ದೊಡ್ಡಬಳ್ಳಾಪುರ : ತಾಲೂಕಿನ ಹುಲುಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಪಾಳ್ಯ ಗ್ರಾಮದ ಸುಮಾರು 60 ವರ್ಷದ ವ್ಯಕ್ತಿಯೊಬ್ಬ ಸಾವನಪ್ಪಿದ್ದು,ಆತನಿಗೆ ಕರೊನಾ ಸೋಂಕು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
#ಹರಿತಲೇಖನಿಯೊಂದಿಗೆ ಈ ಕುರಿತು ಮಾತನಾಡಿರುವ ಅವರು,ಸೀಗೆಪಾಳ್ಯ ಮೂಲದ ಬೆಂಗಳೂರು ನಿವಾಸಿ ಸುಮಾರು 60 ವರ್ಷದ ವ್ಯಕ್ತಿ.ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರೋರ್ವರನ್ನು ನೋಡಲು ತೆರಳುವಾಗ ಸಾವನಪ್ಪಿದ್ದು,ತಪಾಸಣೆ ನಡೆಸಿದಾಗ ಆತನಲ್ಲಿ ಕರೊನಾ ಸೋಂಕು ದೃಡಪಟ್ಟಿದೆ.
ಕೆಲ ದಿನಗಳ ಹಿಂದಷ್ಟೆ ಈತ ಸ್ವಗ್ರಾಮವಾದ ದೊಡ್ಡಬಳ್ಳಾಪುರ ತಾಲ್ಲೂಕಿನ ಸೀಗೆಪಾಳ್ಯಕ್ಕು ಭೇಟಿ ನೀಡಿದ್ದು,ಈ ಹಿನ್ನೆಲೆಯಲ್ಲಿ ಆತನ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲು ಆದೇಶ ನೀಡಿರುವ ಜೊತೆಗೆ,ಕರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದಿದ್ದಾರೆ.
ಇತ್ತೀಚೆಗಷ್ಟೆ ತಾಲ್ಲೂಕಿನಲ್ಲಿ ಕಂಡು ಬಂದಿದ್ದ ಕರೊನಾ ಸೋಂಕಿತ ವ್ಯಕ್ತಿ ಗುಣಮುಖರಾಗುವ ಮೂಲಕ,ತಾಲೂಕಿನ ಜನತೆ ನೆಮ್ಮದಿ ನಿಟ್ಟಿಸಿರು ಬಿಡುವ ಕೆಲ ದಿನಗಳಲ್ಲೆ ಈ ಘಟನೆ ನಡೆದಿದ್ದು.ಮೃತ ವ್ಯಕ್ತಿ ದೊಡ್ಡಬಳ್ಳಾಪುರ ತಾಲೂಕಿಗೆ ಬಂದು ಯಾರ ಯಾರ ಸಂಪರ್ಕದಲ್ಲಿದ್ದ ಎಂಬ ಆತಂಕ ತಾಲೂಕಿನ ಜನತೆಯನ್ನು ಕಾಡುವಂತೆ ಮಾಡಿದೆ.
(ಸಾಂದರ್ಭಿಕ ಚಿತ್ರ ಬಳಸಲಾಗಿದೆ)