ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್ ಆತಂಕ ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಹಶೀಲ್ದಾರ್ ಅವರನ್ನು ಏಕಾಏಕಿ ವರ್ಗಾಯಿಸುವ ಮೂಲಕ ರಾಜ್ಯ ಸರ್ಕಾರ ತಾಲೂಕಿನ ಜನರಲ್ಲಿ ಮತ್ತಷ್ಟು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜೆಡಿಎಸ್ ಮುಖಂಡ ಹರೀಶ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ವರ್ಗಾವಣೆ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಮುಂದಿನ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆಯಿದ್ದು, ಸರ್ಕಾರವೇ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ವ್ಯವಸ್ಥೆ ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ.
ಹೊಸ ರೂಪಾಂತರಿ ಪ್ರಕರಣಗಳು ಹೆಚ್ಚಾಗುವ ನಿರೀಕ್ಷಿತ ಇರುವ ಹಿನ್ನೆಲೆಯಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಿಯಂತ್ರಣ ಕೊಠಡಿಗಳಲ್ಲಿನ ಸಿಬ್ಬಂದಿಗಳಿಗೆ ಆಲರ್ಟ್ ಆಗಿರುವಂತೆ ಸೂಚಿಸಿರುವುದು ನಿಜವೇ ಅಲ್ಲವೆ.
ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೋವಿಡ್ ಸೋಂಕಿನ ನಿರ್ವಹಣೆ, ನಿಯಂತ್ರಣದ ಕುರಿತು ಸಂಪೂರ್ಣ ಜವಬ್ದಾರಿ ಹೊತ್ತು ತಾಲೂಕಿನ ಸ್ಥಿತಿಗತಿ ಅರಿತಿದ್ದ ತಹಶೀಲ್ದಾರ್ ಅವರನ್ನು ರಾಜ್ಯ ಸರ್ಕಾರ ಏಕಾಏಕಿ ವರ್ಗಾವಣೆ ಮಾಡಿರುವುದು ಖಂಡನೀಯ.
ತಾಲೂಕಿಗೆ ನೂತನವಾಗಿ ಬರುವ ತಹಶೀಲ್ದಾರ್ ಅವರಿಗೆ ಸ್ಥಳೀಯ ಸ್ಥಿತಿಗತಿ ತಿಳಿಯಲು ಹಲವು ದಿನ ಬೇಕಾಗುತ್ತದೆ. ಆದರೆ ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಹೊಣೆ ರಾಜ್ಯ ಸರ್ಕಾರ ಹೊರುವುದೇ….? ಎಂದು ಹರೀಶ್ ಗೌಡ ಪ್ರಶ್ನಿಸಿದ್ದಾರೆ.
ಓಮಿಕ್ರಾನ್ ನಿಯಂತ್ರಣ ಎಂಬದು ಕೇವಲ ಮಾತಿನಲ್ಲಿರದೇ ಇಂತಹ ಸೂಕ್ಷ್ಮ ಸಂದರ್ಭದಲ್ಲಿ ತಹಶೀಲ್ದಾರ್ ವರ್ಗಾವಣೆ ಎಷ್ಟು ಸರಿ ಎಂಬ ಕನಿಷ್ಠ ಪ್ರಜ್ಞೆ ಸಚಿವರಿಗೆ, ಸರ್ಕಾರಕ್ಕೆ ಇರಬೇಕಿದೆ.
ತಾಲೂಕಿನಲ್ಲಿ ಸೋಂಕು ನಿಯಂತ್ರಣಕ್ಕೆ ಶ್ರಮಿಸಿ, ಕೋವಿಡ್ ಪರಿಕರ, ಆಸ್ಪತ್ರೆ, ವಿದ್ಯಾರ್ಥಿ ನಿಲಯ ಮತ್ತಿತರ ವಿಚಾರಗಳ ಕುರಿತು ತಾಲೂಕಿನ ಸಂಪೂರ್ಣ ಮಾಹಿತಿ ಇರುವ ಅಧಿಕಾರಿಯನ್ನು ವರ್ಗಾಯಿಸಿ. ಮುಂದೇನಾದರೂ ತಾಲೂಕಿನ ಜನತೆಗೆ ತೊಂದರೆ ಉಂಟಾದಲ್ಲಿ ರಾಜ್ಯ ಸರ್ಕಾರವೇ ನೇರಹೊಣೆಯೆಂದು ಹರೀಶ್ ಗೌಡ ಎಚ್ಚರಿಕೆ ನೀಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….