ದೊಡ್ಡಬಳ್ಳಾಪುರ, (Doddaballapura): ತಾಲ್ಲೂಕಿನ ಹುಲುಕುಡಿ (Hukukudi) ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ಇಂದು (ಫೆ.05) ವೀರಭದ್ರಸ್ವಾಮಿ ಮತ್ತು ಪ್ರಸನ್ನಭದ್ರಕಾಳಮ್ಮ ರಥೋತ್ಸವ ಮಧ್ಯಾಹ್ನ 11.50ಕ್ಕೆ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಥೋತ್ಸವದಲ್ಲಿ ಡೊಳ್ಳುಕುಣಿತ, ಪಟದ ಕುಣಿತ, ಬೊಂಬೆ ಮುಖವಾಡ, ಕಂಸಾಳೆ ನೃತ್ಯಗಳು ನಡೆಯಲಿವೆ.
ರಥೋತ್ಸವದ ಅಂಗವಾಗಿ ನಡೆಯುವ ಸಮಾರಂಭದ ದಿವ್ಯಸಾನಿಧ್ಯವನ್ನು ರಂಭಾಪುರಿ ಶಾಖಾ ಹಿರೇಮಠದ ಷ.ಬ್ರ.ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ.
ರಥೋತ್ಸವದ ಅಂಗವಾಗಿ ನಿಕಟ ಪೂರ್ವ ಶಾಸಕ ಟಿ.ವೆಂಕಟರಮಣಯ್ಯ ಅವರಿಂದ ಅನ್ನಸಂತರ್ಪಣೆ, ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ ಅವರಿಂದ ನೀರಿನ ಪೂರೈಕೆ, ಬಮೂಲ್ ನಿರ್ದೇಶಕ ಬಿಸಿ ಆನಂದ್ ಅವರಿಂದ ಮಜ್ಜಿಗೆ-ಪಾನಕ ವಿತರಣೆ ನಡೆಯಲಿದೆ.
ಕ್ಷೇತ್ರಕ್ಕೆ ದೊಡ್ಡಬಳ್ಳಾಪುರ ನಗರದಿಂದ ವಿಶೇಷ ಬಸ್ ವ್ಯವಸ್ಥೆ ಇರಲಿದೆ.