ದೊಡ್ಡಬಳ್ಳಾಪುರ: ನಗರಸಭೆ ಅಧ್ಯಕ್ಷ / ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 02, ಉಪಾಧ್ಯಕ್ಷ ಸ್ಥಾನಕ್ಕೆ 5 ನಾಮಪತ್ರ ಸಲ್ಲಿಕೆಯಾಗಿದೆ.
ನಗರಸಭೆ ಕಾರ್ಯದಲ್ಲಿ ಚುನವಣಾಧಿಕಾರಿಯಾದ ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಲಾಗಿದೆ.
ಹರಿತಲೇಖನಿಗೆ ದೊರೆತಿರುವ ಮಾಹಿತಿ ಅನ್ವಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಎಸ್.ಸುಧಾರಾಣಿ, ಕಾಂಗ್ರೆಸ್ ನಿಂದ ಎಸ್.ನಾಗವೇಣಿ ಸೇರಿ ಎರಡು ನಾಮಪತ್ರ ಸಲ್ಲಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ರಜನಿ, ಜೆಡಿಎಸ್ ನಿಂದ ಆದಿಲಕ್ಷ್ಮೀ, ಫರ್ಹಾನ್ ಖಾನ್, ಹಸೀನಾ ತಾಜ್, ಆರ್.ಪ್ರಭ ನಾಮಪತ್ರ ಸಲ್ಲಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಲ್ಲಿ ತೀವ್ರ ಪೈಪೋಟಿ: ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಿಂದ ಆದಿಲಕ್ಷ್ಮೀ, ಫರ್ಹಾನಾ ತಾಜ್, ಹಸೀನಾ ತಾಜ್, ಆರ್.ಪ್ರಭ ನಾಮಪತ್ರ ಸಲ್ಲಿಸಿದ್ದು ಆಂತರಿಕ ಗುದ್ದಾಟಕ್ಕೆ ಕಾರಣವಾಗಿದೆ.
ಈ ಕುರಿತಂತೆ ಜೆಡಿಎಸ್ ಕಚೇರಿಯಲ್ಲಿ ಸಭೆ ನಡೆಸಲಾಗುತ್ತಿದೆ ಎನ್ನಲಾಗಿದ್ದು, ಮಾತಿನ ಚಕಮಕಿ ತೀವ್ರವಾಗಿ ನಡೆಯುತ್ತಿದ್ದು ವರಿಷ್ಠರಿಗೆ ಸಂಕಷ್ಟ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಗಿ ಪೊಲೀಸ್ ಭದ್ರತೆ: ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕೈಗೊಂಡಿದ್ದು, ನಗರಸಭೆ ರಸ್ತೆಯಲ್ಲಿ ಬ್ಯಾರಿಕೇಟ್ ಹಾಕಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….