ದೊಡ್ಡಬಳ್ಳಾಪುರ, (Doddaballapura): ಅಪರಿಚಿತ ವಾಹನ ಮೇಲರಿದ ಪರಿಣಾಮ (Accident) ಅಂಗನವಾಡಿ ಕಾರ್ಯಕರ್ತೆ ಸಾವನಪ್ಪಿರುವ ಘಟನೆ ತಾಲೂಕಿನ ಗುಂಡಮಗೆರೆ ಹೊಸಹಳ್ಳಿ ನಡುವಿನ ಕೆಇಬಿ ಬಳಿ ಸಂಭವಿಸಿದೆ
ಮೃತ ಅಂಗನವಾಡಿ ಕಾರ್ಯಕರ್ತೆಯನ್ನು ಶಾಮಲಾ ದೇವಿ (30 ವರ್ಷ) ಎಂದು ಗುರುತಿಸಲಾಗಿದೆ.
ಹೊಸಹಳ್ಳಿ ಸಮೀಪದ ಉಜ್ಜನಿ ಕಾಲೋನಿಯ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಸುತ್ತಿದ್ದ ಶ್ಯಾಮಲ ದೇವಿ ಅವರು ಕಂಟನಕುಂಟೆಯಲ್ಲಿ ವಾಸವಿದ್ದರು.
ಇಂದು ಶನಿವಾರವಾದ ಕಾರಣ ಅಂಗನವಾಡಿಯಲ್ಲಿ ಕರ್ತವ್ಯ ಮುಗಿಸಿ, ಕಂಟನಕುಂಟೆಯ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ, ಗುಂಡಮಗೆರೆ ಹೊಸಹಳ್ಳಿ ನಡುವಿನ ಕೆಇಬಿ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಈ ವೇಳೆ ನೆಲಕ್ಕೆ ಬಿದ್ದ ಶಾಮಲ ಅವರ ಮೇಲೆ ಹರಿದು ಪರಾರಿಯಾಗಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಶಾಮಲ ಅವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರಿಗೆ ಸವಾಲು
ಘಟನೆ ಕುರಿತು ತನಿಖೆ ಆರಂಭಿಸಿರುವ ಪೊಲೀಸರಿಗೆ ಪರಾರಿಯಾಗಿರುವ ವಾಹನವನ್ನು ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿದೆ.
ಅಪಘಾತ ಸಂಭವಿಸಿದ ವ್ಯಾಪ್ತಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಇಲ್ಲದೆ ಇರುವುದು, ಪ್ರತ್ಯಕ್ಷದರ್ಶಿಗಳು ಇಲ್ಲದೆ ಇರುವ ಕಾರಣ ವಾಹನ ಪತ್ತೆ ಮಾಡುವುದು ಸಮಸ್ಯೆಯಾಗಿದೆ ಎನ್ನಲಾಗಿದೆ.
ಈ ಕುರಿತು ತೀವ್ರ ತನಿಖೆ ಕೈಗೊಂಡಿರುವ ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ನೇತೃತ್ವದ ಪೊಲೀಸರು ಪರಾರಿಯಾಗಿರುವ ವಾಹನದ ಪತ್ತೆಗೆ ಬಲೆ ಬೀಸಿದ್ದಾರೆ.
ಮೂಲಗಳ ಅನ್ವಯ ಟ್ರಕ್ ಅಪಘಾತ ಮಾಡಿದೆ ಎಂದು ಪೊಲೀಸರು ಶಂಕಿಸಿದ್ದಾರೆಂದು ತಿಳಿದುಬಂದಿದೆ.