ಪುರಿ: ಇತಿಹಾಸ ಪ್ರಸಿದ್ಧ ಪುರಿ ಜಗನ್ನಾಥ (Puri Jagannath) ದೇವರ ಭವ್ಯ ‘ಬಹುದಾ ಯಾತ್ರೆ’ಯು ವಾದ್ಯಮೇಳಗಳೊಂದಿಗೆ ಶನಿವಾರ ಆರಂಭವಾಯಿತು.
‘ಪಹಾಂಡಿ’ ಆಚರಣೆಯೊಂದಿಗೆ ಗುಂಡಿಚಾ ದೇವಸ್ಥಾನದಿಂದ ಅದ್ದೂರಿಯಾಗಿ ಸಾಗಿತು. ಯಾತ್ರೆಯು

‘ಪಹಾಂಡಿ’ ಯಾತ್ರೆಯು ಶನಿವಾರ ಬೆಳಿಗ್ಗೆ 10.30ಕ್ಕೆ ಆರಂಭವಾಯಿತು. ವಿಶೇಷ ಪೂಜೆ ಹಾಗೂ ಮಂಗಳಾರತಿಯ ಬಳಿಕ, ತಾಲಧ್ವಜ ರಥದಲ್ಲಿ ಬಲಭದ್ರ, ದರ್ಪದಲನದಲ್ಲಿ ದೇವಿ ಸುಭದ್ರ ಹಾಗೂ ನಂದಿಘೋಷದಲ್ಲಿ ಜಗನ್ನಾಥ ದೇವರ ವಿಗ್ರಹಗಳನ್ನು ಇರಿಸಲಾಯಿತು.
ಅಲ್ಲಿಂದ 2.6 ಕಿ.ಮೀ ದೂರದಲ್ಲಿರುವ ಜಗನ್ನಾಥ ದೇವರ ಮೂಲಸ್ಥಾನ ಎನ್ನಲಾಗುವ ದೇವಸ್ಥಾನಕ್ಕೆ ರಥಗಳನ್ನು ಎಳೆದು, ಅಲ್ಲಿ ದೇವರನ್ನು ಮತ್ತೆ ಪ್ರತಿಷ್ಠಾಪಿಸಲಾಗುತ್ತದೆ. ಬಹುದಾ ಯಾತ್ರೆಗೆ ಲಕ್ಷಾಂತರ ಜನ ಭಕ್ತರು ಸೇರಿದ್ದರು.
‘ಗುಂಡಿಚಾ ದೇವಸ್ಥಾನದಲ್ಲಿದ್ದ ಚಕ್ರರಾಜ ಸುದರ್ಶನವನ್ನು ದೇವಿ ಸುಭದ್ರೆಯ ‘ದರ್ಪದಲನ’ ರಥದಲ್ಲಿ ಇರಿಸಲಾಯಿತು. ಸುದರ್ಶನವು ಭಗವಾನ್ ವಿಷ್ಣುವಿನ ಚಕ್ರಾಯುಧವಾಗಿದೆ.
ವಿಷ್ಣು ದೇವರನ್ನು ಪುರಿಯಲ್ಲಿ ಜಗನ್ನಾಥನನ್ನಾಗಿ ಆರಾಧಿಸಲಾಗುತ್ತದೆ’ ಎಂದು ಪಂಡಿತ್ ಸೂರ್ಯನಾರಾ ಯಣ ರಥಶರ್ಮಾ ತಿಳಿಸಿದರು.
VIDEO | Puri Jagannath Yatra: Bahuda Yatra concludes as all three chariots reach Shree Jagannath Temple.
— Press Trust of India (@PTI_News) July 5, 2025
(Full video available on PTI Videos – https://t.co/n147TvrpG7) pic.twitter.com/31vhDPN6i0
ಒಡಿಶಾ ಪೊಲೀಸರು ಹಾಗೂ ಸಿಎಪಿಎಫ್ ಸಿಬ್ಬಂದಿ ಸೇರಿದಂತೆ ಒಟ್ಟು 10,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಹಾಗೂ ಡೋನ್ ಕಣ್ಣಾವಲು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ
ಜೂನ್ 29ರಂದು ಗುಂಡಿಚಾ ದೇವಾಲಯದ ಬಳಿ ಧಾರ್ಮಿಕ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟು, 50 ಮಂದಿ ಗಾಯಗೊಂಡಿದ್ದರು, ಬಳಿಕ ಸ್ಥಳದಲ್ಲಿ ಭಾರಿ ಬಿಗಿ ಭದ್ರತೆ ಒದಗಿಸಲಾಗಿತ್ತು.