ಉಡುಪಿ; ಕಾಂತಾರ ಸಿನಿಮಾ ಶೂಟಿಂಗ್ ಮುಗಿಸಿ ತೆರಳುತ್ತಿದ್ದ ನೃತ್ಯ ಕಲಾವಿದರಿದ್ದ ವಾಹನ ಅಪಘಾತವಾಗಿ (Kantara bus accident) ಹಲವು ಮಂದಿ ಗಾಯಗೊಂಡಿದ್ದಾರೆ.
ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನ ತಪ್ಪಿಸುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ 407 ಮಿನಿ ಬಸ್ ಮೊಗಚಿ ಬಿದ್ದಿದೆ ಎಂದು ವರದಿಯಾಗಿದೆ.
20ಕ್ಕೂ ಹೆಚ್ಚು ನೃತ್ಯ ಕಲಾವಿದರು ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಚಾಲಕನ ಮೇಲೆ ಕೆಲ ನೃತ್ಯ ಕಲಾವಿದರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಚಾಲಕನ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚಾಲಕ ನಿರ್ಲಕ್ಷ್ಯದಿಂದ ಗಾಡಿ ಚಲಾಯಿಸಿದ್ದಾನೆ ಎಂದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳೀಯ ಚಾಲಕನ ಮೇಲೆ ಹಲ್ಲೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಅಕ್ರೋಶ ಹೊರ ಹಾಕಿದ್ದಾರೆ.