ಬನ್ನೇರುಘಟ್ಟ: ಇಲ್ಲಿನ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರಿದ್ದ ಸಫಾರಿ ಮಿನಿ ಬಸ್‌ನ್ನು ಚಿರತೆ (leopard) ಏರಿ, ಪ್ರವಾಸಿಗರನ್ನು ಬೆಚ್ಚಿಬಿಳಿಸಿರುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ಬಸ್ಸಿನಲ್ಲಿದ್ದ ಪ್ರವಾಸಿಗರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದಾರೆ.
ಸಾಮಾನ್ಯವಾಗಿ ಚಿರತೆ (leopard) ಸಫಾರಿ ವೇಳೆ ಬಸ್ಸು, ಕಾರ್ ಬಳಿ ಬರುತ್ತವೆ. ಆದರೆ ನಿನ್ನೆ ಚಿರತೆ ಬಸ್ ಕಿಟಿಯ ಕಂಬಿಯನ್ನಿಡಿದು ಏರಿ ಪ್ರವಾಸಿಗರನ್ನು ಕಂಡು ಗುಟುರಿಟ್ಟಿದೆ.
ನಾನೂ ಬರುವೆ.. ಸಫಾರಿ ಬಸ್ ಏರಿದ ಚಿರತೆ..!#leopard #bannerughatta #LatestUpdates #Bengaluru #Bangalore pic.twitter.com/HeW49wqBYt
— Harithalekhani (@harithalekhani) October 7, 2024
ಬಸ್ ಮೇಲೆ ಚಿರತೆ ಅಚಾನಕ್ಕಾಗಿ ಎಗರಿರುವುದಲ್ಲದೇ ಕಿಟಕಿ ಮೂಲಕ ಒಳಪ್ರವೇಶಿಸಲೂ ಸಹ ಯತ್ನಿಸಿದೆ. ಈ ವೇಳೆ ಬಸ್ ನಲ್ಲಿದ್ದ ಪ್ರಯಾಣಿಕರು ಭಯಾತಂಕಗಳಿಂದ ಜೋರಾಕಿ ಕಿರುಚಾಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ಬಸ್ ನ ಎಲ್ಲಾ ಕಿಟಕಿಗಳಿಗೆ ಜಾಲರಿ ಅಳವಡಿಸಿರುವ ಕಾರಣ ಚಿರತೆ ಒಳ ಪ್ರವೇಶಿಸಲು ಸಾಧ್ಯವಾಗಿಲ್ಲ. ಈ ವೇಳೆ ಚಾಲಕ ಬಸ್ಸನ್ನು ನಿಧಾನವಾಗಿ ಚಲಿಸಿದರು, ಚಿರತೆ ಬಸ್ ಜೊತೆಯಲ್ಲಿಯೇ ಸಾಗಿದೆ.
ಈ ವಿಡಿಯೋವನ್ನು ಹಿಂದೆ ಬರುತ್ತಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕರು ಮೊಬೈಲ್ ಮೂಲಕ ಸೆರೆಹಿಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದೆ.