ದೊಡ್ಡಬಳ್ಳಾಪುರ : ಲಾಕ್ ಡೌನ್ ಸಡಿಲಗೊಳಿಸಿರುವ ಹಿನ್ನೆಲೆ,ಹೊರ ರಾಜ್ಯದಲ್ಲಿರುವ ಕನ್ನಡಿಗರು ರಾಜ್ಯಕ್ಕೆ ಮರಳುತ್ತಿದ್ದಾರೆ.
ಆದರೆ ವಿಪರ್ಯಾಸ.ರಾಜ್ಯಕ್ಕೆ ಮರಳುತ್ತಿರುವವರಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ,ಮಂಡ್ಯಗೆ ಕಾಡುತ್ತಿರುವಂತೆ ಮಹಾರಾಷ್ಟ್ರದಲ್ಲಿನ ಕರೊನಾ ಕಂಟಕ ದೊಡ್ಡಬಳ್ಳಾಪುರಕ್ಕು ಕಾಡಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದರ ಬೆನ್ನಲ್ಲೆ ಇತ್ತೀಚೆಗೆ ಮೃತಪಟ್ಟ ಸೀಗೆಪಾಳ್ಯದ ವ್ಯಕ್ತಿಯಲ್ಲಿ ಕರೊನಾ ಸೋಂಕು ದೃಡಪಟ್ಟು.ಆತನ ಸಂಪರ್ಕದಲ್ಲಿದ್ದವರಿಗೆ ನಡೆಸಲಾದ ಪರೀಕ್ಷೆ ವರದಿ ಶುಕ್ರವಾರ ಬರಲಿದೆ ಎನ್ನಲಾಗಿದೆ.ಅಲ್ಲದೆ,ಮಹಾರಾಷ್ಟ್ರದಿಂದ ತಾಲೂಕಿಗೆ ಕೆಲವರು ಬಂದಿದ್ದು,ಇವರಲ್ಲಿ ಕೆಲವರಿಗೆ ಕರೊನಾ ಸೋಂಕು ದೃಡಪಟ್ಟಿದೆ ಎಂಬ ಗಾಳಿಸುದ್ದಿ ತಾಲೂಕಿನ ಎಲ್ಲೆಡೆ ಹರಿದಾಡುತ್ತಿದೆ.
ಈ ಹಿನ್ನೆಲೆ ಎಲ್ಲರ ದೃಷ್ಟಿ ಶುಕ್ರವಾರದ ಕರೊನಾ ಬುಲೆಟಿನ್ ಮೇಲೆ ನೆಟ್ಟಿದೆ.ಶುಕ್ರವಾರದ ವರದಿಯಲ್ಲಿ ತಾಲೂಕಿನ ಹೆಸರು ಇರಬಾರದೆಂದು ಎಲ್ಲರೂ ದೇವರ ಮೊರೆ ಹೋಗುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪೇಜ್ ಲೈಕ್ ಮಾಡಿ,ಫಾಲೋ ಮಾಡಿ.????
https://www.facebook.com/harithalekhani5/