ನವದೆಹಲಿ (Operation Sindoora): ಪಾಕಿಸ್ತಾನ ಸಶಸ್ತ್ರ ಪಡೆಗಳು 2025 ರ ಮೇ 08 ಮತ್ತು 09 ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್ಗಳು ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿಕೊಂಡು ಅನೇಕ ದಾಳಿಗಳನ್ನು ನಡೆಸಿವೆ ಎಂದು ಭಾರತೀಯ ಸೇನೆ ಅಧಿಕೃತ ಪಡಿಸಿದೆ.
ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್ ಪಡೆಗಳು ಹಲವಾರು ಕದನ ವಿರಾಮ ಉಲ್ಲಂಘನೆಗಳನ್ನು (CFV) ಮಾಡಿವೆ.
ಪಾಕ್ ಕಡೆಯಿಂದ ಬಂದ ಡ್ರೋನ್ ದಾಳಿಗಳನ್ನು ಭಾರತೀಯ ಸೇನೆ ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಯಿತು ಮತ್ತು CFV ಗಳಿಗೆ ಸೂಕ್ತ ಉತ್ತರ ನೀಡಲಾಯಿತು ಎಂದು ತಿಳಿಸಿದೆ.
ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ. ಎಲ್ಲಾ ದುಷ್ಟ ಕ್ರಿಯೆಗೆ ಅಷ್ಟೇ ದಿಟ್ಟವಾಗಿ ಪ್ರತಿಕ್ರಿಯಿಸಲಾಗುವುದು.
ಈ ಕಾರ್ಯಾಚರಣೆಯಲ್ಲಿ ಯಾವುದೇ ಸಾವು-ನೋವು ಉಂಟಾಗಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.
ಈ ಕುರಿತಂತೆ ವಿಡಿಯೋ ಬಿಡುಗಡೆ ಮಾಡಿದೆ.