ದೊಡ್ಡಬಳ್ಳಾಪುರ (Doddaballapura): ಬೆಸ್ಕಾಂ (Bescom) ನಗರ ಉಪ ವಿಭಾಗ ಮತ್ತು ಗ್ರಾಮಾಂತರ ಉಪ ವಿಭಾಗದ ವತಿಯಿಂದ ನಾಳೆ (ಜ.18) ರಂದು ಮಧ್ಯಾಹ್ನ 3 ಗಂಟೆಗೆ ಗ್ರಾಹಕರ ಕುಂದುಕೊರತೆ ಸಭೆಯನ್ನು ಕರೆಯಲಾಗಿದೆ.
ನಗರ ಉಪ ವಿಭಾಗದ ಸಭೆ ಎಪಿಎಂಸಿ ಮಾರುಕಟ್ಟೆ ಮುಂಭಾಗದ ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದು, (o&M-1, o&M-2, ಬಾಶೆಟ್ಟಿಹಳ್ಳಿ, ಮೆಳೇಕೋಟೆ ಕ್ರಾಸ್ ಶಾಖೆಯ ಗ್ರಾಹಕರು ಭಾಗವಹಿಸಬಹುದಾಗಿದೆ.
ಗ್ರಾಮಾಂತರ ವಿಭಾಗದ ಸಭೆ ಹಳೆ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟೀನ್ ಸಮೀಪದ ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ದೊಡ್ಡಬೆಳವಂಗಲ, ಸಾಸಲು, ಕನಸವಾಡಿ, ತೂಬಗೆರೆ ಶಾಖೆ ವ್ಯಾಪ್ತಿಯ ಗ್ರಾಹಕರು ಭಾಗವಹಿಸಬಹುದಾಗಿದೆ.
ಈ ಕುರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವಿನಯ್ ಕುಮಾರ್ ಹಾಗೂ ಮಂಜುನಾಥ್ ಪ್ರಕಟಣೆ ನೀಡಿದ್ದು, ಗ್ರಾಹಕರು ಸಭೆಗೆ ಹಾಜರಾಗಿ ವಿದ್ಯುತ್ ಕುರಿತಾದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.