ನ್ಯೂಯಾರ್ಕ್: ಇತ್ತೀಚೆಗೆ ನಡೆದ ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಾಕ್ಷಣ ಎಕ್ಸ್ (ಟ್ವಿಟರ್) ಮಾಲೀಕ ಎಲಾನ್ ಮಸ್ಕ್ ಗೆ ಬಿಗ್ ಶಾಕ್ ಎದುರಾಗಿದೆ. ಮಸ್ಕ್ ಒಡೆತನದ ಪ್ರಸಿದ್ಧ ಸಾಮಾಜಿಕ ಜಾಲತಾಣ ಎಕ್ಸ್ ( ಟ್ವಿಟರ್) ಪ್ಲಾಟ್ ಫಾರಂ ಗೆ 1ಲಕ್ಷದ 15 ಸಾವಿರ ಮಂದಿ ಬಳಕೆದಾರರು ಗುಡ್ ಬೈ ಹೇಳಿದ್ದಾರೆ.
ಅಮೆರಿಕ ಎಲೆಕ್ಷನ್ ನಲ್ಲಿ ಎಲಾನ್ ಮಸ್ಕ್ ಅವರು ಡೋನಾಲ್ ಟ್ರಂಪ್ ಪರ ಎಕ್ಸ್ ಖಾತೆಯಲ್ಲಿ (ಈ ಮುಂಚೆ ಟ್ವಿಟರ್) ದೊಡ್ಡಮಟ್ಟದ ಪ್ರಚಾರ ನಡೆಸಿದ್ದರು. ಟ್ರಂಪ್ ಗೆಲುವಿನಲ್ಲಿ ಮಸ್ಕ್ ಪಾತ್ರ ಬಹಳ ಮಹತ್ವದ್ದಾಗಿತ್ತು. ಇದರ ಬೆನ್ನಲ್ಲೇ ನಿನ್ನೆ ಟ್ರಂಪ್ ಅವರು ಎಲಾನ್ ಮಸ್ಕ್ ಅವರನ್ನು ಸರ್ಕಾರದ ದಕ್ಷತೆಯ ಇಲಾಖೆಯನ್ನು ಮುನ್ನಡೆಸುವ ಜವಾಬ್ದಾರಿ ನೀಡಿದ್ದರು.
ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತ ಎಕ್ಸ್ ಬಳಕೆದಾರರು ಅಕೌಂಟ್ ಗಳನ್ನ ಡಿಆಕ್ಟಿವೇಟ್ ಮಾಡಿದ್ದಾರೆ. ಅಲ್ಲದೆ ಎಕ್ಸ್ ಗೆ ಗುಡ್ ಬೈ ಹೇಳಿ ‘ಬ್ಲೂ ಸ್ಕೈ, ಸಾಮಾಜಿಕ ಜಾಲತಾಣ ಪ್ಲಾಟ್ ಫಾರಂಗೆ ಸ್ಥಳಾಂತರಗೊಂಡಿದ್ದಾರೆ.
2022 ರಲ್ಲಿ ಎಲಾನ್ ಮಸ್ಕ್ ಟ್ವಿಟ್ಟರ್ ಸಂಸ್ಥೆ ಖರೀದಿಸಿದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಮಂದಿ ಎಕ್ಸ್ ಖಾತೆಗಳನ್ನ ಡಿಲೀಟ್ ಮಾಡಿ, ಇತರೆ ಸೋಷಿಯಲ್ ಮೀಡಿಯಾಗಳ ಮೊರೆ ಹೋಗಿದ್ದಾರೆ.
ಬ್ಲೂ ಸ್ಕೈ ಬಳಕೆದಾರರು ಹೆಚ್ಚಾಗಿದ್ದು 90 ದಿನಗಳಲ್ಲಿ ಬಳಕೆದಾರರ ಪ್ರಮಾಣ ದ್ವಿಗುಣವಾಗಿದೆ.
ದಿ ಗಾರ್ಡಿಯನ್ ನ್ಯೂಡ್ ಪೇಪರ್ ಕೂಡ ಎಕ್ಸ್ ನಿಂದ ಹೊರಬಂದಿದ್ದು, ಅಕೌಂಟ್ ಗಳನ್ನ ಡಿಲೀಟ್ ಮಾಡಲಾಗಿದೆ. 80 ಅಕೌಂಟ್ ಗಳನ್ನ ಹೊಂದಿರುವ ಗಾರ್ಡಿಯನ್ ಸಂಸ್ಥೆ 27ಮಿಲಿಯನ್ ಫಾಲೋವರ್ಸ್ ಹೊಂದಿದೆ ಎಂದು ವರದಿಯಾಗಿದೆ.