ಬೆಂಗಳೂರು: ನಟ ದರ್ಶನ್ (Darshan) ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಸಂಜೆ 6ಗಂಟೆಗೆ ಬಳ್ಳಾರಿಯಿಂದ ಬೆಂಗಳೂರಿಗೆ ಪತ್ನಿಯೊಂದಿಗೆ ಪ್ರಯಾಣ ಆರಂಭಿಸಿದ್ದಾರೆ.
ಹೈಕೋರ್ಟ್ ದರ್ಶನ್ (Darshan) ಅವರಿಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ದೊರೆತ ಅಪಾರ ಸಂಖ್ಯೆಯ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಲ್ಲದೆ ಬೆನ್ನಲ್ಲೇ ಕೆಲ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ.
ಅಂತೆಯೆ ಖ್ಯಾತ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ‘ಕಾಲಾಯ ತಸ್ಮೈ ನಮಃ’ ಎಂದು ಹೇಳಿರುವ ದೃಶ್ಯವಿದೆ. ಹಿನ್ನೆಲೆಯಲ್ಲಿ ದರ್ಶನ್ ಅವರ ಸೂಪರ್ ಹಿಟ್ ಚಿತ್ರ ‘ನವಗ್ರಹ’ದ ಫೇಮಸ್ ಮ್ಯೂಸಿಕ್ ಕೇಳಿಬಂದಿದೆ.
ಈ ಮೂಲಕ ಡಿಂಪಲ್ ಕ್ವೀನ್ ದರ್ಶನ್ (Darshan) ಬಿಡುಗಡೆಯ ಖುಷಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ; ಲೋ ಮಗಾ ನಮ್ ಬಾಸ್ ರಿಲೀಸ್ ಕಣಲೇ.. ದೇವ್ರು ರಿಲೀಸೋ..!; ಮುಗಿಲು ಮುಟ್ಟಿದ Darshan ಅಭಿಮಾನಿಗಳ ಸಂಭ್ರಮ| ವಿಡಿಯೋ
Darshan ಫ್ಯಾನ್ಸ್ ಖುಷ್
ದರ್ಶನ್‌ಗೆ ಬೇಲ್ ಸಿಕ್ಕ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಖುಷ್ ಆಗಿದ್ದಾರೆ. ದರ್ಶನ್ ಪರ ವಕೀಲರ ವಾದವನ್ನು ಪುರಸ್ಕರಿಸಿ ನ್ಯಾಯಾಧೀಶರು ಚಿಕಿತ್ಸೆಗಾಗಿ 6 ವಾರಗಳ ಜಾಮೀನು ಮಂಜೂರು ಮಾಡಿದ್ದಾರೆ.
ಜಾಮೀನು ಮಂಜೂರು ಮಾಡಿದೆ. ಈ ಸುದ್ದಿ ದರ್ಶನ್ (Darshan) ಅಭಿಮಾನಿಗಳಿಗೆ ದೀಪಾವಳಿ ಹಬ್ಬಕ್ಕೆ ಬಂಪರ್ ಉಡುಗೊರೆ ಸಿಕ್ಕಂತಾಗಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಈ ದಿನ ಡಿ ಬಾಸ್ ಹೆಸರಲ್ಲಿ ಸಂದೇಶಗಳು ಭಾರೀ ವೈರಲ್ ಆಗುತ್ತಿವೆ.
ಜಾಮೀನು ಮಂಜೂರು ಆಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸಿನಿಮಾ ಒಂದರಲ್ಲಿನ ಲೋ ಮಗಾ ನಮ್ ಬಾಸ್ ರಿಲೀಸ್ ಕಣಲೇ ಎಂಬ ವಿಡಿಯೋವನ್ನು ಶೇರ್ ಮಾಡುವ ಮೂಲಕ ದರ್ಶನ್ ಅಭಿಮಾನಿಗಳು ಫುಲ್ ಜೋರಾಗೇ ದೀಪಾವಳಿ ಹಬ್ಬ ಶುರು ಹಚ್ಚಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಡಿ ಬಾಸ್ ರಿಲೀಸ್‌ಗೆ ಸಂಬಂಧಪಟ್ಟ ಕೆಲವೊಂದು ಮೀಮ್ಸ್‌ಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು ಡಿ ಬಾಸ್ ಫ್ಯಾನ್ ಪೇಜ್‌ಗಳು ದರ್ಶನ್ ಅವರ ಸಿನಿಮಾದ ಕೆಲವೊಂದು ಫುಟೇಜ್‌ಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನಮ್ ಬಾಸ್ ಬರ್ತಿದ್ದಾರೆ ಎಂದು ಸಂಭ್ರಮಿಸುತ್ತಿದ್ದಾರೆ.