ಹೈದರಾಬಾದ್: ತಮ್ಮ ಪುಷ್ಪ-2 (Pushpa 2) ಚಿತ್ರ ನೋಡಲು ಬಂದು ಕಾಲ್ತುಳಿತಕ್ಕೆ ಬಲಿಯಾದ ಹೈದರಾಬಾದ್ ಮಹಿಳೆಯ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ ಶುಕ್ರವಾರ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಮಹಿಳೆಯ ಮಗ ಕೂಡ ಘಟನೆಯಲ್ಲಿ ಗಾಯ ಗೊಂಡಿದ್ದು, ಆತ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ.
ಘಟನೆಯ ವಿವರ: ಪುಷ್ಪ 2 ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದು, ಅದಕ್ಕೂ ಮುನ್ನ ಡಿ.4 ರಂದು ಪುಷ್ಪ 2 ತಂಡದವರು ಪ್ರೀಮಿಯರ್ ಶೋವನ್ನು ಆಯೋಜನೆ ಹಲವೆಡೆ ಆಯೋಜನೆ ಮಾಡಲಾಗಿತ್ತು.
ಈ ಶೋಗೆ ನಾಯಕ ಅಲ್ಲು ಅರ್ಜುನ್ ನಟಿ ರಶ್ಮಿಕಾ ಮಂದಣ್ಣ ಸೇರಿ ಹಲವಾರು ಭಾಗಿಯಾಗಿದ್ದರು.
ಹೈದರಾಬಾದ್ ನ ಸಂಧ್ಯಾ ಥಿಯೇಟರ್‌ನಲ್ಲಿ ನಲ್ಲಿ ಆಯೋಜಿಸಲಾಗಿದ್ದ ಪ್ರೀಮಿಯರ್ ಶೋ ಗೆ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಆಗಮಿಸಿದ್ದರು, ಈ ವೇಳೆ ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲೆಂದು ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.
ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಂದ್ರಪ್ರದೇಶದ ಆರ್‌ಟಿಸಿ ಕ್ರಾಸ್ ರಸ್ತೆಯ ಸಂಧ್ಯಾ ಥಿಯೇಟರ್ ಕೂಡ ಸಿನೆಮಾ ನೋಡಲು ಬಂದ ಬಂದಾಗ ಚಿತ್ರಮುಂದಿರದ ಮುಂಭಾಗ ಕಾಲ್ತುಳಿತ ಉಂಟಾಗಿದ್ದು, ನೂರಾರು ಜನರಿಗೆ ಗಾಯಗಳಾಗಿವೆ.
ರಾತ್ರಿ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ದಿಲ್‌ಸುಖ್‌ನಗರದ ರೇವತಿ (39) ಎಂಬ ಮಹಿಳಾ ಪ್ರೇಕ್ಷಕರು ಸಾವನ್ನಪ್ಪಿದ್ದಾರೆ.
ಮತ್ತೋರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ.