ದೊಡ್ಡಬಳ್ಳಾಪುರ : ಕರೊನಾ ಸೋಂಕಿನ ಕಾರಣ.ಘೋಷಿಸಲಾದ ಲಾಕ್ ಡೌನ್ ಯಶಸ್ವಿಯಾಗಿಸಲು ಶ್ರಮಿಸುತ್ತಿರುವ ಕರೊನಾ ವಾರಿಯರ್ಸ್ ಕಷ್ಟ ಸಹ ತೀವ್ರವಾಗಿದೆ.
ಲಾಕ್ ಡೌನ್ ಘೋಷಣೆಯಾದಾಗಿನಿಂದ, ಚೆಕ್ ಪೊಸ್ಟ್ ಗಳಲ್ಲಿ ವಾಹನಗಳನ್ನು ತಡೆಯಲು ನೇಮಿಸಿರುವ ಕಂದಾಯ,ಪೊಲೀಸ್,ಗ್ರಾಪಂ,ಸರ್ವೆ ಇಲಾಖೆಯ ಅಧಿಕಾರಿಗಳು ಬಿಸಿಲು,ಗಾಳಿ,ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ.
ಇದರ ನಡುವೆ,ಕಳೆದ ಕೆಲ ದಿನಗಳಿಂದ ಆರಂಭವಾಗಿರುವ ಮಳೆಯಿಂದಾಗಿ ಚೆಕ್ ಪೊಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಪಾಡು ಹೇಳತೀರದಾಗಿದೆ.
ಮಳೆ,ಬಿಸಿಲು,ಗಾಳಿ ಎನ್ನದೆ ಲಾಕ್ ಡೌನ್ ಯಶಸ್ವಿಗೆ ಶ್ರಮಿಸುತ್ತಿದ್ದರು.ಕೆಲವರು ಬೆಂಬಲ ನೀಡದೆ ಅನಾವಶ್ಯಕವಾಗಿ ರಸ್ತೆಗೆ ಇಳಿಯುತ್ತಾರೆಂಬುದು ಕರೊನಾ ವಾರಿಯರ್ಸ್ ಬೇಸರಕ್ಕೆ ಕಾರಣವಾಗಿದೆ.