ದೊಡ್ಡಬಳ್ಳಾಪುರ : ಸೋಮವಾರ ಸಂಜೆ ಬೀಸಿದ ಭೀಕರ ಗಾಳಿಗೆ ಮರವೊಂದು ಉರುಳಿ ಬಿದ್ದ ಬಿದ್ದ ಪರಿಣಾಮ,ರಸ್ತೆಯಲ್ಲಿ ಸಾಗುತ್ತಿದ್ದ ಸರಕು ಸಾಗಾಣಿಕೆ ವಾಹನವೊಂದು ಜಖಂಗೊಂಡಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಬಳಿ ನಡೆದಿದೆ.
ಸೋಮವಾರ ಸಂಜೆ 5ಗಂಟೆಯ ವೇಳೆ,ಮಳೆ ಹಾಗೂ ಗಾಳಿ ಬೀಸಿದ ಪರಿಣಾಮ.ರಸ್ತೆ ಬದಿಯಲ್ಲಿದ್ದ ಮರ ಉರುಳಿ ಬಿದ್ದಿದ್ದು,ರಸ್ತೆಯ ಮೇಲೆ ಸಾಗುತ್ತಿದ್ದ ವಾಹನದ ಮೇಲೆ ಬಿದ್ದಿದೆ.ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ದೊಡ್ಡಬಳ್ಳಾಪುರ ಹಾಗೂ ದಾಬಸ್ ಪೇಟೆ ನಡುವಣ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿಯಲ್ಲಿ ಒಣಗಿದ ಮರಗಳಿದ್ದು,ಒಣಗಿದ ಕೊಂಬೆಗಳು ಗಾಳಿ,ಮಳೆಗೆ ರಸ್ತೆ ಮೇಲೆ ಬಿದ್ದು ಪ್ರಾಣಹಾನಿಗೆ ಕಾರಣವಾಗುತ್ತಿವೆ.ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರು ಸಂಬಂಸಿದ ಇಲಾಖೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಘಟನೆ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.