ಮೊಬೈಲ್ ಜಾಸ್ತಿ ಬಳಸುತ್ತಾಳೆಂದು ಹೆಂಡತಿಯ ಕೊಂದ ಪತಿ..!l Murder

ಹೆಂಡತಿ ಮೊಬೈಲ್ ಜಾಸ್ತಿ ಬಳಸುತ್ತಾಳೆಂದು ಸಿಟ್ಟಿಗೆದ್ದ ಪತಿ ಆಕೆಯನ್ನು ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ನಡೆದಿದೆ.

[ccc_my_favorite_select_button post_id="109624"]
ದೊಡ್ಡಬಳ್ಳಾಪುರ: ಬೈಕ್ಗೆ ಟ್ಯಾಂಕರ್ ಡಿಕ್ಕಿ.. ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರ: ಬೈಕ್ಗೆ ಟ್ಯಾಂಕರ್ ಡಿಕ್ಕಿ.. ಸವಾರನ ಸ್ಥಿತಿ ಗಂಭೀರ

ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ

[ccc_my_favorite_select_button post_id="109301"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]