ದೊಡ್ಡಬಳ್ಳಾಪುರ : ಕರೊನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊರತೆ ಎದಿರುಸುತ್ತಿದ್ದ ಸ್ನೇಹ ಭಾರತಿ ಶಿಕ್ಷಣ ಸಂಸ್ಥೆಯ ಮಕ್ಕಳಿಗೆ,ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿಶ್ರೀನಿವಾಸ್ ಸ್ವಂತ ಹಣದಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ತಂದು ವಿತರಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ನಗರದ ಎಪಿಎಂಸಿ ಸಮೀಪದ ಸ್ನೇಹ ಭಾರತಿ ಶಿಕ್ಷಣ ಸಂಸ್ಥೆಯಲ್ಲಿನ ಸಿಬ್ಬಂದಿ ಹಾಗೂ,ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊರತೆಯಿರುವ ವಿಷಯ ಹರಿತಲೇಖನಿ ವೆಬ್ ನ್ಯೂಸ್ ಚಾನಲ್ ಗಮನಕ್ಕೆ ಬಂದಿತ್ತು.
ಈ ಕುರಿತಂತೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಅವರಿಗೆ ಕರೆಮಾಡಿ ಗಮನಕ್ಕೆ ತಂದ ಕೂಡಲೆ ಸ್ಪಂದಿಸಿದ ಅವರು, ಸ್ವಂತ ಹಣದಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಖರೀದಿಸಿ ಮಕ್ಕಳಿಗೆ ವಿತರಿಸಿದರು.ಅಲ್ಲದೆ ಮಕ್ಕಳಿಗೆ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಸಲಹೆ ನೀಡಿದರು.
ಈ ವೇಳೆ ಮುಖಂಡರಾದ ಶ್ರೀನಿವಾಸ್, ಸ್ನೇಹ ಭಾರತಿ ಶಿಕ್ಷಣ ಸಿಬ್ಬಂದಿ ಇದ್ದರು.