ದೊಡ್ಡಬಳ್ಳಾಪುರ: ರಾಜ್ಯ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ (SM Krishna) ಅವರು ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇಂದಿನಿಂದ 3 ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದ್ದು, ಇದೇ ವೇಳೆ ನಾಳೆ ಬುಧವಾರ (ಡಿಸೆಂಬರ್ 11) ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.
ಅಗಲಿದ ಹಿರಿಯ ನಾಯಕನಿಗೆ ದೊಡ್ಡಬಳ್ಳಾಪುರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್‌ಎಂ ಕೃಷ್ಣ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡರು ಪುಷ್ಪ ನಮನ ಸಲ್ಲಿದರು.
ಈ ವೇಳೆ ದೊಡ್ಡಬಳ್ಳಾಪುರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಪಿ ಜಗನ್ನಾಥ್, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ಕೆಪಿಸಿಸಿ ಸದಸ್ಯ ಹೇಮಂತ್ ರಾಜ್, ದೊಡ್ಡಬಳ್ಳಾಪುರ ಪ್ರಾಧಿಕಾರದ ನಿರ್ದೇಶಕ ಆಂಜನ ಮೂರ್ತಿ, ನಗರಸಭೆ ಸದಸ್ಯರಾದ ಆನಂದ್, ವಾಣಿ, ಶಿವಕುಮಾರ್, ಕಾಂತರಾಜ್, ಮುಖಂಡರಾದ ರೇವತಿ ಅನಂತ ರಾಮ್, ಜವಾಜಿ ರಾಜೇಶ್, ಮಂಜುನಾಥ್, ನಾಗರತ್ನಮ್ಮ, ಮಮತ, ಶೋಭ, ಮೋಸಿನಾ, ಅನಿತಾ, ಮಜೀಬ್ ಉನ್ನಿಸಾ ಮತ್ತಿತರರಿದ್ದರು.