ದೊಡ್ಡಬಳ್ಳಾಪುರ : ದೇವಾಲಯದ ಬಾಗಿಲು ಒಡೆದಿರುವ ಕಳ್ಳರು ಹುಂಡಿಯನ್ನು ಹೊತ್ತೊಯ್ದಿರುವ ಘಟನೆ ತಾಲೂಕಿನ ನಾರನಹಳ್ಳಿಯಲ್ಲಿ ನಡೆದಿದೆ.
ನಾರನಹಳ್ಳಿ ಗ್ರಾಮದ ಅಮ್ಮಾಜಮ್ಮ ದೇವಾಲಯದಲ್ಲಿ ಇಡಲಾಗಿದ್ದ ಹುಂಡಿಯನ್ನು ಹೊತ್ತೊಯ್ದಿರುವ ಕಳ್ಳರು.ಊರಿನ ಹೊರವಲಯದ ನೀಲಗಿರಿ ತೋಪಿನಲ್ಲಿ ಹುಂಡಿ ಒಡೆದು ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ದೇವಾಲಯದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು,ಕಳೆದ ನಾಲ್ಕು ವರ್ಷದಿಂದ ಹುಂಡಿ ಒಡೆದಿರದ ಕಾರಣ,ಲಕ್ಷಾಂತರ ಹಣ ಹುಂಡಿಯಲ್ಲಿ ಇದ್ದಿರಬಹುದೆಂದು ಗ್ರಾಮದ ಮುಖಂಡ ನಾರನಹಳ್ಳಿ ಗೋವಿಂದರಾಜ್ ಹರಿತಲೇಖನಿಗೆ ತಿಳಿಸಿದ್ದಾರೆ.
ಘಟನೆ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.